ಹರಿಯಾಣ: ಮಹತ್ವದ ಬೆಳವಣಿಗೆಯೊಂದರಲ್ಲಿ, ಹರಿಯಾಣದ ಕ್ರೀಡಾಪಟುಗಳು ತಮ್ಮ ಆದಾಯದ 1/3ನೆಯ ಭಾಗವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ.
ಈ ಕುರಿತಂತೆ ಆದೇಶ ಪತ್ರ ಬಿಡುಗಡೆ ಮಾಡಿರುವ ಸರ್ಕಾರ, ಕ್ರೀಡೆಯನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ವೃತ್ತಿ ಹಾಗೂ ಒಪ್ಪಂದದಿಂದ ಗಳಿಸಿದ ಆದಾಯದಲ್ಲಿ 1/3 ಭಾಗವನ್ನು ನೀಡಿ. ಇದನ್ನು ರಾಜ್ಯದಲ್ಲಿನ ಕ್ರೀಡೆಗಳ ಅಭಿವೃದ್ದಿಗಾಗಿ ಬಳಸಿಕೊಳ್ಳುತ್ತೇವೆ ಎಂದಿದೆ.
ಹರಿಯಾಣ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಅಥವಾ ವೃತ್ತಿಪರ ಕ್ರೀಡೆ, ಒಡಂಬಡಿಕೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವೇತನವಿಲ್ಲದೆ ಅಸಾಧಾರಣ ರಜೆ ನೀಡಲಾಗುವುದು ಎಂದಿದೆ.
ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಕ್ರೀಡಾಪಟುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕುಸ್ತಿಪಟು ಬಬಿತಾ ಪೊಗಾಟ್, ಕ್ರೀಡಾಪಟುಗಳು ಎಷ್ಟು ಶ್ರಮ ಪಡುತ್ತಾರೆ ಎನ್ನುವುದನ್ನು ಸರ್ಕಾರ ಅರಿಯಲಿ. ಹೇಗೆ ಆದಾಯ ಕಡಿತ ಮಾಡಿಕೊಳ್ಳುತ್ತಾರೆ. ಇದಕ್ಕೆ ನನ್ನದಂತೂ ಬೆಂಬಲವಿಲ್ಲ. ಈ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ನಮ್ಮೊಂದಿಗೆ ಚರ್ಚೆ ನಡೆಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Does the government even realize how much of hard work a sportsperson puts in? How can they ask for one-third of the income? I do not support this at all. Govt should've at least discussed it with us: Wrestler Babita Phogat to ANI on Haryana govt's notification (File Pic) pic.twitter.com/s1UTKJ03TP
— ANI (@ANI) June 8, 2018
ಇನ್ನು ಈ ಕುರಿತಂತೆ ಮಾತನಾಡಿರುವ ಸುಶೀಲ್ ಕುಮಾರ್, ಈ ನೀತಿಯನ್ನು ಸರ್ಕಾರ ಬದಲಿಸಬೇಕು. ಹಿರಿಯ ಕ್ರೀಡಾಪಟುಗಳ ನೇತೃತ್ವದಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಲಿ. ಆ ಸಮಿತಿ ಮೂಲಕ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬೇಕು. ಆದರೆ, ಸರ್ಕಾರದ ಇಂತಹ ನಿರ್ಧಾರಗಳು ಕ್ರೀಡಾಪಟುಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದಿದ್ದಾರೆ.
This policy should be reviewed. Govt should establish a committee of senior sportspersons & take their input before forming a policy of this type. This will affect the morale of sportspersons & might affect their performance as well: Sushil Kumar, on Haryana Govt's notification pic.twitter.com/NXcZ9WZsWC
— ANI (@ANI) June 8, 2018
Discussion about this post