ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಅನುಕೂಲ ಹಾಗೂ ರೈಲುಗಳ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಸೌತ್ ಕೋಸ್ಟ್ ರೈಲ್ವೆ (South Coast Railway) ವಿವಿಧ ಬೆಂಗಳೂರಿನಿಂದ (Bengaluru) ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ (West Bengal) ಹಾಗೂ ಈಶಾನ್ಯ ಭಾರತದ ವಿವಿಧ ಭಾಗಗಳಿಗೆ ಸಂಚರಿಸುವ ರೈಲುಗಳ ಸಂಚಾರ ಸಮಯದಲ್ಲಿ ಪರಿಷ್ಕರಣೆ ಮಾಡಿದೆ.
ಪರಿಷ್ಕೃತ ವೇಳಾಪಟ್ಟಿಯು ಆಯಾ ರೈಲುಗಳ ಪ್ರಯಾಣ ಆರಂಭಿಸುವ ದಿನಾಂಕದಿಂದ ಜಾರಿಗೆ ಬರಲಿದೆ.
ಬೆಂಗಳೂರಿನಿಂದ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ವಿವಿಧ ಭಾಗಗಳಿಗೆ ಸಂಚರಿಸುವ ರೈಲುಗಳ ಪಲಾಸ, ಸೋಂಪೇಟ ಮತ್ತು ಇಚ್ಚಾಪುರಂ ನಿಲ್ದಾಣಗಳ ಆಗಮನ-ನಿರ್ಗಮನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
South Coast Railway : ಪರಿಷ್ಕೃತ ರೈಲು ವೇಳಾಪಟ್ಟಿ
- ರೈಲು ಸಂಖ್ಯೆ 15227 – SMVT ಬೆಂಗಳೂರು–ಮುಜಾಫರ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್
ಈ ರೈಲು ಪಲಾಸ ನಿಲ್ದಾಣಕ್ಕೆ ಇನ್ನು ಮುಂದೆ 00:26ಕ್ಕೆ ಆಗಮಿಸಿ, 00:28ಕ್ಕೆ ನಿರ್ಗಮಿಸಲಿದೆ. ಈ ಹಿಂದೆ 00:38/00:40 ಗಂಟೆಗೆ ಆಗಮಿಸಿ/ನಿರ್ಗಮಿಸುತ್ತಿತ್ತು. ಈ ಬದಲಾವಣೆ 15.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 18064 – ಯಲಹಂಕ–ಸಂತ್ರಾಗಾಚಿ ಸಾಪ್ತಾಹಿಕ ಎಕ್ಸ್‌ಪ್ರೆಸ್
ಪಲಾಸದಲ್ಲಿ ರೈಲಿನ ಹೊಸ ಆಗಮನ-ನಿರ್ಗಮನ ಸಮಯ 05:35/05:37 ಗಂಟೆ. ಈ ಹಿಂದೆ 06:00/06:02 ಗಂಟೆಯಾಗಿತ್ತು. ಪರಿಷ್ಕೃತ ಸಮಯ 17.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 22888 – SMVT ಬೆಂಗಳೂರು–ಹೌರಾ ಸಾಪ್ತಾಹಿಕ ಎಕ್ಸ್‌ಪ್ರೆಸ್
ಪಲಾಸ ನಿಲ್ದಾಣದಲ್ಲಿ ರೈಲು 07:02ಕ್ಕೆ ಆಗಮಿಸಿ, 07:04ಕ್ಕೆ ನಿರ್ಗಮಿಸಲಿದೆ. ಈ ಹಿಂದೆ 07:35/07:37 ಗಂಟೆಯಾಗಿತ್ತು. ಬದಲಾವಣೆ 15.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 12503 – SMVT ಬೆಂಗಳೂರು–ಅಗರ್ತಲಾ ದ್ವಿಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಪಲಾಸದಲ್ಲಿ ಪರಿಷ್ಕೃತ ಸಮಯ 07:03/07:05 ಗಂಟೆ. ಈ ಹಿಂದೆ 07:35/07:37 ಗಂಟೆಯಾಗಿತ್ತು. ಹೊಸ ಸಮಯ 20.10.2026ರಿಂದ ಅನ್ವಯವಾಗಲಿದೆ.
- ರೈಲು ಸಂಖ್ಯೆ 16597 – SMVT ಬೆಂಗಳೂರು–ಅಲಿಪುರ್ದುವಾರ್ ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಪಲಾಸದಲ್ಲಿ 07:03ಕ್ಕೆ ಆಗಮಿಸಿ 07:05ಕ್ಕೆ ನಿರ್ಗಮಿಸಲಿದೆ. ಹಿಂದಿನ ಸಮಯ 07:35/07:37 ಆಗಿತ್ತು. ಪರಿಷ್ಕರಣೆ 17.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 16523 – SMVT ಬೆಂಗಳೂರು–ಬಾಲುರಘಾಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್
ಪಲಾಸದಲ್ಲಿ ರೈಲಿನ ಹೊಸ ಸಮಯ 07:03/07:05 ಗಂಟೆ. ಹಿಂದಿನ ಸಮಯ 07:35/07:37 ಗಂಟೆಯಾಗಿತ್ತು. ಪರಿಷ್ಕೃತ ವೇಳಾಪಟ್ಟಿ 21.10.2026ರಿಂದ ಜಾರಿಗೆ ಬರಲಿದೆ.
Also read>> ‘ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂವಿಧಾನ ಓದಿ’: ಎಚ್.ಎಸ್. ನಾಗಮೋಹನ್ ದಾಸ್
- ರೈಲು ಸಂಖ್ಯೆ 12864 – SMVT ಬೆಂಗಳೂರು–ಹೌರಾ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಪಲಾಸದಲ್ಲಿ ರೈಲು 07:38ಕ್ಕೆ ಆಗಮಿಸಿ, 07:40ಕ್ಕೆ ನಿರ್ಗಮಿಸಲಿದೆ. ಈ ಹಿಂದೆ 08:10/08:12 ಗಂಟೆಯಾಗಿತ್ತು. ಬದಲಾವಣೆ 15.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 18048 – ವಾಸ್ಕೋ ಡ ಗಾಮಾ–ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್
ಪಲಾಸ ನಿಲ್ದಾಣದಲ್ಲಿ ಪರಿಷ್ಕೃತ ಆಗಮನ-ನಿರ್ಗಮನ ಸಮಯ 11:30/11:32 ಗಂಟೆ. ಈ ಹಿಂದೆ 11:43/11:45 ಗಂಟೆಯಾಗಿತ್ತು. ಹೊಸ ವೇಳಾಪಟ್ಟಿ 20.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 12846 – SMVT ಬೆಂಗಳೂರು–ಭುವನೇಶ್ವರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಈ ರೈಲು ಪಲಾಸದಲ್ಲಿ 13:36ಕ್ಕೆ ಆಗಮಿಸಿ, 13:38ಕ್ಕೆ ನಿರ್ಗಮಿಸಲಿದೆ. ಈ ಹಿಂದೆ 13:58/14:00 ಗಂಟೆಯಾಗಿತ್ತು. ಪರಿಷ್ಕರಣೆ 19.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 22834 – SMVT ಬೆಂಗಳೂರು–ಭುವನೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್
ಪಲಾಸದಲ್ಲಿ ರೈಲಿನ ಹೊಸ ಸಮಯ 13:36/13:38 ಗಂಟೆ. ಹಿಂದಿನ ಸಮಯ 13:58/14:00 ಗಂಟೆಯಾಗಿತ್ತು. ಈ ಬದಲಾವಣೆ 15.10.2026ರಿಂದ ಜಾರಿಗೆ ಬರಲಿದೆ.
ಸೋಂಪೇಟ, ಇಚ್ಚಾಪುರಂ ನಿಲ್ದಾಣಗಳಲ್ಲೂ ಬದಲಾವಣೆ
- ರೈಲು ಸಂಖ್ಯೆ 16223 – SMVT ಬೆಂಗಳೂರು–ರಾಧಿಕಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್
ಈ ರೈಲಿನ ಪಲಾಸ, ಸೋಂಪೇಟ ಹಾಗೂ ಇಚ್ಚಾಪುರಂ ನಿಲ್ದಾಣಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.
- ಪಲಾಸ: 14:00/14:02 ಗಂಟೆ — ಹಿಂದಿನ ಸಮಯ 14:18/14:20
- ಸೋಂಪೇಟ: 14:23/14:25 ಗಂಟೆ — ಹಿಂದಿನ ಸಮಯ 15:00/15:02
- ಇಚ್ಚಾಪುರಂ: 14:36/14:38 ಗಂಟೆ — ಹಿಂದಿನ ಸಮಯ 15:20/15:22
ಈ ಪರಿಷ್ಕೃತ ಸಮಯ 15.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 18464 – KSR ಬೆಂಗಳೂರು–ಭುವನೇಶ್ವರ ದೈನಂದಿನ ಎಕ್ಸ್‌ಪ್ರೆಸ್
ಈ ರೈಲಿನ ವೇಳಾಪಟ್ಟಿಯಲ್ಲೂ ಮೂರು ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ.
- ಪಲಾಸ: 14:26/14:28 ಗಂಟೆ — ಹಿಂದಿನ ಸಮಯ 14:45/14:47
- ಸೋಂಪೇಟ: 14:49/14:51 ಗಂಟೆ — ಹಿಂದಿನ ಸಮಯ 15:08/15:10
- ಇಚ್ಚಾಪುರಂ: 15:04/15:06 ಗಂಟೆ — ಹಿಂದಿನ ಸಮಯ 15:19/15:21
ಈ ಬದಲಾವಣೆ 15.10.2026ರಿಂದ ಜಾರಿಗೆ ಬರಲಿದೆ.
- ರೈಲು ಸಂಖ್ಯೆ 22884 – ಯಶವಂತಪುರ–ಪುರಿ ಸಾಪ್ತಾಹಿಕ ಗರೀಬ್ ರಥ್ ಎಕ್ಸ್‌ಪ್ರೆಸ್
ಪಲಾಸದಲ್ಲಿ ರೈಲು 23:05ಕ್ಕೆ ಆಗಮಿಸಿ 23:07ಕ್ಕೆ ನಿರ್ಗಮಿಸಲಿದೆ. ಹಿಂದಿನ ಸಮಯ 23:26/23:28 ಗಂಟೆಯಾಗಿತ್ತು. ಹೊಸ ಸಮಯ 17.10.2026ರಿಂದ ಅನ್ವಯವಾಗಲಿದೆ.
- ರೈಲು ಸಂಖ್ಯೆ 22818 – ಮೈಸೂರು–ಹೌರಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಪಲಾಸ ನಿಲ್ದಾಣದಲ್ಲಿ ರೈಲು 23:27ಕ್ಕೆ ಆಗಮಿಸಿ 23:28ಕ್ಕೆ ನಿರ್ಗಮಿಸಲಿದೆ. ಈ ಹಿಂದೆ 23:48/23:50 ಗಂಟೆಯಾಗಿತ್ತು. ಪರಿಷ್ಕೃತ ವೇಳಾಪಟ್ಟಿ 18.10.2026ರಿಂದ ಜಾರಿಗೆ ಬರಲಿದೆ.
ಪ್ರಯಾಣಿಕರಿಗೆ ಸೂಚನೆ
ಈ ಪರಿಷ್ಕರಣೆಯಿಂದ ಕೆಲವು ರೈಲುಗಳು ವಿವಿಧ ನಿಲ್ದಾಣಗಳಿಗೆ ಹಿಂದಿನ ಸಮಯಕ್ಕಿಂತ ಮುಂಚಿತವಾಗಿ ತಲುಪಿ ನಿರ್ಗಮಿಸಲಿವೆ. ಆದ್ದರಿಂದ ರೈಲು ಪ್ರಯಾಣಿಕರು ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ರೈಲಿನ ಪರಿಷ್ಕೃತ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.
ವಿಶೇಷವಾಗಿ SMVT ಬೆಂಗಳೂರು, KSR ಬೆಂಗಳೂರು ಮತ್ತು ಯಶವಂತಪುರದಿಂದ ಸಂಚರಿಸುವ ರೈಲುಗಳಲ್ಲಿ ಬದಲಾವಣೆ ಇರುವುದರಿಂದ, ಅಕ್ಟೋಬರ್ 2026ರಿಂದ ಪ್ರಯಾಣಿಸುವವರು ಹೊಸ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







