ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಂದೆ ಮನೆಯಲ್ಲಿ ಖುರಾನ್ ಪಠಣಕ್ಕೆ ತೆರಳಿದ್ದ ವೇಳೆ ಪತ್ರಕರ್ತರೊಬ್ಬರ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ.
ನಗರದ ಆರ್.ಎಂ.ಎಲ್. ನಗರದ ಕಿಣಿ ಲೇಔಟ್‌ನ ಶನಿಮಹಾತ್ಮ ದೇವಾಸ್ಥಾನದ ರಸ್ತೆಯಲ್ಲಿರುವ ಪತ್ರಕರ್ತ ಶಿ.ಜು.ಪಾಶಾ ಅವರ ಮನೆಯಲ್ಲಿ ಘಟನೆ ನಡೆದಿದೆ.
ಶಿ.ಜು.ಪಾಶಾ ಅವರ ತಂದೆಯ ಮನೆಯಲ್ಲಿ ಖುರಾನ್ ಪಠಣವಿತ್ತು. ಹಾಗಾಗಿ ಪತ್ನಿಯೊಂದಿಗೆ ತೆರಳಿದ್ದರು. ಅಲ್ಲಿಂದ ಶಿ.ಜು.ಪಾಶಾ ಕಚೇರಿಗೆ ತೆರಳಿದ್ದರು. ಅವರ ಪತ್ನಿ ಸಂಜೆ 4 ಗಂಟೆಗೆ ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Also read>> ಟಾಟಾ ಮುಂಬೈ ಮ್ಯಾರಥಾನ್ 2026; 21 ವರ್ಷಗಳಲ್ಲಿ ₹500 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹ!
ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಮ್‌ನ ಬೀರುವಿನಲ್ಲಿದ್ದ ಆಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ₹1,02,500 ಮೌಲ್ಯದ 29 ಗ್ರಾಂ 823 ಮಿಲಿ ತೂಕದ ನೆಕ್ಲೇಸ್, ₹1,90,000 ಮೌಲ್ಯದ 15 ಗ್ರಾಂ ತೂಕದ ಹ್ಯಾಂಗಿಂಗ್ಸ್, ₹70,000 ಮೌಲ್ಯದ 8 ಗ್ರಾಂ ತೂಕದ ಬ್ರೇಸ್‌ಲೆಟ್ ಹಾಗೂ ₹1,15,000 ಮೌಲ್ಯದ 10 ಗ್ರಾಂ ತೂಕದ 2 ಬಂಗಾರದ ಉಂಗುರಗಳು, ₹30,000 ಮೌಲ್ಯದ 200 ಗ್ರಾಂ ತೂಕದ 3 ಜೊತೆ ಬೆಳ್ಳಿ ಕಾಲುಚೈನ್‌ಗಳು ಹಾಗೂ ಮನೆಯಲ್ಲಿದ್ದ ₹1,50,000 ನಗದು ಕಳ್ಳತನವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಂದಾಜು ₹6,57,500 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









