No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
  • Advertise With Us
  • Grievances
  • About Us
  • Contact Us
Sunday, August 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಮೈಸೂರು | ದಸರಾ ಗಜಪಡೆ ವೀಕ್ಷಣೆಗೆ ಇನ್ಮುಂದೆ ಟಿಕೆಟ್ ಇಲ್ಲ; ₹100, ₹50 ಶುಲ್ಕ ರದ್ದು

kalpa News by kalpa News
August 30, 2026
in News
0
Mysuru Dasara Elephants Viewing Ticket Fee Cancelled copy
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  | 

ವಿಶ್ವವಿಖ್ಯಾತ ಮೈಸೂರು ದಸರಾ -2026ರ (Mysuru Dasara) ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯನ್ನು (Elephant) ವೀಕ್ಷಿಸಲು ವಿಧಿಸಲಾಗಿದ್ದ ಪ್ರವೇಶ ಶುಲ್ಕವನ್ನು ಅರಣ್ಯ ಇಲಾಖೆ ರದ್ದುಗೊಳಿಸಿದೆ.

ದಸರಾ ಆನೆಗಳ (Dasara Elephants) ದರ್ಶನಕ್ಕೆ ವಯಸ್ಕರಿಗೆ ₹100 ಹಾಗೂ ಮಕ್ಕಳಿಗೆ ₹50 ಶುಲ್ಕ ನಿಗದಿಪಡಿಸಿರುವ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಮೇರೆಗೆ ಗಜಪಡೆ ವೀಕ್ಷಣೆಗೆ ವಿಧಿಸಲಾಗಿದ್ದ ಪ್ರವೇಶ ಶುಲ್ಕವನ್ನು ಹಿಂಪಡೆಯಲಾಗಿದೆ. ದಸರಾ ಆನೆಗಳ ದರ್ಶನಕ್ಕೂ ಸಾರ್ವಜನಿಕರು ಹಣ ಪಾವತಿಸಬೇಕೆಂಬ ವಿಚಾರ ಮೈಸೂರು ಜನರು ಸೇರಿದಂತೆ ಪ್ರವಾಸಿಗರಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.

CM D.K. Shivakumar Speech On Gruhalakshmi

ಜನರ ವಿರೋಧದ ಬೆನ್ನಲ್ಲೇ ಟಿಕೆಟ್ ರದ್ದು

ಶುಕ್ರವಾರ ಅರಣ್ಯಭವನದಿಂದ ಮೈಸೂರು ಅರಮನೆ ಆವರಣಕ್ಕೆ ದಸರಾ ಗಜಪಡೆ ಆಗಮಿಸಿತ್ತು. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.

ಈ ನಡುವೆ ಗಜಪಡೆಯನ್ನು ವೀಕ್ಷಿಸಲು ಪ್ರವೇಶ ಶುಲ್ಕ ವಿಧಿಸಲಾಗಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿ ಸಾರ್ವಜನಿಕರ ಗಮನ ಸೆಳೆದಿತ್ತು. ದಸರಾ ಆನೆಗಳನ್ನು ನೋಡಲು ಸಹ ಹಣ ಪಾವತಿಸಬೇಕೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ಮೈಸೂರು ದಸರಾ ಹಾಗೂ ದಸರಾ ಆನೆಗಳೊಂದಿಗೆ ಸ್ಥಳೀಯರಿಗೆ ದೀರ್ಘಕಾಲದ ಭಾವನಾತ್ಮಕ ನಂಟಿರುವ ಹಿನ್ನೆಲೆಯಲ್ಲಿ ವೀಕ್ಷಣೆಗೆ ಶುಲ್ಕ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಈ ವಿಚಾರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೂ ಬಂದಿದ್ದು, ಆನೆಗಳ ದರ್ಶನಕ್ಕೆ ಸಾರ್ವಜನಿಕರಿಂದ ಹಣ ಪಡೆಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

PES Shivamogga

ವಯಸ್ಕರಿಗೆ ₹100, ಮಕ್ಕಳಿಗೆ ₹50 ಶುಲ್ಕ

ದಸರಾ ಗಜಪಡೆಯನ್ನು ವೀಕ್ಷಿಸಲು ಅರಮನೆಗೆ ಆಗಮಿಸುವ ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ವಯಸ್ಕರಿಗೆ ₹100 ಹಾಗೂ ಮಕ್ಕಳಿಗೆ ₹50 ಪ್ರವೇಶ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

Also Read>> ಗೃಹಲಕ್ಷ್ಮಿ ಯೋಜನೆಗೆ 3 ವರ್ಷ | ಆಯ್ದ ಫಲಾನುಭವಿಗಳಿಗೆ ಸಿಎಂ ಭೇಟಿಗೆ ಅವಕಾಶ | ಹೇಗೆ?

ಗಜಪಡೆಯ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಹಾಗೂ ಗಜಪಡೆಯೊಂದಿಗೆ ಕಾರ್ಯನಿರ್ವಹಿಸುವ ಮಾವುತರು ಮತ್ತು ಕಾವಾಡಿಗಳ ಕಲ್ಯಾಣಕ್ಕೆ ಶುಲ್ಕದ ಹಣವನ್ನು ಬಳಸುವ ಉದ್ದೇಶವೂ ಇತ್ತು ಎನ್ನಲಾಗಿತ್ತು.

ಆದರೆ ದಸರಾ ಆನೆಗಳ ದರ್ಶನವನ್ನು ಸಾಮಾನ್ಯ ಪ್ರವಾಸಿ ಆಕರ್ಷಣೆಯಂತೆ ಪರಿಗಣಿಸಿ ಶುಲ್ಕ ವಿಧಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ವಿಶೇಷವಾಗಿ ಮೈಸೂರು ಜನರಿಗೆ ದಸರಾ ಗಜಪಡೆ ಕೇವಲ ಪ್ರವಾಸಿಗರ ಆಕರ್ಷಣೆಯಾಗಿರದೆ, ದಸರಾ ಸಂಭ್ರಮದ ಅವಿಭಾಜ್ಯ ಭಾಗವಾಗಿರುವುದರಿಂದ ಶುಲ್ಕ ವಿಧಿಸಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿತ್ತು.

Mysuru Dasara : ಇ-ಟಿಕೆಟಿಂಗ್ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ

ಇದೇ ವೇಳೆ ದಸರಾ ಗಜಪಡೆ ವೀಕ್ಷಣೆಗೆ ಅರಣ್ಯ ಇಲಾಖೆ ಇ-ಟಿಕೆಟಿಂಗ್ ವ್ಯವಸ್ಥೆ ಜಾರಿಗೊಳಿಸಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಸ್ಪಷ್ಟನೆ ನೀಡಿದ್ದಾರೆ.

ಏಷ್ಯನ್ ಗೇಮ್ಸ್‌ | ಭಾರತಕ್ಕೆ ಭಾರಿ ಆಘಾತ | ನೀರಜ್ ಚೋಪ್ರಾ ಟೂರ್ನಿಯಿಂದ ಹೊರಕ್ಕೆ | ಕಾರಣವೇನು?

ಗಜಪಡೆ ವೀಕ್ಷಣೆಗೆ ಇ-ಟಿಕೆಟಿಂಗ್ ವ್ಯವಸ್ಥೆ ಕಲ್ಪಿಸುವ ವಿಚಾರವು ಕೇವಲ ಚಿಂತನಾ ಹಂತದಲ್ಲಿತ್ತು. ಅರಣ್ಯ ಇಲಾಖೆಯಿಂದ ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ನೀಡುತ್ತಿಲ್ಲ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಇ-ಟಿಕೆಟಿಂಗ್ ಕುರಿತ ಗೊಂದಲಕ್ಕೂ ಅರಣ್ಯ ಇಲಾಖೆ ತೆರೆ ಎಳೆದಿದೆ.Kumadvathi College Shikariura

ಸ್ಥಳೀಯರು, ಪ್ರವಾಸಿಗರಲ್ಲಿ ಸಂತಸ

ಮೈಸೂರು ಅರಮನೆಗೆ ದಸರಾ ಗಜಪಡೆ ಆಗಮಿಸಿದ ಬಳಿಕ ಆನೆಗಳ ದರ್ಶನ ಪಡೆಯಲು ಪ್ರತಿದಿನ ನೂರಾರು ಜನರು ಆಗಮಿಸುತ್ತಿದ್ದಾರೆ. ಇದೀಗ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ ಎಂಬ ಸ್ಪಷ್ಟನೆ ಹೊರಬಿದ್ದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮುಂದುವರಿಯಲಿದೆ. ಸಾರ್ವಜನಿಕರ ವಿರೋಧ ಹಾಗೂ ಸಚಿವರ ಸೂಚನೆಯ ಹಿನ್ನೆಲೆಯಲ್ಲಿ ಟಿಕೆಟ್ ವಿಧಿಸುವ ಪ್ರಸ್ತಾಪವನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಇದರಿಂದ ದಸರಾ ದಿನಗಳ ಮುನ್ನವೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಯನ್ನು ಯಾವುದೇ ಪ್ರವೇಶ ಶುಲ್ಕವಿಲ್ಲದೆ ವೀಕ್ಷಿಸುವ ಅವಕಾಶ ಸಾರ್ವಜನಿಕರಿಗೆ ದೊರೆಯುವಂತಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalpa News Advertising DisclaimerKalahamsa Infotech private limited

 

Tags: Dasara ElepantElephantsForest DepartmentMysuru Dasaraದಸರಾ ಗಜಪಡೆಮೈಸೂರುಮೈಸೂರು ದಸರಾ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಏಷ್ಯನ್ ಗೇಮ್ಸ್‌ | ಭಾರತಕ್ಕೆ ಭಾರಿ ಆಘಾತ | ನೀರಜ್ ಚೋಪ್ರಾ ಟೂರ್ನಿಯಿಂದ ಹೊರಕ್ಕೆ | ಕಾರಣವೇನು?

kalpa News

kalpa News

No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL