No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, October 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸ್ಮಾರ್ಟ್ ಹೂಡಿಕೆದಾರರು ಅಗತ್ಯವಿಲ್ಲದಿದ್ದರೂ ಏಕೆ ಸಾಲ ಪಡೆಯುತ್ತಿದ್ದಾರೆ?

kalpa News by kalpa News
February 6, 2026
in Special Articles
0
ಸ್ಮಾರ್ಟ್ ಹೂಡಿಕೆದಾರರು ಅಗತ್ಯವಿಲ್ಲದಿದ್ದರೂ ಏಕೆ ಸಾಲ ಪಡೆಯುತ್ತಿದ್ದಾರೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಹಿಂದಿನ ದಿನಗಳಲ್ಲಿ ತುರ್ತು ಸಂದರ್ಭಗಳಿಗಾಗಿ ಮಾತ್ರ ಸಾಲ ಪಡೆಯಲಾಗುತ್ತಿತ್ತು. ಆದರೆ ಈಗ ಹಳೆಯ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಈಗ ಗ್ರಾಹಕರು ಆಸ್ತಿ, ಶಿಕ್ಷಣ, ಪ್ರವಾಸ, ಆರೋಗ್ಯ ಮತ್ತು ಜೀವನಶೈಲಿಯಂತಹ ವಿವಿಧ ಅಗತ್ಯಗಳಿಗಾಗಿ ವೈಯಕ್ತಿಕ ಸಾಲಗಳನ್ನು ಪಡೆಯುತ್ತಿದ್ದಾರೆ.

ಭಾರತದಲ್ಲಿ ವೈಯಕ್ತಿಕ ಸಾಲಗಳು #PersonalLoan ಕೇವಲ “ಸಂಕಷ್ಟದ ಸಮಯದಲ್ಲಿ ಮಾತ್ರ” ಪಡೆಯುವಂತಹವು ಎಂಬ ಹಳೆಯ ದೃಷ್ಟಿಕೋನವು ನಿರಂತರವಾಗಿ ಬದಲಾಗುತ್ತಿದೆ. ವಿಶೇಷವಾಗಿ ಸ್ಥಿರ ಉದ್ಯೋಗ ಮತ್ತು ಸುಸ್ಥಿರ ಸಂಬಳ ಹೊಂದಿರುವ ಗ್ರಾಹಕರಲ್ಲಿ ಹೆಚ್ಚಾಗಿ ಈ ಬದಲಾವಣೆ ಕಂಡುಬರುತ್ತಿದೆ. ಇವರು ವರ್ಷಗಳಿಂದ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿರುವವರು ಮತ್ತು ಸತತವಾಗಿ ದೀರ್ಘಕಾಲದ ಉಳಿತಾಯ ಹಾಗೂ ಹೂಡಿಕೆಗಳನ್ನು ಮಾಡುತ್ತಾ ಬಂದಿರುವವರಾಗಿದ್ದಾರೆ.

ವಿಶೇಷವಾಗಿ ಕೋವಿಡ್ ನಂತರ ಬದಲಾಗಿದ್ದು ಅವರ ಹೂಡಿಕೆ ಮಾಡುವ ಸಾಮರ್ಥ್ಯ ಅಲ್ಲ, ಬದಲಾಗಿ ‘ಹೂಡಿಕೆ’ #Investment ಎನ್ನುವುದರ ನಿಜವಾದ ಅರ್ಥ. ಆರ್ಥಿಕವಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ತಾವು ಸರಿಯಾದ ಹಾದಿಯಲ್ಲಿದ್ದರೂ, ಅರಿವಿಲ್ಲದೆಯೇ ತಮ್ಮ ಆರೋಗ್ಯ, ಮನಸ್ಸು ಮತ್ತು ದೇಹದ ಮೇಲಿನ ಹೂಡಿಕೆಯನ್ನು ಕಡೆಗಣಿಸಿರುವುದನ್ನು ಅನೇಕರು ಈ ಅವಧಿಯಲ್ಲಿ ಅರಿತುಕೊಂಡರು. ಪ್ರಸ್ತುತ ಕೆಲಸದ ಒತ್ತಡ ಮತ್ತು ವೇಗದ ಜೀವನಶೈಲಿಯಿಂದಾಗಿ ಯೋಗಕ್ಷೇಮ, ಸ್ವಯಂ-ಆರೈಕೆ ಮತ್ತು ಜೀವನಮಟ್ಟದ ಸುಧಾರಣೆಗಳು ಐಷಾರಾಮಿತನವಾಗಿ ಉಳಿದಿಲ್ಲ, ಬದಲಿಗೆ ದೈನಂದಿನ ಅಗತ್ಯಗಳಾಗಿ ಮಾರ್ಪಟ್ಟಿವೆ. ಆ ಅರಿವು ಕಳೆದ ಕೆಲವು ವರ್ಷಗಳಲ್ಲಿ ಮತ್ತಷ್ಟು ಗಾಢವಾಗಿದೆ.

ಇದರ ಪರಿಣಾಮವಾಗಿ, ಈಗ ಸಾಲ ಪಡೆಯುತ್ತಿರುವವರು ಹೆಚ್ಚು ಸ್ಪಷ್ಟತೆ ಮತ್ತು ಉದ್ದೇಶದೊಂದಿಗೆ ಖರ್ಚು ಮಾಡುತ್ತಿದ್ದಾರೆ. ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗಿದ್ದ ಆರೋಗ್ಯ, ಶಿಕ್ಷಣ, ಅರ್ಥಪೂರ್ಣ ಅನುಭವಗಳು, ಮನೆ ಮತ್ತು ವೈಯಕ್ತಿಕ ಆಸೆಗಳ ಪೂರೈಕೆಗೆ ಅವರು ಆದ್ಯತೆ ನೀಡುತ್ತಿದ್ದಾರೆ. ಮುಖ್ಯವಾಗಿ, ಕಷ್ಟಪಟ್ಟು ಮಾಡಿದ ಹೂಡಿಕೆಗಳಲ್ಲಿ ಈ ಆಸೆಗಳನ್ನು ಪೂರೈಸಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ಅವರಿಗೆ ಇಎಂಐ ಕಂತುಗಳನ್ನು ಪಾವತಿಸುವ ಸಾಮರ್ಥ್ಯವಿದೆ, ಹಾಗೆಯೇ ತಮ್ಮ ಎಸ್‌ಐಪಿ, ದೀರ್ಘಕಾಲೀನ ಪೋರ್ಟ್‌ಫೋಲಿಯೊ ಮತ್ತು ನಿವೃತ್ತಿ ಯೋಜನೆಗಳು ಯಾವುದೇ ಅಡೆತಡೆಯಿಲ್ಲದೆ ಬೆಳೆಯುತ್ತಿರಬೇಕೆಂದು ಅವರು ಬಯಸುತ್ತಾರೆ.
ಹಾಗಾಗಿ ಅವರಿಗೆ ವೈಯಕ್ತಿಕ ಸಾಲಗಳು ಒಂದು ಪ್ರಾಯೋಗಿಕ ಆಯ್ಕೆಯಾಗಿವೆ. ಎಷ್ಟು ಇಎಂಐ ಕಟ್ಟಬೇಕು ಎಂದು ಮೊದಲೇ ಗೊತ್ತಿದ್ದರೆ ಇಂದಿನ ಖರ್ಚುಗಳನ್ನು ನಿಭಾಯಿಸುವುದು ಸುಲಭವಾಗುತ್ತದೆ ಮತ್ತು ದೀರ್ಘಕಾಲದ ಹೂಡಿಕೆಯನ್ನು ಮುಂದುವರಿಸುವುದಕ್ಕೂ ನೆರವಾಗುತ್ತದೆ. ವಾಸ್ತವವಾಗಿ, “ಕನಸುಗಳನ್ನು ನನಸಾಗಿಸಲು” ಸಾಲ ಪಡೆಯುವ ಹಳೆಯ ಪರಿಕಲ್ಪನೆಯು ಈಗ ಬದಲಾಗಿದೆ. ಈ ಕಾಲದ ಅನೇಕ ಸಾಲಗಾರರು ಈಗಾಗಲೇ ಹೂಡಿಕೆದಾರರಾಗಿದ್ದಾರೆ ಮತ್ತು ಅವರು ತಮ್ಮ ಸಂಪತ್ತು ವೃದ್ಧಿಯ ಪಯಣಕ್ಕೆ ವಿರಾಮ ನೀಡದೆ ತಮ್ಮ ಗುರಿಗಳನ್ನು ಮುಟ್ಟಲು ಸಾಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ.

ಈ ಟ್ರೆಂಡ್ ನ ಮೂಲದಲ್ಲಿ ಪ್ರಬುದ್ಧ ಸಾಲಗಾರನ ಮನಸ್ಥಿತಿಯಿದೆ. ಅಲ್ಪಾವಧಿಯ ಅಗತ್ಯಗಳಿಗಾಗಿ ದೀರ್ಘಕಾಲೀನ ಹೂಡಿಕೆಗಳನ್ನು ಹಾಳು ಮಾಡದಿರಲು ಅನೇಕ ಗ್ರಾಹಕರು ಬಯಸುತ್ತಾರೆ. ಏಕೆಂದರೆ ಹಾಗೆ ಮಾಡುವುದರಿಂದ ಹೂಡಿಕೆಯ ಬೆಳವಣಿಗೆಗೆ ಅಡ್ಡಿಯಾಗುತ್ತದೆ, ಭವಿಷ್ಯದ ಲಾಭ ಕಡಿಮೆ ಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಬಂಡವಾಳ ಲಾಭದ ತೆರಿಗೆಯ ಹೊರೆಯನ್ನೂ ಉಂಟುಮಾಡಬಹುದು. ಬದಲಾಗಿ, ಒಂದು ನಿರ್ದಿಷ್ಟ ಮಾಸಿಕ ಕಂತು ಪಾವತಿಸುವ ಮೂಲಕ, ಅವರು ತಮ್ಮ ಎಸ್‌ಐಪಿಗಳು, ಈಕ್ವಿಟಿ ಹೂಡಿಕೆಗಳು ಮತ್ತು ನಿವೃತ್ತಿ ಯೋಜನೆಗಳನ್ನು ನಿಲ್ಲಿಸದೆಯೇ ತಕ್ಷಣದ ಅಗತ್ಯಗಳನ್ನು, ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

Also Read: ಟಿವಿಕೆ ಮುಖ್ಯಸ್ಥ, ನಟ ವಿಜಯ್’ಗೆ 1.5 ಕೋಟಿ ಐಟಿ ದಂಡ | ನ್ಯಾಯಾಲಯದಲ್ಲೂ ಹಿನ್ನಡೆ

ವಿವಿಧ ನಗರಗಳಲ್ಲಿ ಕೆಲವರು ತಮ್ಮ ಕ್ಷೇಮಕ್ಕಾಗಿ, ಕೆಲವರು ಜೀವನದ ಪ್ರಮುಖ ಘಟ್ಟಗಳಿಗಾಗಿ, ಇನ್ನು ಕೆಲವರು ತಾವು ಬಹಳ ದಿನಗಳಿಂದ ಹಂಬಲಿಸುತ್ತಿದ್ದ ಆಸ್ತಿ ಖರೀದಿಗಾಗಿ ಸಾಲವನ್ನು ಬಳಸುತ್ತಿದ್ದಾರೆ. ತಮ್ಮ ದೀರ್ಘಕಾಲೀನ ಆರ್ಥಿಕ ಯೋಜನೆಯನ್ನು ಅಸ್ಥಿರಗೊಳಿಸದೆಯೇ, ಸಮಯಕ್ಕೆ ತಕ್ಕಂತೆ ವೇಗವಾಗಿ ಸ್ಪಂದಿಸಲು ಗ್ರಾಹಕರು ಈಗ ವೈಯಕ್ತಿಕ ಸಾಲಗಳನ್ನು ಬಳಸುತ್ತಿದ್ದಾರೆ.
ಇಂದಿನ ಗ್ರಾಹಕರು ವೈಯಕ್ತಿಕ ಸಾಲಗಳನ್ನು ಹೇಗೆ ಬಳಸುತ್ತಿದ್ದಾರೆ?
ಸಾಲ ಪಡೆಯುವ ಮಾದರಿಗಳನ್ನು ಗಮನಿಸಿದರೆ, ಅವುಗಳು ಒಂದು ಉತ್ತಮವಾದ ಯೋಜಿತ ಬಳಕೆಯನ್ನು ಸೂಚಿಸುತ್ತವೆ.

ಉದಾಹರಣೆಗೆ ಗ್ರಾಹಕರು ತಮ್ಮ ಆಕಾಂಕ್ಷೆ ಪೂರೈಕೆ ಮತ್ತು ಕ್ಷೇಮಪಾಲನೆಗೆ ಪೂರಕವಾದ “ಜೀವನದ ಹೂಡಿಕೆಗಳ” ಕಾರಣಖ್ಕೆ ವೈಯಕ್ತಿಕ ಸಾಲಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದದರ ಜೊತೆಗೆ, ಚಟುವಟಿಕೆ ಆಧಾರಿತ ಮತ್ತು ವೈಯಕ್ತಿಕ ಅನುಭವ ನೀಡುವ ಪ್ರವಾಸಗಳು, ಪ್ರಕೃತಿ, ಮೌನ, ಧ್ಯಾನ ಮತ್ತು ಡಿಜಿಟಲ್ ಡಿಟಾಕ್ಸ್ ಕೇಂದ್ರಿತ ಯೋಗಕ್ಷೇಮ ಶಿಬಿರಗಳು ಹಾಗೂ ಚರ್ಮ ಆರೈಕೆ ಚಿಕಿತ್ಸೆ, ಕೂದಲು ಮರುಸ್ಥಾಪನೆ ಮತ್ತು ವರ್ಷಗಳಿಂದ ಮುಂದೂಡುತ್ತಾ ಬಂದಿದ್ದ ಸೌಂದರ್ಯವರ್ಧಕ ಚಿಕಿತ್ಸೆಗಳಂತಹ ಆತ್ಮವಿಶ್ವಾಸ ಹೆಚ್ಚಿಸುವ ಸ್ವಯಂ-ಆರೈಕೆ ಕ್ರಮಗಳ ಕಡೆಗೆ ಬಹುತೇಕರು ಗಮನ ಹರಿಸುತ್ತಿದ್ದಾರೆ. ಇವುಗಳ ಜೊತೆಗೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಮನೆ ನವೀಕರಣ ಮತ್ತು ಸುಧಾರಣೆ ಹಾಗೂ ಮದುವೆ, ಕೌಟುಂಬಿಕ ಬದ್ಧತೆಗಳು ಮತ್ತು ಪ್ರಮುಖ ಸಂಭ್ರಮಾಚರಣೆಗಳಂತಹ ಜೀವನದ ಮೈಲಿಗಲ್ಲುಗಳಿಗಾಗಿ ಉದ್ದೇಶಪೂರ್ವಕವಾಗಿ ಖರ್ಚು ಮಾಡುವ ಟ್ರೆಂಡ್ ಎದ್ದು ಕಾಣುತ್ತಿದೆ.

ವೈಯಕ್ತಿಕ ಸಾಲಗಳನ್ನು ಪ್ರಾಯೋಗಿಕ ಹಾಗೂ ದಿನನಿತ್ಯದ ಆರ್ಥಿಕ ನಿರ್ವಹಣೆಗಾಗಿ ಕೂಡ ಬಳಸಲಾಗುತ್ತಿದೆ. ಉತ್ತಮ ನಿಯಂತ್ರಣ ಹೊಂದುವ ಮತ್ತು ನೆಮ್ಮದಿ ಗಳಿಸುವ ಉದ್ದೇಶದಿಂದ, ಅನೇಕ ಗ್ರಾಹಕರು ತಮ್ಮ ವಿವಿಧ ಪಾವತಿಗಳನ್ನು ಒಟ್ಟುಗೂಡಿಸಿ ಒಂದು ನಿಗದಿತ ಇಎಂಐ ಅಡಿಯಲ್ಲಿ ತರಲು ‘ಸಾಲಗಳ ಕ್ರೋಡೀಕರಣ’ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ವಾಹನ ಖರೀದಿ ಅಥವಾ ತಡಮಾಡಲಾಗದ ಅತ್ಯಗತ್ಯ ಸುಧಾರಣೆಗಳ ಕಾರಣಕ್ಕೆ ಸಾಲದ ಮೊರೆ ಹೋಗುತ್ತಿದ್ದಾರೆ. ಶಿಸ್ತುಬದ್ಧ ಮತ್ತು ಸಕಾಲಿಕ ಮರುಪಾವತಿಯ ಮೂಲಕ ತಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನು ಬಲಪಡಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ವೈಯಕ್ತಿಕ ಸಾಲಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇವರು ಉತ್ತಮ ಆರ್ಥಿಕ ಶಿಸ್ತನ್ನು ಭವಿಷ್ಯದಲ್ಲಿ ಹಣಕಾಸು ಸೌಲಭ್ಯ ಪಡೆಯುವ ಅರ್ಹತೆ ಮತ್ತು ಉತ್ತಮ ಸಾಲದ ನಿಯಮಗಳಿಗಾಗಿ ಮಾಡುವ ಹೂಡಿಕೆ ಎಂದು ಪರಿಗಣಿಸುತ್ತಾರೆ.

ಅದೇ ರೀತಿ, ಪ್ರಮುಖ ನಿರ್ಧಾರಗಳನ್ನು ಮುಂದೂಡುವುದರಿಂದ ಉಂಟಾಗುವ ನಷ್ಟವನ್ನೂ ಬಹುತೇಕರು ಈಗ ಅರಿತುಕೊಳ್ಳುತ್ತಿದ್ದಾರೆ. ಅದು ದೈನಂದಿನ ಜೀವನವನ್ನು ಸುಧಾರಿಸುವ ಮನೆಯ ನವೀಕರಣವಿರಬಹುದು ಅಥವಾ ಒತ್ತಡದ ಬದುಕಿನಲ್ಲಿ ಅಗತ್ಯವಿರುವ ಸ್ವಯಂ-ಆರೈಕೆಯ ವಿಷಯವಿರಬಹುದು. ಅನೇಕರ ಪಾಲಿಗೆ, ವೈಯಕ್ತಿಕ ಸಾಲವನ್ನು ಪಡೆಯುವುದು ಎಂದರೆ ಇಂದಿನ ಅಗತ್ಯತೆಗಳು ಮತ್ತು ನಾಳೆಯ ಗುರಿಗಳ ನಡುವೆ ಜವಾಬ್ದಾರಿಯುತವಾಗಿ ಸಮತೋಲನವನ್ನು ಕಾಯ್ದುಕೊಳ್ಳುವುದಾಗಿದೆ.ಸಾಲದಲ್ಲಿ ವಿಶ್ವಾಸ ಹೆಚ್ಚುತ್ತಿರುವುದು ಏಕೆ?
ವೈಯಕ್ತಿಕ ಸಾಲವನ್ನು ಅರ್ಥಮಾಡಿಕೊಳ್ಳುವುದು ಮತ್ತು ಯೋಜಿಸುವುದು ಈಗ ಹೆಚ್ಚು ಸುಲಭವಾಗಿದೆ:

  • ಸಾಲದ ನಿಯಮಗಳು ಮತ್ತು ವೆಚ್ಚಗಳು ಈಗ ಹೆಚ್ಚು ಸ್ಪಷ್ಟ ಹಾಗೂ ಪಾರದರ್ಶಕವಾಗಿವೆ.
  • ಸಾಲ ಮಂಜೂರಾತಿ ಪ್ರಕ್ರಿಯೆಯು ವೇಗವಾಗಿದ್ದು, ಸುಲಭವಾಗಿ ಲಭ್ಯವಾಗುತ್ತಿದೆ.
  • ಬಜೆಟ್ ರೂಪಿಸಲು ಇಎಂಐ ರಚನೆಗಳು ಸರಳವಾಗಿವೆ.
  • ಡಿಜಿಟಲ್ ಪ್ರಕ್ರಿಯೆಗಳು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತವೆ.

ಈ ಕುರಿತು ವಿವರವಾಗಿ ಮಾತನಾಡುವ ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ವೈಯಕ್ತಿಕ ಸಾಲ ವಿಭಾಗದ ಬಿಸಿನೆಸ್ ಹೆಡ್ ಅಮಿತ್ ಪಾಠಕ್ ಅವರು , “ನಾವಿಲ್ಲಿ ಒಂದು ಆತ್ಮವಿಶ್ವಾಸದ ಬದಲಾವಣೆಯನ್ನು ಕಾಣುತ್ತಿದ್ದೇವೆ. ಉತ್ತಮ ಆದಾಯ ಮತ್ತು ಶಿಸ್ತುಬದ್ಧ ಹೂಡಿಕೆಯ ಅಭ್ಯಾಸವಿರುವ ಗ್ರಾಹಕರು, ತಮ್ಮ ದೀರ್ಘಕಾಲದ ಹೂಡಿಕೆಗಳನ್ನು ಹಿಂಪಡೆಯದೆಯೇ ಯೋಗಕ್ಷೇಮ ಪಾಲನೆ, ವಿಶಿಷ್ಟ ಅನುಭವಗಳು ಮತ್ತು ದೀರ್ಘಕಾಲದ ಆಸೆಗಳಂತಹ ಅರ್ಥಪೂರ್ಣ ಆಸೆಗಳನ್ನು ಪೂರೈಸಲು ವೈಯಕ್ತಿಕ ಸಾಲಗಳನ್ನು ಬಳಸುತ್ತಿದ್ದಾರೆ.

ಕೋವಿಡ್ ನಂತರದಲ್ಲಿ, ಅನೇಕ ಗ್ರಾಹಕರು ಸ್ವಯಂ-ಆರೈಕೆ ಮತ್ತು ದೀರ್ಘಕಾಲದ ಕನಸುಗಳನ್ನು ಕೇವಲ ಐಷಾರಾಮಿ ಎಂದು ಭಾವಿಸದೆ ಆದ್ಯತೆಗಳೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅಂತಹವರಿಗೆ ಕೋಟಕ್ ಸಂಸ್ಥೆಯ ವೈಯಕ್ತಿಕ ಸಾಲಗಳು ಸಹಜವಾದ ಆಯ್ಕೆಯಾಗಿವೆ. ತಾವು ಶಿಸ್ತಿನಿಂದ ನಿರ್ಮಿಸಿದ ದೀರ್ಘಕಾಲೀನ ಹೂಡಿಕೆಗಳಿಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಅವರು ಸಾಲವನ್ನು ಆಯ್ದುಕೊಳ್ಳುತ್ತಿದ್ದಾರೆ. ವೈಯಕ್ತಿಕ ಸಾಲವು ಅವರ ಭವಿಷ್ಯದ ಯೋಜನೆಗಳನ್ನು ಭದ್ರವಾಗಿರಿಸುವ ಜೊತೆಗೆ, ಇಂದಿನ ಜೀವನವನ್ನು ಸಂಪೂರ್ಣವಾಗಿ ಸವಿಯಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

Kalahamsa Infotech private limited

https://kalpa.news/wp-content/uploads/2024/04/VID-20240426-WA0008.mp4

 

Tags: EMIInvestmentKannada News WebsiteLatest News KannadaPersonal loanSmart investorsಇಎಂಐ ಕಂತುಕೋವಿಡ್ವೈಯಕ್ತಿಕ ಸಾಲಸ್ಮಾರ್ಟ್ ಹೂಡಿಕೆದಾರರುಹೂಡಿಕೆ
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಆತ ಶೇ.90ರಷ್ಟು ಅಂಗವಿಕಲ, ಆದರೆ ಎಸಗಿದ್ದು ಅತ್ಯಾಚಾರ | ಈಗ 20 ವರ್ಷ ಕಂಬಿ ಹಿಂದೆ ಫಿಕ್ಸ್

Next Post

ಸಂಘಟನಾ ಹಿನ್ನೆಲೆ | ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ

kalpa News

kalpa News

Next Post
ಸಂಘಟನಾ ಹಿನ್ನೆಲೆ | ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ

ಸಂಘಟನಾ ಹಿನ್ನೆಲೆ | ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL