ದಾವಣಗೆರೆ: ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿ ಇಹಲೋಕ ತ್ಯಜಿಸಿದ್ದು, ಇಡಿಯ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.
ದೇಶದಾದ್ಯಂತ ಅಟಲ್ ಜೀ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ವಂದನೆ ಸಲ್ಲಿಸಿದ್ದಾರೆ.
ದಾವಣಗೆರೆಯ ಕಡ್ಲೆಬಾಳು ಧನುಂಜಯ ಎನ್ನುವವರು ಅಟಲ್ ಜೀ ಅವರ ಭಾವಚಿತ್ರವನ್ನು ದೇವರ ಮನೆಯಲ್ಲಿಟ್ಟು, ಪೂಜೆ ಸಲ್ಲಿಸಿ, ನಮನ ಸಲ್ಲಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರಾಗಿರುವ ಧನುಂಜಯ ತರಳುಬಾಳು ಬಡಾವಣೆ ನಿವಾಸಿಯಾಗಿದ್ದು, ಅಟಲ್ ಜೀ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.
ತಮ್ಮ ಅಭಿಮಾನದ ನಾಯಕ ವಿಧಿವಶರಾದ ಹಿನ್ನೆಲೆಯಲ್ಲಿ ಈ ರೀತಿ ಪೂಜೆ ಸಲ್ಲಿಸಿ ಕೃತಜ್ಞತೆ ಹಾಗೂ ನಮನ ಸಲ್ಲಿಸಿದ್ದಾರೆ ಧನುಂಜಯ.
Discussion about this post