ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಸೇರಿದಂತೆ ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣಾಗೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ.
ವಾರ್ಡ್ ಮರು ವಿಂಗಡಣೆ ಮಾಡಿದ್ದು ಹಾಗೂ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ ಚುನಾವಣಾಗೆ ಅಸ್ತು ಎಂದಿದೆ.
ವಾರ್ಡ್ ವಿಂಗಡನೆ ಮತ್ತು ಮೀಸಲಾತಿ ನಿಗದಿ ಪ್ರಶ್ನಿಸಿ ತುಮಕೂರಿನ ಕೆ. ಸಂದೀಪ್, ಮೈಸೂರಿನ ಎಂ. ಅನ್ವರ್ ಮುಂತಾದವರು ಪ್ರತ್ಯೇಕವಾಗಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾ ಗೊಳಿಸಿದ ಹೈಕೋರ್ಟ್ ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲು ಚುನಾವಣೆ ಆಯೋಗಕ್ಕೆ ಅವಕಾಶ ನೀಡಿದೆ.
ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್‌ಗಳು, 53 ಪುರಸಭೆಯ 1,247 ವಾರ್ಡ್‌ಗಳು ಹಾಗೂ 23 ಪಟ್ಟಣ ಪಂಚಾಯ್ತಿಗಳ 400 ವಾರ್ಡ್‌ಗಳು ಸೇರಿ ಒಟ್ಟು 2,574 ವಾರ್ಡ್‌ಗಳಿಗೆ ಇದೇ ತಿಂಗಳ 29ರಂದು ಮೊದಲ ಹಂತದ ಮತದಾನ ನಡೆಯಲಿದೆ.
Discussion about this post