No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಋಗ್ವೇದವು ಎಲ್ಲ ಶಾಸ್ತ್ರಗಳ ತಾಯಿಯಾಗಿದೆ | ವಿದ್ಯೇಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ

ಭಂಡಾರಕೇರಿ ಮಠ | ದೇಶದ ವಿವಿಧ ಭಾಗದ 17 ಋಗ್ವೇದ ವಿದ್ವಾಂಸರಿಗೆ ಗೌರವ ಸಮರ್ಪಣೆ

kalpa News by kalpa News
September 5, 2026
in ಉಡುಪಿ
0
Udupi rigveda is the mother of all shastras copy
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬಾರಕೂರು/ಉಡುಪಿ  |

ಋಗ್ವೇದವು (Rigveda) ಎಲ್ಲ ಶಾಸ್ತ್ರಗಳ ತಾಯಿಯಾಗಿದೆ ಎಂದು (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.

ಬಾರಕೂರಿನ ಶ್ರೀ ಮಠದಲ್ಲಿ 47 ನೇ ಚಾತುರ್ಮಾಸ್ಯದ ಸಂದರ್ಭ ಋಗ್ವೇದ ಅಧ್ಯಯನ ಮಾಡಿದ 17 ವಿದ್ವಾಂಸರಿಗೆ ಸ್ಮರಣಿಕೆ ಹಾಗೂ ಸಂಭಾವನೆ ಸಹಿತ ಗೌರವ ಪ್ರದಾನ ಮಾಡಿ ಅವರು ಅನುಗ್ರಹ ಸಂದೇಶ ನೀಡಿದರು.

ಋಗ್ವೇದವು ಸಕಲ ವೇದಗಳಲ್ಲಿ ಅಗ್ರ ಸ್ಥಾನ ಪಡೆದಿದೆ. ಇಲ್ಲಿ ಹೇಳದೇ ಇರುವ ವಿಚಾರಗಳೇ ಇಲ್ಲ. ಇದನ್ನು ಋಷಿ, ಮುನಿಗಳೂ ಸಾಕ್ಷೀಕರಿಸಿದ್ದಾರೆಂದರು. ಋಗ್ವೇದವನ್ನು ಕಂಠಸ್ಥ ಮಾಡಿದ ವಿದ್ವಾಂಸರು ಇಂದು ವಿರಳವಾಗುತ್ತಿದ್ದಾರೆ.

ಪದ, ಕ್ರಮ, ಜಟಾ, ಘನ ಸೇರಿದಂತೆ ಯಾವ ರೀತಿಯಲ್ಲಾದರೂ ಗ್ರಂಥ ನಿರಪೇಕ್ಷವಾಗಿ ಋಗ್ವೇದ ಹೇಳಲು ಸಮರ್ಥರಾಗಿರುವ ದೇಶದ ವಿವಿಧ ಭಾಗದ 17 ವಿದ್ವಾಂಸರು 9 ದಿನಗಳ ಕಾಲ ಶ್ರೀ ಮಠದಲ್ಲಿ ಪಾರಾಯಣವನ್ನು ಮಾಡಿರುವುದು ಒಂದು ದಾಖಲೆಯೇ ಆಗಿದೆ ಎಂದರು. PES Shivamogga

ವೇದಗಳ ಸಂರಕ್ಷಣೆ ಎಂದರೆ ವೇದವನ್ನು ಕರಗತ ಮಾಡಿಕೊಂಡ ಪಂಡಿತರ ಸಂರಕ್ಷಣೆಯೇ ಆಗಿದೆ. ಎಲ್ಲಿ ವಿದ್ವಾಂಸರಿಗೆ ಗೌರವ, ಮನ್ನಣೆಗಳು ಪ್ರಾಪ್ತವಾಗುವುದೋ ಅಲ್ಲಿ ಸಕಲ ಶಾಸ್ತ್ರಗಳು ಅನುರಣಿಸುತ್ತವೆ. ಚಾತುರ್ಮಾಸ್ಯ ಸಂದರ್ಭ 4 ವೇದಗಳ ಪಾರಂಗತರಾದವರನ್ನು ಹುಡುಕಿ ಕರೆತಂದು, ಅವರಿಂದ ಪಾರಾಯಣ ಮಾಡಿಸಿ, ಗೌರವಾದರ ನೀಡುವ ಉದ್ದೇಶಕ್ಕೆ ಉತ್ತೇಜನ ದೊರಕಿರುವುದು ಪರಂಪರೆಗೆ ದೊರೆತ ಸುಕೃತವಾಗಿದೆ ಎಂದರು.

Udupi : ಬಿರುದು ಪ್ರದಾನ

ಶ್ರೀರಂಗಂನ ತ್ರಯೀ ವಿದ್ಯಾಗುರುಕುಲದ ಸಂಸ್ಥಾಪಕ, ಪಂಡಿತ ವಿಜಯೇಂದ್ರ ಭಾರತೀ ಘನಪಾಠಿ ಅವರಿಗೆ ಋಗುದ್ಗಾರ ವಾಗೀಶ ಎಂಬ ಬಿರುದು ಸಹಿತ ಪ್ರಶಸ್ತಿಯನ್ನು ಶ್ರೀ ವಿದ್ಯೇಶ ತೀರ್ಥರು ಪ್ರದಾನ ಮಾಡಿದರು.

ಸನ್ಮಾನಕ್ಕೆ ಉತ್ತರಿಸಿದ ಪಂಡಿತ ವಿಜಯೇಂದ್ರ ಭಾರತೀ ಘನಪಾಠಿ, 2008 ರಲ್ಲಿ ಪ್ರಾರಂಭವಾದ ನಮ್ಮ ಗುರುಕುಲಕ್ಕೆ ಶ್ರೀ ವಿದ್ಯೇಶತೀರ್ಥರು ಆಗಮಿಸಿ ಸಮರ್ಥ ಮಾರ್ಗದರ್ಶನ ನೀಡಿದ್ದ ಫಲವಾಗಿ ಇಂದು ದೇಶದ ವಿವಿಧೆಡೆ ನಮ್ಮ ತ್ರಯೀ ವಿದ್ಯಾಗುರುಕುಲದ ಶಾಖೆಗಳು ಆರಂಭವಾಗಿವೆ. ನೂರಾರು ವಿದ್ಯಾರ್ಥಿಗಳು ವೇದಾಧ್ಯಯನ ಮಾಡಲು ಪ್ರೇರಣೆ ದೊರಕಿದೆ. ಇಂಥಾ ಗುರುಗಳ ಕೃಪೆಯೇ ನಮಗೆ ದಾರಿದೀಪವಾಗಿದೆ ಎಂದರು. 5 ವಿದ್ವಾಂಸರಿಗೆ ಋಗುದ್ಘೋಷ ದೇಶಿಕ, 11 ವಿದ್ವಾಂಸರಿಗೆ ಋಗುದ್ಘೋಷ ಮಹಾವ್ರತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೊಸ ಪರ್ವವನ್ನೇ ನಿರ್ಮಾಣ ಮಾಡಿದೆ

ಬ್ರಹ್ಮಾವರದ ಪ್ರಸಿದ್ಧ ವೇದಮೂರ್ತಿ ಹೃಷೀಕೇಶ ಬಾಯರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಶ್ರೀ ವಿದ್ಯೇಶ ತೀರ್ಥರು ಬಹಳ ಅಪರೂಪದ ಮತ್ತು ಮಹೋನ್ನತವಾದ ಕಾರ್ಯವನ್ನು ಚಾತುರ್ಮಾಸ್ಯ ಸಂದರ್ಭ ಮಾಡುತ್ತಿದ್ದಾರೆ. ವೇದ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆ ಚಾತುರ್ಮಾಸ್ಯ ಸಂದರ್ಭದಲ್ಲಿ ಹೊಸ ಪರ್ವವನ್ನೇ ನಿರ್ಮಾಣ ಮಾಡಿದೆ ಎಂದರು.

ಶ್ರೀ ವಿದ್ಯಾಮಾನ್ಯ ತೀರ್ಥರು ಪೀಠದಲ್ಲಿದ್ದಾಗ ನಾನು ಶ್ರೀಮಠದ ಸಂಪರ್ಕ ಹೊಂದಿದ್ದೆ. ಮಹಾಗುರುಗಳ ಆಶಯವನ್ನು ವಿದ್ಯೇಶ ತೀರ್ಥರು ಸಾಕಾರ ಗೊಳಿಸುತ್ತಿದ್ದಾರೆಂದರು.

ವಿದ್ವಾಂಸರಾದ ರಾಮಕೃಷ್ಣ ಘನಪಾಠಿ, ವಾಸುದೇವ ಘನಪಾಠಿ, ಪರೀಕ್ಷಿತ ಘನಪಾಠಿ, ಆನಂದತೀರ್ಥ, ರಾಘವ, ಶ್ರೀನಾಥ, ಅನಿರುದ್ಧ , ನರಸಿಂಹ ಶರ್ಮಾ ಇತರರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  Kumadvathi College Shikariura

Kalahamsa Infotech private limited

Kalpa News Advertising Disclaimer

Tags: Bandarakeri MuttBarakuruUdupiಉಡುಪಿಋಗ್ವೇದಬಾರಕೂರುಭಂಡಾರಕೇರಿ ಮಠಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಶ್ವವೇ ತತ್ತರಿಸಿದರೂ ಭಾರತದ ಆರ್ಥಿಕತೆ ಅಬ್ಬರ: ಮೊದಲ ತ್ರೈಮಾಸಿಕದಲ್ಲಿ GDP 7.8% ಗ್ರೋತ್!

Next Post

‘ಹಾಲು-ತುಪ್ಪದ ಹಿಂದೆ ಪ್ರಾಣಿ ಹಿಂಸೆ ಇಲ್ಲ’ | ರಾಘವೇಶ್ವರ ಶ್ರೀಗಳ ಮಹತ್ವದ ಮಾತು

kalpa News

kalpa News

Next Post
Gokarna milk ghee no animal cruelty raghaveshwara shri

‘ಹಾಲು-ತುಪ್ಪದ ಹಿಂದೆ ಪ್ರಾಣಿ ಹಿಂಸೆ ಇಲ್ಲ’ | ರಾಘವೇಶ್ವರ ಶ್ರೀಗಳ ಮಹತ್ವದ ಮಾತು

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL