ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಮಹತ್ವದ ಬೆಳವಣಿಗೆಯೊಂದರಲ್ಲಿ (Yesvantpur) ಯಶವಂತಪುರ – ಶಿವಮೊಗ್ಗದ (Shivamogga) ಒಂದು ಎಕ್ಸ್’ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ವಿಸ್ತರಣೆ ಮಾಡಿ (SWR) ನೈಋತ್ಯ ರೈಲ್ವೆ ನಿರ್ಧಾರ ಕೈಗೊಂಡಿದೆ.
ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ರೈಲುಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಯಶವಂತಪುರ-ಶಿವಮೊಗ್ಗ ಟೌನ್ ವಾರಕ್ಕೆ ಮೂರು ದಿನ ಸಂಚರಿಸುವ ಎಕ್ಸ್’ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದ್ದು, ಮತ್ತೊಂದೆಡೆ ಬೆಂಗಳೂರು ವಿಭಾಗದಲ್ಲಿ ಹಳಿ ದ್ವಿಗುಣೀಕರಣ ಕಾಮಗಾರಿ ಹಿನ್ನೆಲೆಯಲ್ಲಿ 10 ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
SWR : ತಾಳಗುಪ್ಪದವರೆಗೆ ಯಶವಂತಪುರ-ಶಿವಮೊಗ್ಗ ಎಕ್ಸ್’ಪ್ರೆಸ್ ವಿಸ್ತರಣೆ
ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 16581/16582 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಾರಕ್ಕೆ ಮೂರು ದಿನ ಸಂಚರಿಸುವ ಎಕ್ಸ್’ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಈ ವಿಸ್ತರಣೆಯು 2026ರ ಅಕ್ಟೋಬರ್ 18ರಿಂದ ನವೆಂಬರ್ 12ರವರೆಗೆ ನಿಗದಿತ ದಿನಗಳಲ್ಲಿ ಜಾರಿಯಲ್ಲಿರಲಿದ್ದು, ಎರಡೂ ದಿಕ್ಕುಗಳಲ್ಲಿ ತಲಾ 11 ಟ್ರಿಪ್’ಗಳನ್ನು ರೈಲು ನಿರ್ವಹಿಸಲಿದೆ. ರೈಲಿನ ಪ್ರಸ್ತುತ ಬೋಗಿಗಳ ಸಂಯೋಜನೆ ಹಾಗೂ ವಾರದ ಸಂಚಾರದ ದಿನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲಿನ ವೇಳಾಪಟ್ಟಿ ಹೀಗಿದೆ
ಯಶವಂತಪುರದಿಂದ ತಾಳಗುಪ್ಪಕ್ಕೆ:
- ರೈಲು ಸಂಖ್ಯೆ: 16581
- ಯಶವಂತಪುರದಿಂದ ನಿರ್ಗಮನ: ರಾತ್ರಿ 12.15
- ತಾಳಗುಪ್ಪಕ್ಕೆ ಆಗಮನ: ಬೆಳಿಗ್ಗೆ 9.00
- ಆಗಮನವು ಅದೇ ದಿನ ಇರಲಿದೆ
ತಾಳಗುಪ್ಪದಿಂದ ಯಶವಂತಪುರಕ್ಕೆ:
- ರೈಲು ಸಂಖ್ಯೆ: 16582
- ತಾಳಗುಪ್ಪದಿಂದ ನಿರ್ಗಮನ: ರಾತ್ರಿ 10.00
- ಯಶವಂತಪುರಕ್ಕೆ ಆಗಮನ: ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ.
ವಿಸ್ತರಿತ ಮಾರ್ಗದಲ್ಲಿ ಎಂಟು ನಿಲ್ದಾಣಗಳು
ಶಿವಮೊಗ್ಗದಿಂದ ತಾಳಗುಪ್ಪದವರೆಗೆ ವಿಸ್ತರಿಸಲಾದ ಮಾರ್ಗದಲ್ಲಿ ರೈಲು ಎರಡೂ ದಿಕ್ಕುಗಳಲ್ಲಿ ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ:
- ಕೊಣಗವಳ್ಳಿ
- ಹಾರನಹಳ್ಳಿ
- ಕುಂಸಿ
- ಅರಸಾಳು
- ಕೆಂಚನಾಳು
- ಆನಂದಪುರಂ
- ಅಡ್ಡೇರಿ
- ಸಾಗರ ಜಂಬಗಾರು
ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಡುವಿನ ಸಂಚಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ತಿಳಿಸಿದೆ.
ಈ ವಿಸ್ತರಣೆಯಿಂದ ಸಾಗರ, ತಾಳಗುಪ್ಪ ಹಾಗೂ ಮಾರ್ಗಮಧ್ಯದ ನಿಲ್ದಾಣಗಳ ಪ್ರಯಾಣಿಕರಿಗೆ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ರೈಲು ಸಂಪರ್ಕ ದೊರೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










