ಕಲ್ಪ ಮೀಡಿಯಾ ಹೌಸ್ | ಮಹಾರಾಷ್ಟ್ರ |
ಪತಿ ಖರೀದಿಸಲು ಬಯಸಿದ್ದ ಬೈಕ್ನ (Bike) ಬೆಲೆ ಕೇಳಿದ ಮಹಿಳೆಯೊಬ್ಬರು (Wonen) ಶೋರೂಂನಲ್ಲೇ ವಿಚಿತ್ರವಾಗಿ ವರ್ತಿಸಿ, ತಾನು ‘ಮಾತಾ ರಾಣಿ’ ಎಂದು ಹೇಳಿಕೊಂಡು ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿದ ಘಟನೆ ಇದೀಗ ಗಮನ ಸೆಳೆಯುತ್ತಿದೆ. ₹1.10 ಲಕ್ಷ ಬೆಲೆಯ ಬೈಕ್ ಅನ್ನು ₹1 ಲಕ್ಷಕ್ಕೆ ನೀಡುವಂತೆ ಬೇಡಿಕೆ ಇಟ್ಟ ಮಹಿಳೆ, ಬೆಲೆ ಕಡಿಮೆ ಮಾಡದಿದ್ದರೆ ಶೋರೂಂಗೆ ತನ್ನ ಕೋಪದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
₹1.10 ಲಕ್ಷ ಬೆಲೆ ಕೇಳುತ್ತಿದ್ದಂತೆ ಮಹಿಳೆಯ ವಿಚಿತ್ರ ವರ್ತನೆ!
ಮಹಿಳೆಯೊಬ್ಬರು ತಮ್ಮ ಪತಿಗಾಗಿ ಹೊಸ ಬೈಕ್ ಖರೀದಿಸುವ ಉದ್ದೇಶದಿಂದ ಶೋರೂಂಗೆ ಭೇಟಿ ನೀಡಿದ್ದರು. ಅಲ್ಲಿ ಬೈಕ್ಗಳನ್ನು ಪರಿಶೀಲಿಸಿದ ಬಳಿಕ, ತಮಗೆ ಇಷ್ಟವಾದ ಬೈಕ್ನ ಬೆಲೆಯನ್ನು ಸೇಲ್ಸ್ಮ್ಯಾನ್ ಬಳಿ ವಿಚಾರಿಸಿದ್ದಾರೆ. ಆಗ ಶೋರೂಂ ಸಿಬ್ಬಂದಿ ಬೈಕ್ನ ಬೆಲೆ ₹1 ಲಕ್ಷದ 10 ಸಾವಿರ ರೂಪಾಯಿ ಎಂದು ತಿಳಿಸಿದ್ದಾರೆ.
ಆದರೆ, ಬೈಕ್ನ ಬೆಲೆ ಕೇಳುತ್ತಿದ್ದಂತೆಯೇ ಮಹಿಳೆ ಜೋರಾಗಿ ಕೂಗಲು ಆರಂಭಿಸಿದ್ದಾಳೆ. ಜೊತೆಗೆ ವಿಚಿತ್ರ ಸನ್ನೆಗಳನ್ನು ಮಾಡುತ್ತಾ ಅಸಹಜವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಮಹಿಳೆಯ ಈ ವರ್ತನೆಯಿಂದ ಶೋರೂಂನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ಕೆಲಕಾಲ ಗೊಂದಲಕ್ಕೀಡಾಗಿದ್ದಾರೆ.
‘ನಾನೇ ಮಾತಾ ರಾಣಿ, ಭಕ್ತರನ್ನು ಸುಲಿಗೆ ಮಾಡಬೇಡಿ!’
ಶೋರೂಂನಲ್ಲಿ ಮಹಿಳೆಯ ಕೂಗಾಟ ಹೆಚ್ಚಾಗುತ್ತಿದ್ದಂತೆ, ಅಲ್ಲಿನ ಮಾಲೀಕರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ ಮಾಲೀಕರು ಮಹಿಳೆಯ ಪತಿಯನ್ನು ಉದ್ದೇಶಿಸಿ, “ಇವರಿಗೆ ಏನಾದರೂ ಫಿಟ್ಸ್ ಬಂದಿದೆಯೇ?” ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮಹಿಳೆ, ತಾನು ಮಾತಾ ರಾಣಿ ಎಂದು ಹೇಳಿಕೊಂಡು ಶೋರೂಂ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. “ನಾನು ಮಾತಾ ರಾಣಿ. ಈ ಬೈಕ್ಗೆ ನೀವು ತುಂಬಾ ಹಣ ಕೇಳುತ್ತಿದ್ದೀರಿ. ನನ್ನ ಭಕ್ತರನ್ನು ಈ ರೀತಿ ಸುಲಿಗೆ ಮಾಡಲು ಬಿಡುವುದಿಲ್ಲ. ತಕ್ಷಣವೇ ₹10 ಸಾವಿರ ಬೆಲೆ ಕಡಿಮೆ ಮಾಡಿ, ₹1.10 ಲಕ್ಷದ ಬೈಕ್ ಅನ್ನು ₹1 ಲಕ್ಷಕ್ಕೆ ನನ್ನ ಭಕ್ತರಿಗೆ ಕೊಡಿ” ಎಂದು ಒತ್ತಾಯಿಸಿದ್ದಾಳೆ ಎನ್ನಲಾಗಿದೆ.
ಅಷ್ಟಕ್ಕೇ ನಿಲ್ಲದ ಮಹಿಳೆ, ತನ್ನ ಬೇಡಿಕೆಗೆ ಒಪ್ಪದಿದ್ದರೆ ಶೋರೂಂಗೆ ತನ್ನ ಕೋಪದ ಪರಿಣಾಮ ಎದುರಾಗುತ್ತದೆ ಎಂಬರ್ಥದಲ್ಲಿ ಎಚ್ಚರಿಕೆ ನೀಡಿದ್ದಾಳೆ ಎಂದು ಹೇಳಲಾಗಿದೆ.
Also Read>> ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದ ಸಿಹಿಸುದ್ದಿ: ನ. 9ರಿಂದ 137 ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ!
ಬೆದರಿಕೆಗೂ ಮಣಿಯದ ಶೋರೂಂ ಮಾಲೀಕ!
ಮಹಿಳೆ ವಿಚಿತ್ರವಾಗಿ ವರ್ತಿಸುತ್ತಾ ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದರೂ, ಶೋರೂಂ ಮಾಲೀಕರು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಮಹಿಳೆಯ ಬೆದರಿಕೆಗೆ ಮಣಿಯದೆ, ಬೈಕ್ನ ಬೆಲೆಯಲ್ಲಿ ಯಾವುದೇ ರಿಯಾಯಿತಿ ನೀಡಲು ಒಪ್ಪಲಿಲ್ಲ ಎನ್ನಲಾಗಿದೆ.
ಒಂದು ಬೈಕ್ನ ಬೆಲೆಯನ್ನು ₹10 ಸಾವಿರ ಕಡಿಮೆ ಮಾಡಿಸುವ ವಿಚಾರಕ್ಕೆ ಶೋರೂಂನಲ್ಲಿ ನಡೆದ ಈ ಹೈಡ್ರಾಮಾ ಕುತೂಹಲಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















