ಕೊಚ್ಚಿ: ದೇಶದ ಅತಿದೊಡ್ಡ ನೀರು ಸಂಗ್ರಹಗಾರ ಕೇರಳದ ಇಡುಕ್ಕಿ ಅಣೆಕಟ್ಟೆ ಅಪಾಯದ ಮಟ್ಟ ತಲುಪಿದ್ದು, ಈ ಭಾಗದಲ್ಲಿ ತೀವ್ರ ಆತಂಕದ ಪರಿಸ್ಥಿತಿ ಉಂಟಾಗಿದೆ.
The floods in Kerala have caused severe damage to crops & infrastructue. It has also caused loss of precious lives and forced thousands to take shelter in relief camp. We are providing all possible assistance to the state. Centre to provide additional 100 crores to Kerala. pic.twitter.com/Ufq58HCEq0
— Rajnath Singh (@rajnathsingh) August 12, 2018
ಈ ಕುರಿತಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಕೇರಳದ ಪರಿಸ್ಥಿತಿ ಗಂಭೀವಾಗಿದ್ದು, ತುರ್ತು ಕ್ರಮಗಳನ್ನು ನಿರಂತರವಾಗಿ ನಡೆಸಲು ಆದೇಶ ನೀಡಿದೆ. ಪರಿಸ್ಥಿತಿ ಕುರಿತಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎಲ್ಲ ರೀತಿಯ ಕಾರ್ಯಾಚರಣೆ ನಡೆಸಲು ಆದೇಶ ನೀಡಿದ್ದು, ಕೇರಳ ರಾಜ್ಯಕ್ಕೆ ಎಲ್ಲ ರೀತಿಯ ನೆರವನ್ನು ಕೇಂದ್ರ ಸರ್ಕಾರ ಸಿದ್ವಿವಿದೆ ಎಂದಿದ್ದಾರೆ.
ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ರಾಜನಾಥ್ ಸಿಂಗ್, ರಾಜ್ಯದ ಜನತೆ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರವಾಹ ಪೀಡಿತ ರಾಜ್ಯಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು. ಪ್ರವಾಹದಲ್ಲಿ ನೆಲೆ ಕಳೆದುಕೊಂಡವರ ಸಮಸ್ಯೆಗಳನ್ನೂ ಇದೇ ವೇಳೆ ರಾಜನಾಥ್ ಸಿಂಗ್ ಆಲಿಸಿದ್ದಾರೆ.
ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತವೂ ಉಂಟಾಗಿದೆ. ಇನ್ನು ಇಡುಕ್ಕಿ ಹಾಗೂ ಇಡಮಲಯಾರ್ ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಈ ಭಾಗದ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇಂದು ಮುಂಜಾನೆ ಅಣೆಕಟ್ಟೆಯ ನೀರಿನ ಮಟ್ಟ 2397,94 ಅಡಿಗೆ ತಲುಪಿದ್ದು, ಪೂರ್ಣ ನೀರಿನ ಮಟ್ಟ 2403 ಅಡಿಗಳಾಗಿವೆ.
Discussion about this post