No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Sunday, August 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜ್ಯೋತಿರ್ಭೀಮೇಶ್ವರ ವ್ರತ ವಿಶೇಷ ಯಾಕೆ? ಇಲ್ಲಿದೆ ಓದಿ

kalpa News by kalpa News
August 11, 2018
in Special Articles
0
Share on FacebookShare on TwitterShare on WhatsApp

ಈ ವ್ರತಕ್ಕೆ ಭೀಮನಮವಾಸ್ಯೆ ವ್ರತ, ಭೀಮೇಶ್ವರ ವ್ರತ, ಜ್ಯೋತಿರ್ಭೀಮೇಶ್ವರ ವ್ರತ ಎಂದು ಅನೇಕ ಹೆಸರಗಳಿವೆ. ಕನ್ಯೆಯರು ತಮಗೆ ಉತ್ತಮವಾದ ಸಕಲಗುಣಸಂಪನ್ನನಾದ ಧೀರ್ಘಾಯುಸ್ಸಿರುವ ಯೋಗ್ಯ ಪತಿ, ಸುಖೀ ದಾಂಪತ್ಯ ಪ್ರಾಪ್ತಿಗೆ, ಸುಮಂಗಲಿಯರು ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ, ಪತಿಗೆ ದೀರ್ಘಾಯುಸ್ಸು, ಸುಖ, ಸಂಪತ್ಸಮೃದ್ಧಿ ವೃದ್ಧಿಸುತ್ತಿರಲಿ ಎಂದು ಶ್ರದ್ಧಾ ಭಕ್ತಿಯಿಂದ ಈ ವ್ರತವನ್ನಾಚರಿಸುತ್ತಾರೆ.

ಪತಿವ್ರತೆ ಸಾವಿತ್ರಿಯು ಈ ವ್ರತವನ್ನಾಚರಿಸಿ ನಿಧನನಾಗಿದ್ದ ಪತಿ ಸತ್ಯವಾನನನ್ನು ಶಿವನ ಕೃಪೆಯಿಂದ ಬದುಕಿಸಿಕೊಂಡಳು.

ಈಶ್ವರನು ಕೈಲಾಸದಲ್ಲಿ ಮೊದಲು ಸನತ್ಕುಮಾರರಿಗೆ ಇದನ್ನು ಉಪದೇಶಿಸಿ, ಅವರು ಭೂಲೋಕದ ತಪಸ್ವಿಗಳ ಪತ್ನಿಯರಿಗೆ ತಿಳಿಸಿ, ಅವರ ಮೂಲಕ ಎಲ್ಲೆಡೆ ವ್ಯಾಪಿಸಿತು.

ಜ್ಯೋತಿರ್ಭೀಮೇಶ್ವರ ವ್ರತವನ್ನು ಮೊಟ್ಟ ಮೊದಲು ಕೃತಯುಗದಲ್ಲಿ ಮೃಕಂಡ ಮುನಿಯ ಪತ್ನಿ ಸೌಮಿತ್ರೆ, ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ, ದ್ವಾಪರದಲ್ಲಿ ಶ್ರೀಕೃಷ್ಣನ ಪತ್ನಿ ರುಕ್ಮಿಣಿ, ಕಲಿಯುಗದಲ್ಲಿ ರತ್ನವೇಣಿ ಮಾಡಿದ್ದರು.

ವ್ರತ ಮಾಡುವ ಕ್ರಮ:

ಆಷಾಢ ಅಮಾವಾಸ್ಯೆಯಂದು, ಗೋಧೂಳಿ ಸಮಯವಾದ ಸಂಜೆಯಲ್ಲಿ, ಅಕ್ಕಿಯ ಮೇಲಿಟ್ಟ ಜೋಡಿ ಕಲಶಗಳ ಬಲಕ್ಕೆ ತುಪ್ಪದ, ಎಡಕ್ಕೆ ಎಣ್ಣೆಯ ದೀಪವನ್ನು ಹಚ್ಚಿಟ್ಟು, ಅರಿಶಿನದ ನೀರಿನಲ್ಲಿ ನೆನಸಿದ ಹಸಿದಾರಕ್ಕೆ 16 ಗಂಟು, ಹಾಕಿ ವಿಳೆಯದೆಲೆ ಅಡಿಕೆಯೊಂದಿಗೆ ಕಲಶದ ಅಕ್ಕಿಯ ಮೇಲಿಟ್ಟು ಈಶ್ವರನ ಸ್ವರೂಪವಾದ ಭೀಮೇಶ್ವರನನ್ನು ಕಲಶ ಮತ್ತು ದೀಪಕ್ಕೆ ಆವಾಹನೆ ಮಾಡಿ, ಅರ್ಘ್ಯಪಾದ್ಯಾದಿ ಷೋಡಶೋಪಚಾರ, ಅಂಗಪೂಜೆ, ಪತ್ರ, ಪುಷ್ಪಗಳಿಂದ ಪೂಜೆ,108 ನಾಮ ಪೂಜೆ ಮಾಡಿ, ದಾರದ ಗ್ರಂಥಿ (ಗಂಟು)ಗಳನ್ನೂ ಪೂಜಿಸಿ ನಂತರ ಧೂಪ, ದೀಪಾರತಿ ಮಾಡಿ, ಕಡುಬು, ಚಕ್ಕುಲಿ, ಪಾಯಸಾದಿ ಪಂಚಭಕ್ಷ್ಯಗಳು, ವಿಧವಿಧವಾದ ಫಲಗಳನ್ನು, ತಾಂಬೂಲ ಸಹಿತ ನೇವೇದ್ಯ ಮಾಡಿ, ಮಂಗಳಾರತಿ ನೆರವೇರಿಸಿ, ದಾರವನ್ನು

ಮೃತ್ಯುಂಜಯ ನಮಸ್ತುಭ್ಯಂ,
ತವಮೇ ಸೂತ್ರಧಾರಣಂ
ಸೌಭಾಗ್ಯಂ ಧನ ಧಾನ್ಯಂಚ
ಪ್ರಜಾವೃದ್ಧಿಂ ಸದಾಕುರು ॥

ಎಂದು ಪ್ರಾರ್ಥಿಸಿ, ದಾರವನ್ನು ಆಚಾರ್ಯನಿಂದ ಬಲಗೈಗೆ ಕಟ್ಟಿಸಿಕೊಂಡು ವ್ರತದ ಕಥೆಯನ್ನು ಕೈಯಲ್ಲಿ ತೆಂಗಿನಕಾಯಿ ಅಥವಾ ಯಾವುದಾದರೂ ಹಣ್ಣನ್ನು ಹಿಡಿದುಕೊಂಡು ಕೇಳಿ, ನಂತರ ಕೈಯಲ್ಲಿದ್ದ ಫಲವನ್ನು ದಕ್ಷಿಣೆಯೊಂದಿಗೆ ಪುರೋಹಿತರಿಗೆ ದಾನ ಕೊಡಬೇಕು. ವ್ರತ ಮುಗಿದ ನಂತರ ಪುರೋಹಿತರಿಗೆ ಉಪಾಯನ ದಾನವನ್ನು, ಕೊಡಬೇಕು.

ವ್ರತದ ಕಥೆ:

ಪೂರ್ವದಲ್ಲಿ ನೈಮಿಷಾರಣ್ಯದಲ್ಲಿದ್ದ ಶೌನಕಾದಿ ಋಷಿಗಳು,ಸಕಲಶಾಸ್ತ್ರ ಪಾರಂಗತರಾದ ಸೂತಪುರಾಣಿಕರನ್ನು ಸ್ತ್ರೀಯರಿಗೆ ಯೋಗ್ಯ ಪತಿ ಪ್ರಾಪ್ತಿಗೆ,
ದೀರ್ಘಸೌಮಂಗಲ್ಯತ್ವಕ್ಕೆ, ಸುಖೀದಾಂಪತ್ಯಕ್ಕಾಗಿ ಆಚರಿಸಬಹುದಾದ ಉತ್ತಮ ವ್ರತ ಒಂದನ್ನು ಹೇಳಬೇಕೆಂದು ಪ್ರಾರ್ಥಿಸಿದಾಗ ಸೂತಪುರಾಣಿಕರು ಅವರಿಗೆ ಆಷಾಢ ಅಮವಾಸ್ಯೆಯ ಭೀಮೇಶ್ವರ ವ್ರತವು ಬಹಳ ಪುಣ್ಯದಾಯಕ ಎಂದು ಆ ವ್ರತ ಮಹಾತ್ಮ್ಯೆಯನ್ನು ಹೇಳಿದರು.

ಬಹಳ ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ಮಹಾಪರಾಕ್ರಮಿಯಾದ ರಾಜನಿಗೆ, ಜಯಶೇಖರ ಎಂಬ ಸುಂದರನೂ,
ಸರ್ವಗುಣಸಂಪನ್ನನಾದ ಮಗನಿದ್ದನು. ಆದರೆ ಅವನು ವಿಧಿವಶದಿಂದ ಅಕಾಲಮರಣಕ್ಕೀಡಾದನು.
ವಜ್ರಬಾಹುವಿಗೆ ಪುತ್ರಶೋಕ ಬಲವಾಗಿ, ತನಗೂ,ತನ್ನ ಪಿತೃಗಳಿಗೂ ತಿಲೋದಕ ಕೊಡುವವರೇ ಇಲ್ಲದಂತಾಯಿತಲ್ಲ ಎಂದು ದುಃಖಿಸುತ್ತ ಕೊನೆಗೊಂದು ನಿರ್ಧಾರಕ್ಕೆ ಬಂದು, ನನ್ನ ಮಗನ ಈ ಶವಕ್ಕೆ ಯಾರು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾರೆಯೋ ಅವರಿಗೆ ಕೋಟಿ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆ ಎಂದು ಡಂಗುರ ಸಾರಿಸಿದನು.

ಅದೇ ಊರಿನಲ್ಲಿ ಸಕಲ ವೇದ ಶಾಸ್ತ್ರ ಪಾರಂಗತನಾದರೂ ಕಡುಬಡತನದಿಂದ ಸಂಸಾರ ಸಾಕುವುದೇ ಕಷ್ಟವಾಗಿದ್ದ ಮಾಧವಶರ್ಮನೆಂಬ ಬ್ರಾಹ್ಮಣನು ಇದನ್ನು ಕೇಳಿ, ತನ್ನ ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಕೊಡುತ್ತೇನೆ, ನಮಗಿರುವ ಹದಿನಾಲ್ಕು ಮಕ್ಕಳನ್ನು ಪೋಷಿಸುವುದು ಬಹಳ ಕಷ್ಟವಾಗಿದೆ ಎಂದು ತನ್ನ ಪತ್ನಿ ಸುಶೀಲೆಗೆ ತಿಳಿಸಿದನು.

ಸುಶೀಲೆಯು ಪತಿಯೇ, ಲೋಕದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಬಹಳ ಆಲೋಚಿಸಿ, ಅತ್ಯುತ್ತಮ ಧನವಂತರ ಮನೆಗೇ ಬಡವರು ಹೆಣ್ಣು ಕೊಟ್ಟರೆ ಅವಮಾನ ತಪ್ಪದು ಎಂದು ಕೊಡಲಿಚ್ಛಿಸುವುದಿಲ್ಲ.

ಇನ್ನು ನಪುಂಸಕ, ನಿರುದ್ಯೋಗಿ, ಅಂಗಹೀನರಿಗೂ ಕನ್ಯೆಯನ್ನು ಕೊಡುವುದಿಲ್ಲ. ಹೀಗಿರುವಾಗ ನೀವು ಮೃತನಾದವನಿಗೆ ಮಗಳನ್ನು ಕೊಡುತ್ತೇನೆ ಎನ್ನುವಿರಲ್ಲ!
ಅವಳು ವಿಧವೆಯಾಗಿಯೇ ಬಾಳಬೇಕೇ? ಇದು ಯುಕ್ತವಲ್ಲ ಎಂದಳು.

ನಿನಗೆ ಒಬ್ಬಳು ಮಗಳು ಕಡಿಮೆ ಎಂದು ಭಾವಿಸಿಕೋ, ನಾನು ಮೃತರಾಜಪುತ್ರನಿಗೆ ಹಿರಿಯ ಮಗಳು ಚಾರುಮತಿಯನ್ನು ಕೊಟ್ಟೇ ಕೊಡುತ್ತೇನೆಂದು ಮದುವೆ ಮಾಡಿಕೊಟ್ಟನು.

ಮಾತಿನಂತೆ ರಾಜನು ಅವನಿಗೆ ಕೋಟಿ ಹೊನ್ನು ಕೊಟ್ಟನು. ನಂತರ ಪುತ್ರನ ಶವವನ್ನು ಸ್ಮಶಾನಕ್ಕೆ ಸಾಗಿಸಿ, ಸೊಸೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲು ಹೇಳಿದನು.
ಆಕೆಯು ಶುಚಿರ್ಭೂತಳಾಗಿ, ಸರ್ವಾಭರಣ ಧರಿಸಿ, ಯಥೇಚ್ಛ ಮಂಗಳದ್ರವ್ಯಗಳನ್ನು ದಾನಮಾಡಿ, ಭಕ್ತಿಯಿಂದ ಪರಮೇಶ್ವರನನ್ನು ಧ್ಯಾನಿಸುತ್ತ, ಶಾಂತ ಮನಸ್ಸಿನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು.

ಕೂಡಲೇ ಇದ್ದಕ್ಕಿದ್ದಂತೆ ವರ್ಷಧಾರೆಯಾಗಿ ಚಿತೆಯ ಬೆಂಕಿಯು ಆರಿಹೋಯಿತು. ಸೂರ್ಯನೂ ಮುಳುಗಿ ಕತ್ತಲಾಗಿ ಸ್ವಲ್ಪ ಸಮಯದಲ್ಲಿಯೇ ಗಾಢಾಂಧಕಾರವು ಆವರಿಸಿತು. ರಾಜ ಪರಿವಾರವು ಅವಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿತು.

ಸ್ಮಶಾನದಲ್ಲಿ ಏಕಾಂಗಿಯಾಗಿದ್ದ ಚಾರುಮತಿಯು ಭಯಗ್ರಸ್ತಳಾಗಿ ನಡುಗುತ್ತ ,ದೈರ್ಯತಂದುಕೊಂಡು ದುಃಖಾತಿಶಯದಿಂದ ಭಗವಂತ ಕಾಪಾಡು,ಕಾಪಾಡು ಎಂದು ದೀನಳಾಗಿ ಪ್ರಾರ್ಥಿಸುತ್ತ, ನೀನು ಹಿಂದೆ ಮಾರ್ಕಂಡೇಯ, ಸತ್ಯವಾನ, ಚ್ಯವನ, ಮನ್ಮಥ, ಶ್ವೇತವಾಹನ ಮೊದಲಾದ ಅಲ್ಪಾಯುಗಳಿಗೆ ದೀರ್ಘಾಯುವನ್ನು ಕರುಣಿಸಿದವನು.

ನಾನೇನು ಅಪರಾಧ ಮಾಡಿದ್ದೇನೆಂದು ನನಗೀ ಶಿಕ್ಷೆ? ಕೃಪೆ ಮಾಡು ದೇವ ಎಂದು ಅಳುತ್ತಲೇ ಪ್ರಜ್ಞಾಹೀನಳಾದಳು.

ಪರಶಿವನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಪ್ರತ್ಯಕ್ಷನಾಗಿ, ಎದ್ದೇಳು ಪುತ್ರಿ.ಬೇಕಾದ ವರವನ್ನು ಕೇಳು ಎಂದಾಗ ಎಚ್ಚೆತ್ತು ಶಿವನ ಪಾದದ ಮೇಲೆ ತಲೆ ಇಟ್ಟು, ಸೌಮಂಗಲ್ಯ, ಸೌಭಾಗ್ಯ, ಸುಖ ಸಂಪತ್ಸಮೃದ್ಧಿಯನ್ನು ಕೊಡುವ ವ್ರತವನ್ನು ನನಗೆ ಉಪದೇಶಿಸು ಎಂದು ಬೇಡಿದಳು. ಈಶ್ವರನು ತಥಾಸ್ತು ಎಂದು ಜ್ಯೋತಿರ್ಭೀಮೇಶ್ವರ ವ್ರತವನ್ನು ಉಪದೇಶಿಸಿ, ವ್ರತವಿಧಿಯನ್ನು ತಿಳಿಸಿ, ಒಂಬತ್ತು ವರ್ಷ ವ್ರತವನ್ನಾಚರಿಸಿ ನಂತರ ಉದ್ಯಾಪನೆ ಮಾಡಬೇಕು.

ನಾಡಿದ್ದು ಆಷಾಢ ಅಮವಾಸ್ಯೆ, ಅಂದು ಇಲ್ಲಿ ಸಿಕ್ಕುವ ವಸ್ತುಗಳನ್ನೇ ವ್ರತಕ್ಕೆ ಬೇಕಾದ ಸಾಮಗ್ರಿಗಳೆಂದು ಮನಸ್ಸಿನಲ್ಲಿ ಭಾವಿಸಿ ವ್ರತ ಆಚರಿಸು. ನಿನ್ನ ಪತಿಯು ನಿದ್ದೆಯಿಂದೆಚ್ಚತ್ತವನಂತೆ ಮೇಲೆದ್ದು ನವತಾರುಣ್ಯದೊಂದಿಗೆ ನಿನ್ನೊಂದಿಗೆ ಇರುತ್ತಾನೆ ಎಂದು ಹೇಳಿ ಅಂತರ್ಧಾನನಾದನು.

ಚಾರುಮತಿಯು ಸ್ಮಶಾನದ ಮರಗಳಪತ್ರೆ, ಪುಷ್ಪ, ಫಲಾದಿಗಳನ್ನೇ ವ್ರತಸಾಮಗ್ರಿಯಾಗಿ ಭಾವಿಸಿ, ಶುಚಿರ್ಭೂತಳಾಗಿ, ಮಣ್ಣಿನಿಂದ ದೀಪಸ್ತಂಭ ರಚಿಸಿ, ಅಗ್ನಿಯನ್ನಾವಾಹಿಸಿ, ಸಂಜೆ ಭಕ್ತಿಯಿಂದ ವ್ರತ ಮಾಡಿದಳು.

ವ್ರತಪೂಜಾ ಮಹಿಮೆಯಿಂದ ರಾಜಪುತ್ರನು ಕಣ್ತೆರೆದು ಎದ್ದು, ಆಶ್ಚರ್ಯ ಚಕಿತನಾಗಿ, ಅಲ್ಲಿಯವರೆಗಿನ ವೃತ್ತಾಂತವನ್ನು ಚಾರುಮತಿಯಿಂದ ಕೇಳಿ ಆನಂದಭರಿತನಾದನು.

ಬೆಳಗಾಗುತ್ತಲೇ ರಾಜಭಟರಿಂದ ವಿಷಯ ತಿಳಿದ ರಾಜ ವಜ್ರಬಾಹುವು ಆಗಮಿಸಿ,ಚಾರುಮತಿಯಿಂದ ವಿಷಯ ತಿಳಿದು ಸಂತೋಷಗೊಂಡು ಅವಳನ್ನು ಸಮಾಧಾನ ಪಡಿಸಿ, ಇಬ್ಬರನ್ನೂ ಮೆರವಣಿಗೆಯ ಮೂಲಕ ಅರಮನೆಗೆ ಕರೆತಂದು, ಚಾರುಮತಿಯ ಕೈಯಿಂದ ಯಥೇಚ್ಛ ದಾನಧರ್ಮ ಮಾಡಿಸುತ್ತ, ಸಂತೋಷದಿಂದ ಇದ್ದನು.

ಹೀಗೆ ಸೂತಪುರಾಣಿಕರು ಹೇಳಿದ ಕತೆ ಕೇಳಿದ ಶೌನಕಾದಿ ಋಷಿಗಳೂ ಭಕ್ತಿಯಿಂದ ವ್ರತವನ್ನು ಆರಂಭಿಸಿದರು.

ಈ ಕಥೆಯನ್ನು ಯಾರು ಹೇಳುತ್ತಾರೆಯೋ, ಯಾರು ವ್ರತವನ್ನು ಆಚರಿಸಿ ಈ ಕಥೆಯನ್ನು ಕೇಳುತ್ತಾರೆಯೋ ಅವರೆಲ್ಲ ಇಹದಲ್ಲಿ ಸುಖ ಸಂಪತ್ತನ್ನು ಹೊಂದಿ, ಪರದಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಸ್ಕಾಂದ ಪುರಾಣದಲ್ಲಿ ಹೇಳಿದೆ.

ಜ್ಯೋತಿರ್ಭೀಮೇಶ್ವರಾರ್ಪಣಮಸ್ತು

Tags: Bheemeshwara Poojabheemeshwara vrataBhimana Amavasyaಜ್ಯೋತಿರ್ಭೀಮೇಶ್ವರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

15 ಲಕ್ಷದ ಹೈಟೆಕ್ ಭಿಕ್ಷುಕರಿಗೇನು ಗೊತ್ತು, ಮೋದಿಯ ಕರಾಮತ್ತು

Next Post

Highlights: 11.08.2018

kalpa News

kalpa News

Next Post

Highlights: 11.08.2018

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL