ಕೋಲ್ಕತ್ತಾ: ಸೈದ್ದಾಂತಿಕವಾಗಿ, ರಾಜಕೀಯವಾಗಿ ಬಿಜೆಪಿ ವಿರುದ್ಧದ ತಮ್ಮ ದ್ವೇಷವನ್ನು ಮತ್ತೆ ಹೊರ ಹಾಕಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2019ರಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಎನ್ ಆರ್ ಸಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಪಶ್ಚಿಮ ಬಂಗಾಳದಲ್ಲಿ ಇದರ ಜಾರಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಎನ್ ಆರ್ ಸಿಯನ್ನು ನಾವು ಬಂಗಾಳದಲ್ಲಿ ಕಾರ್ಯಗತಗೊಳಿಸಲು ಬಿಡುವುದಿಲ್ಲ. ನಮಗೆ ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಅದಕ್ಕೆ ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದರು.
ಪ್ರಜೆಗಳನ್ನು ವಿದೇಶಿಗರು ಎಂದು ಕರೆದರೆ ತಾವು ಸಹಿಸುವುದಿಲ್ಲ ಎಂದಿರುವ ಮಮತಾ, ನಾವು ಬಂಗಾಳದ ಹುಲಿಗಳು, ಭಾರತೀಯ ಪ್ರಜೆಗಳನ್ನು ಇಲ್ಲಿ ವಿದೇಶಿಯರು ಎಂದು ಕರೆದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
Discussion about this post