ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗಿದ್ದ ಭಾರತವಿಂದು ಅದೇ ಹಳೆಯ ಬಡ ಭಾರತವಾಗಿ ಉಳಿದಿಲ್ಲ. ನರೇಂದ್ರ ಮೋದಿ ಅನ್ನುವ ಆದರ್ಶ ನೇತಾರನ ಮುಂದಾಳತ್ವದಲ್ಲಿ ದೇಶ ಸರ್ವವಿಧದಲ್ಲಿಯೂ ಅಭಿವೃದ್ದಿ ಹೊಂದುತ್ತಿದೆ. ಅಧಿಕಾರ ವಹಿಸಿಕೊಂಡ ಕ್ಷಣದಿಂದ ವಿರಮಿಸದೇ ಅವಿರತವಾಗಿ ದುಡಿಯುತ್ತಿರುವ ಮೋದಿ ಸರಕಾರ ಪ್ರತಿಕ್ಷಣ ಜನತೆ, ಜನತೆ, ಜನತೆ ಅಂತ ದೇಶವಾಸಿಗಳ ಸಂತೋಷದ ಜೀವನಕ್ಕಾಗಿ ದಿನಕ್ಕೊಂದರಂತೆ ಅಭಿವೃದ್ದಿ ಯೋಜನೆಗಳ ಜಾರಿಗೆ ತರುತ್ತಲೇ ಇದೆ.
ಸ್ವಾತಂತ್ರ್ಯಾ ನಂತರದ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದುವರೆಗೂ ಪ್ರಜೆಗಳು ಯಾರ ಸಂತೋಷಕ್ಕೋ ಎಂತೆಂತಹ ಖದೀಮರನ್ನು ಆರಿಸಿ ದೇಶವ ಅಧೋಗತಿಗೆ ತಳ್ಳಿದ್ದರು. ಆದರೆ ಇದೇ ಮೊದಲ ಬಾರಿಗೆ ತಮ್ಮೆಲ್ಲಾ ಸ್ವಾರ್ಥ ಚಿಂತನೆಯ ಬದಿಗಿಟ್ಟು ಒಂದು ಮಹತ್ಕಾರ್ಯ ಮಾಡಿದರು. ಅದುವೇ ವಿದೇಶಿಗಳಿಗೆ ಮಣೆಹಾಸಿದ್ದ ಜನರು ಮೊದಲಬಾರಿಗೆ ದೇಶದ ಉತ್ತಮ ಪ್ರಜೆಯ ಕೈಗಳಿಗೆ ಭಾರತದ ಭವಿಷ್ಯವನ್ನಿತ್ತರು.
ಅದರ ಫಲವಾಗಿ ಜನತೆಯ ಪಾಲಿಗೆ ಬಂದೊದಗಿದ ಕೆಲವು ಮಹತ್ವದ ಯೋಜನೆಗಳ ನಿಮ್ಮ ಮುಂದಿಡುವೆ.
1) 8000 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ
2) 50 ಲಕ್ಷ ಬಡವರಿಗೆ ವಸತಿ ನಿರ್ಮಾಣ
3) ಕೋಟಿಯಷ್ಟು ಶೌಚಾಲಯಗಳ ಮುಖಾಂತರ ಸ್ವಚ್ಛ ಮತ್ತು ಆರೋಗ್ಯವಂತ ಭಾರತದ ನಿರ್ಮಾಣ
4) 6 ಹೊಸ ಭಾರತೀಯ ವೈದ್ಯಕೀಯ ಸಂಸ್ಥೆಗಳನ್ನು ದೇಶದ ನಾನಾ ಭಾಗಳಲ್ಲಿ ಸ್ಥಾಪನೆ
5) ಭಾರತದ ನೌಕಾಸೇನೆಗಾಗಿ 3 ಹೊಸ ಸಬ್ ಮರೀನ್‌ಗಳು
6) ತೇಜಸ್ ಎನ್ನುವ ವಿಮಾನವನ್ನು ಭಾರತದ ವಾಯುಸೇನೆಗಾಗಿ ದೇಶದೊಳಗೇ ತಯಾರಿಕೆ(ಮೇಕ್ ಇನ್ ಇಂಡಿಯಾ)
7) ಧನುಷ್ ಎನ್ನುವ ವಿಸ್ಮಯಕಾರಿ ತೋಪನ್ನು ದೇಶದೊಳಗೇ 2015ರ ನಂತರ ತಯಾರಿಸಿ ರಕ್ಷಣಾ ಪಡೆಗಳಿಗೆ ನೀಡಿದರು
8) ಒಂದು ರ್ಯಾಂಕ್ ಒಂದು ಪೆನ್ಷನ್, ದೇಶದ ನಿವತ್ತ ಸೇನಾನಿಗಳಿಗೆ ನೀಡಿದ್ದು
9) ಪದೇ ಪದೇ ದಾಳಿ ಮಾಡುತ್ತಿದ್ದ ಪಾಪಿ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರನ್ನು ಅವರದೇ ಮರೆದಾಣಗಳಲ್ಲಿ ಸದೆಬಡಿದು ಶಸ್ತ್ರಚಿಕಿತ್ಸಾ(ಸರ್ಜಿಕಲ್ ಸ್ಟ್ರೈಕ್) ಹೊಡೆತ ಎನ್ನುವ ಹೊಸ ಪಾಠ ಕಲಿಸಿದ್ದು
10) ಭೂ ಸೇನೆ, ವಾಯುಸೇನೆ ಮತ್ತು ನೌಕಾಸೇನೆ ಮೂರನ್ನೂ ಬಲ ಪಡಿಸಿದ್ದು
11) 65 ದೇಶಗಳೊಡನೆ ವ್ಯಾಪಾರಕ್ಕಿರುವ ನೆಂಟಸ್ತನ ಬೆಳೆಸಿದ್ದು
12) ಅಭಿವೃದ್ಧಿಯಲ್ಲಿ ಚೀಣ ದೇಶವನ್ನು ಹಿಂದಕ್ಕೆ ತಳ್ಳಿದ್ದು
13) ದೇಶದ ವಿಕಾಸದ ಬೆಲೆಯನ್ನು 7.5 ಕ್ಕೂ ಹೆಚ್ಚಾಗುವಂತೆ ಮಾಡಿದ್ದು
14) ಬೆಲೆ ಏರಿಕೆಯನ್ನು 5ಕ್ಕೂ ಕಡಿಮೆ ಇರುವಂತೆ ಮಾಡಿದ್ದು
15) ರೈತಾಪಿಗಳಿಗೆ ಫಸಲ್ ವಿಮೆ ಎನ್ನುವ ಅಗ್ಗದ ವಿಮೆ ಪದ್ದತಿ ನೀಡಿದ್ದು
16) ವರ್ಷಕ್ಕೆ 12 ರೂಪಾಯಿ ಕಟ್ಟಿದರೆ 2 ಲಕ್ಷ ರೂಪಾಯಿಯ ವಿಮಾ ಯೋಜನೆ ನೀಡಿದ್ದು
17) ನೋಟು ಅಮಾನ್ಯೀಕರಣದ ಮೂಲಕ ನಕ್ಸಲೀಯರನ್ನು ಮತ್ತು ಪಾಕಿಸ್ಥಾನಿಯರನ್ನು ಗತಿಯಿಲ್ಲದ ನಿಸ್ಸಹಾಯಕರನ್ನಾಗಿಸಿದ್ದು
18) ಭಾರತದ ವಾಯು ಪಡೆಯನ್ನು ಫ್ರೆಂಚರ ರಾಫೇಲ್ ವಿಮಾನಗಳ ಖರೀದಿಯ ಮೂಲಕ ಬಲ ಪಡಿಸಿದ್ದು
19) ಸೌದಿ ಅರೇಬಿಯಾದ ಶೇಖ್ ಮೂಲಕ ಅವರ ದೇಶದಲ್ಲೇ ಮಂದಿರ ನಿರ್ಮಾಣ ಕಾರ್ಯ ಮಾಡಿಸಿದ್ದು
20) ಉಗ್ರ ಬುರಾನ್ ವಾನಿಯ ಹತ್ಯೆ
21) ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಗೆ ಅವರ ಸ್ಥಾನ ತೋರಿಸಿ, ತಕ್ಕಮಟ್ಟಿಗೆ ಕಾಶ್ಮೀರದ ಸಮಸ್ಯೆಗೆ ಪರಿಹಾರ
22) ಮೊದಲ ಸ್ವದೇಶಿ ಎಖ ಉಪಗ್ರಹ ನಾವಿಸ್
23) ಪ್ರತಿಯೊಬ್ಬ ಪ್ರಜೆಯೂ ಪ್ರಧಾನಿಯೊಂದಿಗೆ ಸಂಪರ್ಕಿಸುವ ವಿಧಾನ
24) ಆಧಾರ್, ಭೀಮ್, ಮುದ್ರಾ ಯೋಜನೆಗಳು
25) ಇವೆಲ್ಲಕ್ಕಿಂತಲೂ ಮಿಗಿಲಾದ ಅತ್ಯುತ್ತಮವಾದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನೇಮಕ
ಇದುವರೆಗೂ ದೇಶ ಕಂಡರಿಯದ ಇಷ್ಟೆಲ್ಲಾ ಅಭಿವೃದ್ದಿ ಯೋಜನೆಗಳ ಜಾರಿಗೆ ತಂದರೂ ಮೋದಿ ಸರಕಾರಕ್ಕೆ ಬಲುದೊಡ್ಡ ಸವಾಲಾಗಿರುವ ಒಂದೇ ಪ್ರಶ್ನೆಯೆಂದರೆ ಹೈಟೆಕ್ ಭಿಕ್ಷುಕರು ಬಿತ್ತರಿಸುವ 15 ಲಕ್ಷದ ವಿಚಾರ.
ಅನುಕೂಲತೆ, ಆವಿಷ್ಕಾರಗಳು ಹೆಚ್ಚಾದಂತೆಲ್ಲಾ ಮನುಷ್ಯ ಆಲಸಿಯಾಗುತ್ತಾನೆ. ಅನ್ನುವ ವಿಚಾರ ನಿಜವೆಂಬುದು ಪದೇ ಪದೇ ಅರಿವಾಗುತ್ತಿದೆ. ಎಲ್ಲೋ ಪಟ್ಟಣದಲ್ಲಿ ಅವಿತಿರುವ ಆಧುನಿಕ ಬುದ್ದಿಜೀವಿಗಳು ಮೈಮುರಿದು ದುಡಿಯಲಾರದೇ ಯಾರದ್ದೋ ಎಂಜಲುಗಾಸಿಗೆ ಕೈಚಾಚಿ ಪ್ರತಿದಿನ ಮೋದಿ ವಿರೋಧಿ ಹೇಳಿಕೆಗಳ ನೀಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗಿರುವ, ದೇಶದ ಅಭಿವೃದ್ದಿಯ ಸಹಿಸಲಾಗದ ಈ ಹೈಟೆಕ್ ಭಿಕ್ಷುಕರು ಇದೀಗ ಆರಂಭಿಸಿಕೊಂಡಿರುವ ಹೊಸವರಸೆಯೇ ಮೋದಿ 15ಲಕ್ಷ ಕೊಟ್ಟಿಲ್ಲ ಅನ್ನುವುದಾಗಿದೆ. ಈ ಮೂಲಕ ಜನಸಾಮಾನ್ಯನನ್ನೂ ಮೋದಿ ವಿರೋಧಿಯಾಗಿಸಲು ಯತ್ನಿಸುವ ಇವುಗಳು ದೇಶದಲ್ಲಿ ಇಷ್ಟು ಹಗರಣಗಳಾದರೂ ಅವುಗಳ ವಿರುದ್ಧ ಒಮ್ಮೆಯೂ ದನಿಯೆತ್ತಿಲ್ಲ. ಈ ನಕ್ಸಲ್ ವಾದಿಗಳನ್ನು ಅನ್ನ ಹಾಕಿ ಸಾಕುತ್ತಿರುವವರು ವಿದೇಶದಲ್ಲಿ ಅಕ್ರಮವಾಗಿ ಕೂಡಿಟ್ಟ ಕಪ್ಪುಹಣದ ಬಗ್ಗೆಯೂ ದನಿಯೆತ್ತಿಲ್ಲ.
ಹಾಗಾದರೆ ಮೋದಿ ಪ್ರತಿಯೊಬ್ಬನಿಗೂ ಹದಿನೈದು ಲಕ್ಷ ನೀಡಲಾರರೇ? ಅಕಸ್ಮಾತ್ ನೀಡಿದರೆ ಮೋದಿ ವಿರೋಧಿ ನಕ್ಸಲ್ ವಾದಿಗಳು ತೆಗೆದುಕೊಳ್ಳಲಾರರೆ?
ಒಂದು ವೇಳೆ ವಿದೇಶದಲ್ಲಿ ಅಕ್ರಮವಾಗಿ ಕೂಡಿಟ್ಟ ಎಲ್ಲಾ ಕಪ್ಪು ಹಣಗಳು ಮರಳಿ ಭಾರತಕ್ಕೆ ಬಂದರೆ ಭಾರತವು ಅಮೆರಿಕಾ, ರಷ್ಯಾದಂತಹ ಬಲಿಷ್ಠವಾದ, ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಸವಾಲೆಸೆದು ಮುನ್ನಡೆಯಬಹುದು. ಒಂದು ವೇಳೆ ಹಾಗಾದರೆ ಜನಸಾಮಾನ್ಯನಿಗೆ 15ಲಕ್ಷ ಸಿಗದಿದ್ದರೂ ಮುಂದಿನ ಪೀಳಿಗೆಗೆ ಅದರ ದುಪ್ಪಟ್ಟು ಲಾಭವಾಗುವುದು. ಹೇಗೆ ನಮ್ಮವರು ಇಂದು ಉದ್ಯೋಗ ಅರಸಿ ಅಮೆರಿಕಾ, ಆಸ್ಟ್ರೇಲಿಯಾ, ಅರಬ್ ಮುಂತಾದ ರಾಷ್ಟ್ರಗಳಲ್ಲಿ ದುಡಿಯುವರೋ, ಭವಿಷ್ಯ ಭಾರತದಲ್ಲಿ ವಿದೇಶಿಯರು ನಮ್ಮಲ್ಲಿ ಬಂದು ದುಡಿಯುವಂತಾಗುವುದು.
ಎಷ್ಟೇ ವಿರೋಧಿಗಳು ಹುಟ್ಟಿಕೊಂಡರೂ, ಎಷ್ಟೇ ಟೀಕೆಗಳು ಬಂದರೂ ಯಾವುದನ್ನೂ ಲೆಕ್ಕಿಸದೇ ಸದಾ ದೇಶದ ಹಿತಕ್ಕಾಗಿ ದುಡಿಯುತ್ತಿರುವ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭಾರತದ ಭವಿಷ್ಯವೇ ಬದಲಾಗುವುದು.
ಅಂದು ಕುಬೇರನಿಗಾಗಿ ವಿಶ್ವಕರ್ಮನು ಸ್ವರ್ಣ ನಗರಿ ಲಂಕೆಯ ನಿರ್ಮಿಸಿದಂತೆ, ಭಾರತೀಯ ಪ್ರಜೆಗಳ ಹಿತಕ್ಕಾಗಿ ಸಂಪನ್ನ ಭಾರತವ ನಿರ್ಮಿಸುವ ಮೂಲಕ ಭವ್ಯ ಭಾರತದ ನಿರ್ಮಾತೃ ಆಧುನಿಕ ವಿಶ್ವಕರ್ಮ ಮೋದಿ ಎಂದೇ ಖ್ಯಾತರಾಗುವರು.
ಚಿಂತಿಸಿ ಪ್ರಜೆಗಳೇ, ದೇಶವ ಕತ್ತಲಿನಲ್ಲಿ ಮುಳುಗಿಸುವಿರಾ? ಅಥಾವ ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಮೋದಿ ಸರಕಾರವ ಗೆಲ್ಲಿಸುವಿರಾ?
ಭವ್ಯ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಸರಕಾರ
ಲೇಖನ: ಯೋಗಿ, ಸುಳ್ಯ
Discussion about this post