ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೇಪಾಳ (Nepal) ಪ್ರವಾಸದಲ್ಲಿದ್ದ ಶಿವಮೊಗ್ಗ (Shivamogga) ಜಿಲ್ಲೆಯ ಆರು ಮಂದಿ ಪ್ರವಾಸಿಗರು ಸೇರಿದಂತೆ ಒಟ್ಟು 54 ಮಂದಿ ಸುರಕ್ಷಿತವಾಗಿದ್ದು, ತಮ್ಮ ಮೂರು ದಿನಗಳ ಪ್ರವಾಸವನ್ನು (Tour) ಮುಕ್ತಾಯಗೊಳಿಸಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಇಬ್ಬರು, ಭದ್ರಾವತಿಯ ಇಬ್ಬರು ಹಾಗೂ ಹೊಸನಗರದ ಇಬ್ಬರು ಸೇರಿದಂತೆ ಒಟ್ಟು ಆರು ಮಂದಿ ಈ ಪ್ರವಾಸಿ ತಂಡದಲ್ಲಿದ್ದರು. ಇವರು ಇತರ ಪ್ರವಾಸಿಗರೊಂದಿಗೆ ನೇಪಾಳ ಪ್ರವಾಸ ಕೈಗೊಂಡಿದ್ದರು. ಕಳೆದ ಮೂರು ದಿನಗಳಿಂದ ನೇಪಾಳದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಇದೀಗ ಭಾರತಕ್ಕೆ ಮರಳುವ ಪ್ರಯಾಣ ಆರಂಭಿಸಿದ್ದಾರೆ.
ಪ್ರವಾಸಿಗರು ಸದ್ಯ ನೇಪಾಳದ ಪ್ರಸಿದ್ಧ ಲುಂಬಿಣಿವನ ಪ್ರದೇಶದಲ್ಲಿದ್ದು, ಭಾರತದ ಗಡಿ ಸಮೀಪಕ್ಕೆ ತಲುಪಿದ್ದಾರೆ. ಶೀಘ್ರದಲ್ಲೇ ಭಾರತದ ಗಡಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಒಟ್ಟು 54 ಮಂದಿ ಪ್ರವಾಸಿಗರು ಸುರಕ್ಷಿತ
ಶಿವಮೊಗ್ಗ, ಭದ್ರಾವತಿ ಹಾಗೂ ಹೊಸನಗರದ ಪ್ರವಾಸಿಗರು ಸೇರಿದಂತೆ ಈ ಪ್ರವಾಸಿ ತಂಡದಲ್ಲಿ ಒಟ್ಟು 54 ಮಂದಿ ಇದ್ದರು. ಇವರಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ತಂಡದ ಎಲ್ಲ ಪ್ರವಾಸಿಗರು ಸುರಕ್ಷಿತವಾಗಿದ್ದು, ಭಾರತಕ್ಕೆ ವಾಪಸ್ ಆಗುತ್ತಿರುವುದಾಗಿ ಶಿವಮೊಗ್ಗದ ಪ್ರವಾಸಿಗರು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ.
Also read>> ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ: ಬೈಕ್‌ಗೆ ಕಾರು ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು
Shivamogga : “ನಾವು ಸುರಕ್ಷಿತವಾಗಿದ್ದೇವೆ” ಎಂದು ಪ್ರವಾಸಿಗರ ಮಾಹಿತಿ
ಭಾರತದ ಗಡಿ ಸನಿಹಕ್ಕೆ ಬಂದಿರುವ ಪ್ರವಾಸಿಗರು, “ನಾವು ಎಲ್ಲರೂ ಸುರಕ್ಷಿತವಾಗಿದ್ದೇವೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮೂರು ದಿನಗಳ ನೇಪಾಳ ಪ್ರವಾಸವನ್ನು ಮುಕ್ತಾಯಗೊಳಿಸಿ ಈಗ ಭಾರತಕ್ಕೆ ವಾಪಸ್ ಆಗುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಭಾರತದ ಗಡಿ ಸಮೀಪಕ್ಕೆ ಸುರಕ್ಷಿತವಾಗಿ ತಲುಪಿದ ಹಿನ್ನೆಲೆಯಲ್ಲಿ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ನೇಪಾಳದಲ್ಲಿ ಇತ್ತೀಚಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಇದೀಗ ಶಿವಮೊಗ್ಗ ಜಿಲ್ಲೆಯ ಆರು ಮಂದಿ ಸೇರಿದಂತೆ ಎಲ್ಲ 54 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳು ನೆಮ್ಮದಿ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರವಾಸಿಗರ ತಂಡ ಭಾರತದ ಗಡಿಯ ಸಮೀಪದಲ್ಲಿದ್ದು, ಗಡಿ ದಾಟಿದ ಬಳಿಕ ತಮ್ಮ ತಮ್ಮ ಊರುಗಳಿಗೆ ಮರಳುವ ಪ್ರಯಾಣ ಮುಂದುವರಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









