ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಾಣಿಜ್ಯ ಸಂಕೀರ್ಣದ ಪುನರಾಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಕೋರಮಂಗಲದಲ್ಲಿರುವ ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೇಂದ್ರವನ್ನು (Railway ticket reservation center) ಸೆಪ್ಟೆಂಬರ್ 1, 2026ರಿಂದ ಮುಚ್ಚಲಾಗುತ್ತಿದೆ.
ಕೋರಮಂಗಲದ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯ ಹಾಲ್ ಸಂಖ್ಯೆ 1ರಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೇಂದ್ರವನ್ನು ವಾಣಿಜ್ಯ ಸಂಕೀರ್ಣದ ಪುನರಾಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ 1ರಿಂದ ಈ ಕೇಂದ್ರದಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವ ಸೇವೆ ಲಭ್ಯವಿರುವುದಿಲ್ಲ. ಹೀಗಾಗಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಲು ಇತರ ಗಣಕೀಕೃತ ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಇದರ ಜೊತೆಗೆ, ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೂ ಕಾಯ್ದಿರಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಕೋರಮಂಗಲದ ಟಿಕೆಟ್ ಕಾಯ್ದಿರಿಸುವ ಕೇಂದ್ರದ ಸೇವೆ ಸ್ಥಗಿತಗೊಳ್ಳುವುದರಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.
Also Read>> ‘Z’ ಮತ್ತು Google Searchನ ಹೊಸ ಹೆಜ್ಜೆ; Zee TV ಧಾರಾವಾಹಿಗಳ ಕಥಾಲೋಕಕ್ಕೆ AI Mode ಪ್ರವೇಶ!
Bengaluru : Koramangala Railway Reservation Centre to Remain Closed from Today
Bengaluru: The Computerized Passenger Reservation Centre (PRC) at Koramangala, Bengaluru, will remain closed for railway ticket reservations from September 1, 2026, due to the redevelopment work of the commercial complex.
The reservation centre, located at Hall No. 1 on the First Floor of the BDA Shopping Complex in Koramangala, will cease its ticket reservation services from the said date.
Passengers advised to use alternative facilities
Passengers have been advised to make use of the reservation facilities available at other Computerized Passenger Reservation Centres for booking their railway tickets.
Alternatively, passengers can also use online railway ticket booking facilities to reserve their tickets.
The railway authorities have expressed regret for the inconvenience caused to passengers due to the closure of the reservation centre.
The closure will remain effective from September 1, 2026, in view of the ongoing redevelopment work at the commercial complex.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









