No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

Toxic Movie Review: ಯಶ್ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ; ನೆಗಟಿವ್ ರಿವ್ಯೂ ವಿರುದ್ಧ ಅಭಿಮಾನಿಗಳ ಗರಂ!

kalpa News by kalpa News
August 26, 2026
in ಸಿನೆಮಾ
0
Toxic Movie Review first day yash fans response
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ‘ಟಾಕ್ಸಿಕ್’ ಸಿನಿಮಾ (Toxic Movie) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ‘ಕೆಜಿಎಫ್ ಚಾಪ್ಟರ್ 2’ ಬಳಿಕ ಸುಮಾರು ನಾಲ್ಕೂವರೆ ವರ್ಷಗಳ ನಂತರ ಯಶ್ ಮತ್ತೆ ಬೆಳ್ಳಿತೆರೆಗೆ ಆಗಮಿಸಿದ್ದು, ಅವರ ಮಾಸ್ ಮತ್ತು ಸ್ಟೈಲಿಶ್ ಅವತಾರವನ್ನು ಕಂಡು ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ, ದೇಶದ ಅನೇಕ ನಗರಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಬೆಳಗ್ಗಿನಿಂದಲೇ ಹಲವು ಚಿತ್ರಮಂದಿರಗಳ ಮುಂದೆ ಯಶ್ ಅಭಿಮಾನಿಗಳು ಜಮಾಯಿಸಿ ಸಂಭ್ರಮಿಸಿದ್ದಾರೆ. ಶಿಳ್ಳೆ, ಚಪ್ಪಾಳೆ, ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಸಿನಿಮಾಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣಗಳಲ್ಲಿ #Toxic ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದ್ದು, ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಶ್ ಅವರ ಮಾಸ್ ಮತ್ತು ಸ್ಟೈಲಿಶ್ ಲುಕ್, ಅವರ ನಟನೆ, ಚಿತ್ರದ ದೃಶ್ಯ ವೈಭವ, ಒಂದೊಂದು ಫ್ರೇಮ್ ಹಾಗೂ ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.PES Shivamogga

ಮೊದಲಾರ್ಧ ಹಾಗೂ ದ್ವಿತೀಯಾರ್ಧ ಎರಡೂ ವಿಭಿನ್ನ ರೀತಿಯ ಅನುಭವ ನೀಡುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿರ್ದೇಶನ, ಚಿತ್ರಕಥೆ, ತಾಂತ್ರಿಕ ಗುಣಮಟ್ಟ ಮತ್ತು ದೃಶ್ಯಗಳ ನಿರೂಪಣೆಗೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Toxic Movie : ತಮಿಳು, ಹಿಂದಿ, ಕನ್ನಡ ಪ್ರೇಕ್ಷಕರಿಂದಲೂ ಮೆಚ್ಚುಗೆ

ಚಿತ್ರಕ್ಕೆ ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ ತಮಿಳು ಮತ್ತು ಹಿಂದಿ ಭಾಷೆಯ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಯುವಕರು, ಯುವತಿಯರು ಸೇರಿದಂತೆ ವಿವಿಧ ವಯೋಮಾನದ ಪ್ರೇಕ್ಷಕರು ಮೊದಲ ದಿನವೇ ಚಿತ್ರಮಂದಿರಗಳಿಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.

ಚಿತ್ರದ ಅದ್ಧೂರಿ ಮೇಕಿಂಗ್ ಅನ್ನು ಹಾಲಿವುಡ್ ಸಿನಿಮಾಗಳ ಮಟ್ಟಕ್ಕೆ ಹೋಲಿಕೆ ಮಾಡುತ್ತಿರುವ ಕೆಲ ಪ್ರೇಕ್ಷಕರು, “ಇದನ್ನು ಕೇವಲ ಕನ್ನಡ ಸಿನಿಮಾ ಎಂದು ನೋಡಬೇಡಿ, ಅದ್ಧೂರಿ ಅಂತರರಾಷ್ಟ್ರೀಯ ಸಿನಿಮಾದ ಅನುಭವದೊಂದಿಗೆ ನೋಡಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

  • ಬಹುನಿರೀಕ್ಷಿತ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ
  • ಕೆಜಿಎಫ್-2 ಬಳಿಕ ನಾಲ್ಕೂವರೆ ವರ್ಷದ ನಂತರ ಮಾಸ್ ಅವತಾರದಲ್ಲಿ ಯಶ್ ಎಂಟ್ರಿ
  • ಮೊದಲ ದಿನವೇ ಥಿಯೇಟರ್‌ಗಳಲ್ಲಿ ಶಿಳ್ಳೆ, ಚಪ್ಪಾಳೆ, ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ
  • ಸಾಮಾಜಿಕ ಜಾಲತಾಣದಲ್ಲಿ #Toxic ಹ್ಯಾಷ್‌ಟ್ಯಾಗ್ ಟ್ರೆಂಡ್
  • ಯಶ್ ಅವರ ಮಾಸ್ ಎಂಟ್ರಿ, ಸ್ಟೈಲಿಶ್ ಲುಕ್ ಮತ್ತು ವಿಭಿನ್ನ ಶೇಡ್‌ಗಳ ನಟನೆಗೆ ಮೆಚ್ಚುಗೆ
  • ಮೊದಲಾರ್ಧ ಮಾಸ್, ದ್ವಿತೀಯಾರ್ಧದಲ್ಲಿ ಭಾವನಾತ್ಮಕ ಕಥೆ ಎಂದು ಪ್ರೇಕ್ಷಕರ ಪ್ರತಿಕ್ರಿಯೆ
  • ಯಶ್–ಕಿಯಾರಾ ಕೆಮಿಸ್ಟ್ರಿ ಮತ್ತು ‘ತಬಾಯಿ’ ಹಾಡಿಗೆ ಪ್ರೇಕ್ಷಕರ ಮೆಚ್ಚುಗೆ
  • ಕೆಲವು ತೆಲುಗು ಪಿಆರ್ ತಂಡಗಳಿಂದ ಉದ್ದೇಶಪೂರ್ವಕ ನೆಗೆಟಿವ್ ರಿವ್ಯೂ ಆರೋಪ; ಯಶ್ ಅಭಿಮಾನಿಗಳ ಆಕ್ರೋಶ
  • “ನೆಗಟಿವ್ ಟಾಕ್ ನಂಬಬೇಡಿ, ಥಿಯೇಟರ್‌ಗೆ ಬಂದು ನೀವೇ ಸಿನಿಮಾ ನೋಡಿ” ಎಂದು ಫ್ಯಾನ್ಸ್ ಕರೆ
  • ಬೆಂಗಳೂರು ಸೇರಿ ಬೀದರ್, ಹುಬ್ಬಳ್ಳಿ, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಅದ್ಧೂರಿ ಸ್ವಾಗತ
  • ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆಯ ನಿರೀಕ್ಷೆ; ಮುಂದಿನ ದಿನಗಳಲ್ಲಿ ನಿಜವಾದ ಚಿತ್ರಣ ಸ್ಪಷ್ಟವಾಗಲಿದೆ

‘ನೆಗಟಿವ್ ರಿವ್ಯೂ’ ಆರೋಪ; ಯಶ್ ಅಭಿಮಾನಿಗಳ ಆಕ್ರೋಶ

ಇನ್ನೊಂದೆಡೆ, ‘ಟಾಕ್ಸಿಕ್’ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನೆಗೆಟಿವ್ ವಿಮರ್ಶೆಗಳು ಹರಿದಾಡುತ್ತಿರುವುದಕ್ಕೆ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕೆಲವು ತೆಲುಗು ಪಿಆರ್ ತಂಡಗಳು ಉದ್ದೇಶಪೂರ್ವಕವಾಗಿ ನೆಗೆಟಿವ್ ಟಾಕ್ ಹರಡುತ್ತಿವೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.

ಈ ಸಂಬಂಧದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಯಶ್ ಅಭಿಮಾನಿಗಳು, “ಯಾವುದೇ ನೆಗೆಟಿವ್ ಪ್ರಚಾರವನ್ನು ನಂಬಬೇಡಿ. ಸ್ವತಃ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ನಂತರ ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳಿ” ಎಂದು ಕರೆ ನೀಡಿದ್ದಾರೆ.

1947ರ ಗೋವಾ ಹಿನ್ನೆಲೆಯ ಕಥೆ

ಚಿತ್ರದ ಕಥೆ 1947ರ ಕಾಲಘಟ್ಟದ ಗೋವಾ ಹಿನ್ನೆಲೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಪೋರ್ಚುಗೀಸರ ಆಳ್ವಿಕೆಯ ಕಾಲವನ್ನು ಹಿನ್ನೆಲೆಯಾಗಿ ಹೊಂದಿರುವ ಕಥೆಯಲ್ಲಿ ಪ್ರೀತಿ, ಸಂಬಂಧಗಳು, ಅಧಿಕಾರದ ಸಂಘರ್ಷ ಹಾಗೂ ಹಿಂಸೆಯ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ.

ಚಿತ್ರದಲ್ಲಿ ಯಶ್ ಅವರ ಭರ್ಜರಿ ಎಂಟ್ರಿ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಯಶ್ ಅವರ ವಿಭಿನ್ನ ಶೇಡ್‌ಗಳ ಪಾತ್ರ ನಿರ್ವಹಣೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಟಿ ಕಿಯಾರಾ ಮತ್ತು ಯಶ್ ಅವರ ಕೆಮಿಸ್ಟ್ರಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಾಮಾಜಿಕ ಜಾಲತಾಣದ ಅಭಿಪ್ರಾಯಗಳಿಂದ ತಿಳಿದುಬರುತ್ತಿದೆ.

‘ತಬಾಯಿ’ ಹಾಡಿಗೂ ಮೆಚ್ಚುಗೆ

ಚಿತ್ರದ ‘ತಬಾಯಿ’ ಹಾಡು ಕೂಡ ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಮೊದಲಾರ್ಧದಲ್ಲಿ ಮಾಸ್ ದೃಶ್ಯಗಳು ಮತ್ತು ಹಿಂಸೆಯ ಅಂಶಗಳು ಹೆಚ್ಚಿದ್ದರೆ, ದ್ವಿತೀಯಾರ್ಧದಲ್ಲಿ ಕಥೆ ಭಾವನಾತ್ಮಕ ತಿರುವು ಪಡೆಯುತ್ತದೆ ಎನ್ನಲಾಗುತ್ತಿದೆ.

ಕುಟುಂಬದ ಸಂಬಂಧಗಳು, ತಂದೆ-ಮಗನ ನಡುವಿನ ಬಾಂಧವ್ಯ, ಕುಟುಂಬಗಳ ನಡುವಿನ ಏರಿಳಿತ ಹಾಗೂ ಇಂದಿನ ಜೆನ್‌ ಜೀ ತಲೆಮಾರಿನ ಮನಸ್ಥಿತಿಯನ್ನು ಚಿತ್ರದಲ್ಲಿ ವಿಭಿನ್ನವಾಗಿ ತೆರೆದಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.Kumadvathi College Shikariura

ದ್ವಿತೀಯಾರ್ಧಕ್ಕೆ ಹೆಚ್ಚಿದ ಮೆಚ್ಚುಗೆ

ಚಿತ್ರದ ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಹಾಗೂ ಯಶ್ ಅವರ ವಿಭಿನ್ನ ಶೇಡ್‌ಗಳ ನಟನೆ ಹೆಚ್ಚು ಇಷ್ಟವಾಯಿತು ಎಂದು ಕೆಲವು ಪ್ರೇಕ್ಷಕರು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ನಿರಂತರವಾಗಿ ಗುನುಗುವಂತಹ ಹಾಡುಗಳು ಕಡಿಮೆಯಿದ್ದರೂ, ಕಥೆಯ ನಿರೂಪಣೆ, ಪಾತ್ರಗಳ ನಡುವಿನ ಸಂಘರ್ಷ ಮತ್ತು ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎನ್ನಲಾಗಿದೆ.

ಆದರೆ ಚಿತ್ರದ ಹೆಚ್ಚಿನ ವೈಲೆನ್ಸ್ ದೃಶ್ಯಗಳು ಹಾಗೂ ಕೆಲವು ಅಂಶಗಳು ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸುವವರಿಗೆ ಕೊಂಚ ಮುಜುಗರ ಉಂಟುಮಾಡಬಹುದು ಎಂಬ ಅಭಿಪ್ರಾಯವನ್ನೂ ಕೆಲ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಅದ್ಧೂರಿ ಸ್ವಾಗತ

ಬೆಂಗಳೂರು ನಗರದ ಪ್ರಮುಖ ಚಿತ್ರಮಂದಿರಗಳಲ್ಲದೆ ಬೀದರ್, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ‘ಟಾಕ್ಸಿಕ್’ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಥಿಯೇಟರ್‌ಗಳ ಮುಂದೆ ಪಟಾಕಿ ಸಿಡಿಸಿ, ಯಶ್ ಅವರ ಕಟೌಟ್‌ಗಳಿಗೆ ಹೂಮಾಲೆ ಹಾಕಿ ಹಾಗೂ ಸಂಭ್ರಮಾಚರಣೆ ನಡೆಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಯಶ್ ಅಭಿಮಾನಿಗಳಿಗೆ ಚಿತ್ರದ ಬಿಡುಗಡೆ ನಿಜಕ್ಕೂ ಹಬ್ಬದಂತಾಗಿದೆ.

ಬಾಕ್ಸ್ ಆಫೀಸ್ ಬಗ್ಗೆ ಹೆಚ್ಚಿದ ನಿರೀಕ್ಷೆ

ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿರುವ ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಕುರಿತು ಈಗಾಗಲೇ ಭಾರಿ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ಕೆಲ ಅಭಿಮಾನಿಗಳು ಚಿತ್ರ ದಾಖಲೆ ಮಟ್ಟದ ಗಳಿಕೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಬಾಕ್ಸ್ ಆಫೀಸ್ ಅಂದಾಜುಗಳು ಹರಿದಾಡುತ್ತಿವೆ.

ಆದರೆ ಚಿತ್ರದ ನಿಜವಾದ ಯಶಸ್ಸು ಮತ್ತು ಗಳಿಕೆ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ನೆಗೆಟಿವ್ ವಿಮರ್ಶೆಗಳು ಮತ್ತು ಸಾಮಾಜಿಕ ಜಾಲತಾಣದ ಚರ್ಚೆಗಳ ನಡುವೆಯೂ, ಮೊದಲ ದಿನದ ಅಭಿಮಾನಿಗಳ ಸಂಭ್ರಮ ಮತ್ತು ಪ್ರತಿಕ್ರಿಯೆ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kalpa News Advertising DisclaimerKalahamsa Infotech private limited

Tags: BangaloreRocking Star YashsandalwoodToxic MovieToxic Movie ReviewYashಟಾಕ್ಸಿಕ್ ಸಿನಿಮಾಬೆಂಗಳೂರುರಾಕಿಂಗ್ ಸ್ಟಾರ್ ಯಶ್
Share204Tweet128Send
Aniruddha Vasishta S R

Aniruddha Vasishta S R

Editor-in-Chief

Previous Post

ತೆಲಂಗಾಣ | ಖಾಸಗಿ ಬಸ್‌–ಟ್ರಕ್ ಭೀಕರ ಅಪಘಾತ; 6 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

Next Post

‘ಟಾಕ್ಸಿಕ್’ ಸಿನಿಮಾ ಬಿಡುಗಡೆ | ಅಭಿಮಾನಿಗಳಿಗೆ ಯಶ್ ವಿಶೇಷ ಸಂದೇಶ ಏನು?

kalpa News

kalpa News

Next Post
Yash Toxic Movie Release Special Message To Fans

‘ಟಾಕ್ಸಿಕ್’ ಸಿನಿಮಾ ಬಿಡುಗಡೆ | ಅಭಿಮಾನಿಗಳಿಗೆ ಯಶ್ ವಿಶೇಷ ಸಂದೇಶ ಏನು?

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL