ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಪಾಲ್ಗೊಂಡಿದ್ದು ಐತಿಹಾಸಿಕ ಕ್ಷಣಗಳಾದವು. ಇವರ ನಂತರ ಈಗ ರತನ್ ಟಾಟಾ ಮೋಹನ್ ಭಾಗ್ವತ್ ಜೊತೆಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ.
ಆಗಸ್‌ಟ್ 24ರಂದು ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಯಮಿ ರತನ್ ಟಾಟಾ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ವಿಚಾರ ಇನ್ನೂ ಖಚಿತಗೊಳ್ಳಬೇಕಿದೆ.
ಆರ್‌ಎಸ್‌ಎಸ್ ಅಡಿಯಲ್ಲಿರುವ ನಾನಾ ಪಾಲ್ಕರ್ ಸ್ಮೃತಿ ಸಮಿತಿ ಎಂಬ ಎನ್‌ಜಿಒ ಕಾರ್ಯಕ್ರಮದ ಆಗಸ್‌ಟ್ 24ರಂದು ಮುಂಬೈನಲ್ಲಿ ನಡೆಯಲಿದ್ದು, ಇಲ್ಲಿ ಮೋಹನ್ ಭಾಗ್ವತ್ ಜೊತೆಯಲ್ಲಿ ರತನ್ ಟಾಟಾ ವೇದಿಕೆ ಹಂಚಿಕೊಳ್ಳುವ ಸಾಧ್ಯತೆಯಿದೆ.
















