ನವದೆಹಲಿ: ಕಿರು, ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ದೀಪಾವಳಿ ಉಡುಗೊರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೇವಲ 59 ನಿಮಿಷದಲ್ಲಿ 1 ಕೋಟಿ ರೂ.ವರೆಗಿನ ಸಾಲ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಎಂಎಸ್‍ಎಂಇ ಉದ್ಯಮಶೀಲತೆಗೆ ವಿಶೇಷ ಉತ್ತೇಜನ ನೀಡುವ ಸಲುವಾಗಿ ಪ್ರೋತ್ಸಾಹನ ಕ್ರಮಗಳನ್ನು ಪ್ರಕಟಿಸಿ ಮಾತನಾಡಿದ ಅವರು, ಜಿಎಸ್‍ಟಿ ಅಡಿ ನೋಂದಣಿ ಮಾಡಿಕೊಂಡಿರುವ ಎಲ್ಲ ಕಿರು, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ 1 ಕೋಟಿ ರೂ. ವರೆಗಿನ ಸಾಲದ ಮೇಲೆ ಶೇ. 2ರ ಬಡ್ಡಿ ರಿಯಾಯಿತಿಯನ್ನೂ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Accelerating India's growth. Addressing the Support and Outreach Initiative for the MSME sector. https://t.co/dpMu2rVDyb
— Narendra Modi (@narendramodi) November 2, 2018
ಪ್ರಮುಖವಾಗಿ ಮಹಿಳಾ ಉದ್ದಿಮೆದಾರರಿಗೆ ವಿಶೇಷ ರಿಯಾಯಿತಿ ಹಾಗೂ ಲಾಭಗಳನ್ನು ಘೋಷಣೆ ಮಾಡಿರುವ ಪ್ರಧಾನಿಯವರು, ಎಂಎಸ್‍ಎಂಇ ಉದ್ಯಮಗಳ ಪ್ರೋತ್ಸಾಹನದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ.
ದೇಶದಲ್ಲಿ ಎಂಎಸ್‍ಎಂಇ ವರ್ಗ ಅತ್ಯಂತ ವಿಶಾಲವಾಗಿದ್ದು, 63 ಮಿಲಿಯನ್ ಯೂನಿಟ್‍ಗಳು ಹಾಗೂ 111 ಮಿಲಿಯನ್ ಮಂದಿ ಉದ್ಯೋಗಿಗಳಿದ್ದು, ದೇಶದ ಜಿಡಿಪಿಯಲ್ಲಿನ ಶೇ.30ರಷ್ಟು ಕೊಡುಗೆಯನ್ನು ನೀಡುತ್ತಿದೆ. ಉತ್ಪಾದನೆಯಲ್ಲಿ ಶೇ.45ರಷ್ಟು ಹಾಗೂ ಶೇ.40ರಷ್ಟು ರಫ್ತಿನಲ್ಲಿ ಕೊಡುಗೆಯನ್ನು ನೀಡುತ್ತಿದೆ.
Discussion about this post