ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೀಗೆಹಟ್ಟಿ ನಿವಾಸಿ ಕುಳ್ಳಿ ಕಿರಣ ಎಂಬ ಯುವಕನನ್ನು ಭಾನುವಾರ ಸಂಜೆ ರಾಮಿನ ಕೊಪ್ಪ ಬಳಿ ಆತನ ಸಹಚರರು ಬರ್ಬರವಾಗಿ ಹರಿತವಾದ ಆಯುಧದಿಂದ ಎದೆ ಮತ್ತು ಮುಖದ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದರು.
ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಆತನನ್ನು ನಗರದ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗಿದ್ದರು ಅಲ್ಲಿ ಆತಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ನೂರಾರು ಆತನ ಸ್ನೇಹಿತರು ಸ್ಥಳದಲ್ಲಿ ಸೇರಿದ್ದರು. ಬಳಿಕ ಆತನ ಮೃತ ದೇಹವನ್ನು ಮೆಗನ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿತ್ತು ಅಲ್ಲಿಯೂ ನೂರಾರು ಸಂಖ್ಯೆಯ ಯುವಕರು ಜಮಾಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿಗಳು ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಿದರ ಬಗ್ಗೆ ಮಾಹಿತಿ ನೀಡಿದ್ದರು.
ನಿನ್ನೆ ತಡರಾತ್ರಿ ಪೊಲೀಸರ ವಿಶೇಷ ತಂಡ ತುಂಗಾನಗರ ಪಿ ಐ ಗುರುರಾಜ್ ನೇತೃತ್ವದಲ್ಲಿ ಆರೋಪಿಗಳ ಬೆನ್ನಟ್ಟಿ ಹೋದಾಗ ಪ್ರಮುಖ ಆರೋಪಿ ಉಮೇಶ್ ಪೊಲೀಸ್ ಸಿಬ್ಬಂದಿ ತಮ್ಮಣ್ಣನವರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಿ ಐ ಗುರುರಾಜ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು ಆತ ಪರಾರಿಗೆ ಯತ್ನಿಸಿದ್ದಾನೆ ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದು ಆತನನ್ನು ಬಂಧಿಸಿದ್ದರು.
ಇಂದು ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳು ಆರೋಪಿ ಉಮೇಶ್ ನನ್ನು ಸಂದರ್ಶಿಸಿದ ಬಳಿಕ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿಗಳು ಆತ್ಮ ರಕ್ಷಣೆಗಾಗಿ ಉಮೇಶ್ ಎಡಗಾಲಿಗೆ ಸಿ.ಪಿ.ಐ ಗುರುರಾಜ್ ಗುಂಡು ಹಾರಿಸಿದ್ದಾರೆ.
ಇನ್ನು ನಾಲ್ಕು ಆರೋಪಿಗಳಾದ ಅಪ್ಪು ಯಾನೆ ಬಾಬು ರಾಜೇಂದ್ರ ಪ್ರಸಾದ್ ಸುನಿಲ್, ಭುವನ್ ಮತ್ತು ಮನೋಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹಣಕಾಸಿನ ವ್ಯವಹಾರವೇ ಈ ಹತ್ಯೆಗೆ ಕಾರಣ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಇನ್ನು ಯಾರಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಕುಳ್ಳಿ ಕಿರಣ್ ಬಳಿ ಉಮೇಶ್ 50,000 ಹಣ ಪಡೆದಿದ್ದು ವಾಪಸು ನೀಡದೆ ಇದ್ದುದರಿಂದ ಪದೇಪದೇ ಅವರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು.
ನಿನ್ನೆ ಕೂಡ ರಾಮಿನ ಕೊಪ್ಪದಲ್ಲಿ ಇದೇ ವಿಚಾರಕ್ಕೆ 15 ನಿಮಿಷ ಚರ್ಚೆ ನಡೆದಿದೆ ಈ ಸಂದರ್ಭದಲ್ಲಿ ಹಂತಕರು ಆತನ ಮೇಲೆ ದಾಳಿ ಮಾಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








