No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Saturday, October 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಶಿವಮೊಗ್ಗ ದಸರಾ | ಪುರಾತನ ನಾಣ್ಯಗಳ ಪ್ರದರ್ಶನಕ್ಕೆ ಬಿ.ಎಸ್. ಯಡಿಯೂರಪ್ಪ ಚಾಲನೆ

ಇತಿಹಾಸ, ಸಂಸ್ಕೃತಿ ಅರಿಯಲು ಪುರಾತನ ನಾಣ್ಯಗಳ ಪ್ರದರ್ಶನ ಹೆಚ್ಚಾಗಬೇಕು: ಬಿ.ಎಸ್. ಯಡಿಯೂರಪ್ಪ

kalpa News by kalpa News
October 17, 2026
in News, ಶಿವಮೊಗ್ಗ
0
shivamogga dasara ancient coins exhibition yediyurappa
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಇತಿಹಾಸವನ್ನು ಆಸಕ್ತಿಯಿಂದ ಕಲಿಯಲು ಹಾಗೂ ಹಿಂದಿನ ಕಾಲದ ಸಂಸ್ಕೃತಿ, ಪರಂಪರೆಯನ್ನು ಅರಿತುಕೊಳ್ಳಲು ಪುರಾತನ ನಾಣ್ಯಗಳ (Ancient Coins) ಪ್ರದರ್ಶನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B S Yadiyurappa) ಹೇಳಿದರು. ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ದಸರಾ (Shivamogga Dasara) ಅಂಗವಾಗಿ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಹಕಾರರ ಸಂಘದ ಸಹಯೋಗದಲ್ಲಿ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಪುರಾತನ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಇತಿಹಾಸದ ಬಗ್ಗೆ ಕುತೂಹಲ ಮೂಡಲಿ

ಇಂದಿನ ಮಕ್ಕಳು ಪುರಾತನ ನಾಣ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಅವರಲ್ಲಿ ಕುತೂಹಲ ಮೂಡಿದಾಗ ಮಾತ್ರ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಬರುತ್ತದೆ. ಇತಿಹಾಸ, ಜನಪದ ಕಲೆ, ಸಾಹಿತ್ಯ, ಧಾರ್ಮಿಕ ಪರಂಪರೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವ ಇಂತಹ ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಯಡಿಯೂರಪ್ಪ ಹೇಳಿದರು.

https://kalpa.news/wp-content/uploads/2026/10/DKS_Dasara-1min-TV-Ad-.mp4

ಜಾತಿ, ಮತ ಮತ್ತು ರಾಜಕೀಯವನ್ನು ಮರೆತು ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವು ನಡೆದು ಬಂದ ದಾರಿಯನ್ನು ಪರಿಚಯಿಸುವ ಇಂತಹ ಪ್ರಯತ್ನಗಳು ಯಶಸ್ವಿಯಾಗಬೇಕು ಎಂದು ಆಶಿಸಿದರು.

Shivamogga Dasara: ಸಾವಿರಾರು ವರ್ಷಗಳ ಹಿಂದಿನ ನಾಣ್ಯಗಳ ಪ್ರದರ್ಶನ

ದಸರಾ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ನಾಣ್ಯಗಳು, ವಿವಿಧ ದೇಶಗಳ ಕರೆನ್ಸಿಗಳು ಹಾಗೂ ಅಂಚೆಚೀಟಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂತಹ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಪರಿಚಯಿಸುತ್ತಿರುವ ನಾಣ್ಯ ಮತ್ತು ಅಂಚೆಚೀಟಿ ಸಂಗ್ರಹಕಾರರನ್ನು ಅಭಿನಂದಿಸುವುದಾಗಿ ತಿಳಿಸಿದರು.

Shivamogga Dasara 2026 Page 17

‘ನಾಣ್ಯಗಳು ನಮ್ಮ ಪರಂಪರೆಯ ಪ್ರತಿಬಿಂಬ’

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, “ಇವು ಕೇವಲ ನಾಣ್ಯಗಳಲ್ಲ. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತಿಬಿಂಬ. ಇಂತಹ ಪ್ರದರ್ಶನಗಳು ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು.

ಶಿವಮೊಗ್ಗದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯಲು ಪ್ರೋತ್ಸಾಹ ನೀಡಿದವರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ವಿಜಯದಶಮಿಯಂದು ಬನ್ನಿ ಮುಡಿಯುವ ಅಲ್ಲಮಪ್ರಭು ಮೈದಾನ ಸಾರ್ವಜನಿಕರಿಗೆ ಲಭ್ಯವಾಗಲು ಸಹ ಯಡಿಯೂರಪ್ಪ ಅವರ ಕೊಡುಗೆ ಇದೆ ಎಂದು ಹೇಳಿದರು.

ವಿಜಯದಶಮಿಯಂದು ಚಾಮುಂಡೇಶ್ವರಿ ದೇವಿಯ ಮೆರವಣಿಗೆಯೊಂದಿಗೆ ನಗರದ 250ಕ್ಕೂ ಹೆಚ್ಚು ದೇವತೆಗಳು ಒಂದೇ ಕಡೆ ಸೇರುವ ಮೂಲಕ ವಿಜೃಂಭಣೆಯಿಂದ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಯಡಿಯೂರಪ್ಪಗೆ ‘ಗಜಕೇಸರಿ’ ಬಿರುದು ನೀಡಲು ನಿರ್ಧಾರ

ನಾಣ್ಯ ಸಂಗ್ರಹಕಾರರ ಸಂಘದ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕ ಚಂದ್ರಕಾಂತ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ಇಂತಹ ಸಾಂಸ್ಕೃತಿಕ ಮತ್ತು ಐತಿಹಾಸಿಕ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಸಂಘದ ಪರವಾಗಿ ಅವರಿಗೆ ‘ಗಜಕೇಸರಿ’ ಬಿರುದು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

“ಯಡಿಯೂರಪ್ಪನವರು ತುಂಬಿದ ಕೊಡ. ಅವರದ್ದು ಹುಲಿಯ ಹೆಜ್ಜೆ, ಚಿರತೆಯ ವೇಗ, ಆನೆಯ ಗಾಂಭೀರ್ಯ. ಒಮ್ಮೆ ಮಾತು ಕೊಟ್ಟರೆ ಅದಕ್ಕೆ ತಪ್ಪದ ವ್ಯಕ್ತಿ” ಎಂದು ಬಣ್ಣಿಸಿದರು.

ಶಾಶ್ವತ ಪ್ರದರ್ಶನ ಸಭಾಂಗಣಕ್ಕೆ ಬೇಡಿಕೆ

ಸಂಘವು ಹಲವು ವರ್ಷಗಳಿಂದ ಪುರಾತನ ನಾಣ್ಯ ಮತ್ತು ಅಂಚೆಚೀಟಿಗಳ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇವುಗಳ ಪ್ರದರ್ಶನಕ್ಕಾಗಿ ಶಾಶ್ವತ ಸಭಾಂಗಣದ ವ್ಯವಸ್ಥೆ ಮಾಡಬೇಕು ಎಂದು ಚಂದ್ರಕಾಂತ್ ಒತ್ತಾಯಿಸಿದರು.
ಸಂಘದ ನಿರಂತರ ಪ್ರಯತ್ನದ ಫಲವಾಗಿ ದೇಶ ಮತ್ತು ರಾಜ್ಯದ ಹಲವು ಮಹನೀಯರ ಸ್ಮರಣಾರ್ಥ ನಾಣ್ಯಗಳನ್ನು ಹೊರತರಲು ಸಾಧ್ಯವಾಗಿದೆ. ಅನೇಕ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದ್ದರೂ ಅವು ಸಾರ್ವಜನಿಕರಿಗೆ ಸುಲಭವಾಗಿ ಮಾರಾಟಕ್ಕೆ ಲಭ್ಯವಾಗುತ್ತಿಲ್ಲ. ಇತಿಹಾಸ ಪುರುಷರು ಹಾಗೂ ಮಹಾನ್ ವ್ಯಕ್ತಿಗಳ ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮತ್ತಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು.

Also Read>> ಸಿಗಂದೂರು, ಚಂದ್ರಗುತ್ತಿ ದೇವಸ್ಥಾನಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ; ವಿಶೇಷ ಪೂಜೆ

ಚಿನ್ನ, ಬೆಳ್ಳಿ ನಾಣ್ಯಗಳು ಪ್ರಮುಖ ಆಕರ್ಷಣೆ

ಪ್ರದರ್ಶನದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು, ವಿವಿಧ ದೇಶಗಳ ಕರೆನ್ಸಿಗಳು ಹಾಗೂ ಅಂಚೆಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಕಾಲಘಟ್ಟದ ರಾಜ-ಮಹಾರಾಜರ ಇತಿಹಾಸ ಹಾಗೂ ದೇಶ-ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಅಪರೂಪದ ಸಂಗ್ರಹಗಳು ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ರುದ್ರೇಗೌಡ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪ್ರಮುಖರಾದ ವಿರೂಪಾಕ್ಷಪ್ಪ, ಜ್ಯೋತಿಪ್ರಕಾಶ್, ಸಂಘದ ಅಧ್ಯಕ್ಷ ದೇವದಾಸ್ ನಾಯಕ್, ವಿನೋದ್ ಕುಮಾರ್ ಜೈನ್, ಸುಬ್ರಹ್ಮಣ್ಯ ಸೇರಿದಂತೆ ನಾಣ್ಯ ಮತ್ತು ಅಂಚೆಚೀಟಿ ಸಂಗ್ರಹಕಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Christ King

PES ShivamoggaKalpa News Advertising Disclaimer

Tags: Ancient CoinsB S YadiyurappaShivamogga Dasaraಪುರಾತನ ನಾಣ್ಯಗಳ ಪ್ರದರ್ಶನಬಿ.ಎಸ್. ಯಡಿಯೂರಪ್ಪಶಿವಮೊಗ್ಗ ದಸರಾ ಉತ್ಸವ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಿಗಂದೂರು, ಚಂದ್ರಗುತ್ತಿ ದೇವಸ್ಥಾನಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ; ವಿಶೇಷ ಪೂಜೆ

Next Post

ಪ್ರಯಾಣಿಕರಿಗೆ ಗುಡ್ ನ್ಯೂಸ್: ಚೆನ್ನೈ–ಮಂಗಳೂರು, ಮಂಗಳೂರು–ರಾಮೇಶ್ವರಂ ವಿಶೇಷ ರೈಲು

kalpa News

kalpa News

Next Post
chennai mangalore mangalore rameswaram special train

ಪ್ರಯಾಣಿಕರಿಗೆ ಗುಡ್ ನ್ಯೂಸ್: ಚೆನ್ನೈ–ಮಂಗಳೂರು, ಮಂಗಳೂರು–ರಾಮೇಶ್ವರಂ ವಿಶೇಷ ರೈಲು

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL