ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇದೇ ಮೊಟ್ಟ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಮಹತ್ವದ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳೂ ಕೊನೆಯ ಕ್ಷಣದ ಕಸರತ್ತುಗಳನ್ನು ನಡೆಸುತ್ತಿವೆ.
312 ಸದಸ್ಯರ ಬಲವನ್ನು ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಯಾವುದೇ ರೀತಿಯ ಭಯವೂ ಇಲ್ಲ, ಸೋಲೂ ಇಲ್ಲ. ಆದರೂ, ಸಹ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ರಯತ್ನಗಳನ್ನು ನಡೆಸುತ್ತಲೇ ಇದೆ.
ಅವಿಶ್ವಾಸ ನಿರ್ಣಯವನ್ನು ಟಿಡಿಪಿ ಮಂಡಿಸಿದೆ ಎಂಬುದೇ ವಿರೋಧ ಪಕ್ಷಗಳ ಗುಂಪಿಗೆ ಇರುವ ದೊಡ್ಡ ತೊಡಕು. 11 ಸದಸ್ಯರನ್ನು ಹೊಂದಿರುವ ಟಿಆರ್‌ಎಸ್ ಮತ್ತು 20 ಸದಸ್ಯರಿರುವ ಬಿಜೆಡಿ ಈ ಕಾರಣಕ್ಕಾಗಿಯೇ ಅವಿಶ್ವಾಸವನ್ನು ಬೆಂಬಲಿಸದಿರಲು ನಿರ್ಧರಿಸಿವೆ. ಹೀಗಾಗಿ ಈ ಎರಡೂ ಪಕ್ಷಗಳು ಗೈರು ಹಾಜರಾಗುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿದೆ.
ಅವಿಶ್ವಾಸ ನಿರ್ಣಯದ ಪರವಾಗಿ ರಅವಿಶ್ವಾಸ ನಿರ್ಣಯದ ಪರವಾಗಿ ವಿರೋಧ ಪಕ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಿಗೆ ಮಾತನಾಡಲಿದ್ದಾರೆ. ಬಳಿಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಕೆ.ಸಿ. ವೇಣುಗೋಪಾಲ್ ಮಾತನಾಡುವ ಸಾಧ್ಯತೆ ಇದೆ.
ಪ್ರತಿಪಕ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲಿಗೆ ಮಾತನಾಡಲಿದ್ದು, ಬಳಿಕ ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಕೆ.ಸಿ. ವೇಣುಗೋಪಾಲ್ ಮಾತನಾಡುವ ಸಾಧ್ಯತೆ ಇದೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತನಾಡಲು 3 ಗಂಟೆ 33 ನಿಮಿಷಗಳ ಕಾಲ ಸಮಯವನ್ನು ನಿಗದಿ ಮಾಡಿದ್ದು, ಕಾಂಗ್ರೆಸ್‌ಗೆ 38 ನಿಮಿಷ ನೀಡಲಾಗಿದೆ.
ಇನ್ನು, ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ 27 ನಿಮಿಷ, ತಮಿಳುನಾಡಿನ ಎಐಎಡಿಎಂಕೆಗೆ 29 ನಿಮಿಷ, ಒಡಿಶಾದ ಬಿಜೆಡಿಗೆ 15 ನಿಮಿಷ, ಶಿವಸೇನೆಗೆ 14 ನಿಮಿಷ, ಟಿಡಿಪಿಗೆ 13 ನಿಮಿಷ, ಟಿಆರ್‌ಎಸ್‌ಗೆ 9 ನಿಮಿಷ, ಸಿಪಿಐಎಂಗೆ 7 ನಿಮಿಷ, ಸಮಾಜವಾದಿ ಪಕ್ಷಕ್ಕೆ 6 ನಿಮಿಷ, ಎನ್‌ಸಿಪಿಗೆ 6 ನಿಮಿಷ ಹಾಗೂ ಎಲ್‌ಜೆಎಸ್‌ಪಿಗೆ 5 ನಿಮಿಷ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ.
Discussion about this post