ಭದ್ರಾವತಿ: ಲೋಕಸಭಾ ಉಪ ಚುನಾವಣೆ ನಡೆಸಲು ತಾಲೂಕಿನ ವಿವಿಧ ಕ್ಷೇತ್ರಗಳಿಗೆ ಚುನಾವಣಾ ಸಿಬ್ಬಂದಿ ಶುಕ್ರವಾರ ಕರ್ತವ್ಯಕ್ಕೆ ತೆರಳಿದರು.
ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಮತಯಂತ್ರಗಳನ್ನು ಹಾಗೂ ಚುನಾವಣಾ ಪರಿಕರಗಳನ್ನು ಸಿಬ್ಬಂದಿಗಳು ತೆರಳುತ್ತಿದ್ದ ದೃಶ್ಯ ಕಂಡು ಬಂದಿತು. ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು, ಸರಕಾರಿ ಜೀಪುಗಳು ಮತಗಟ್ಟೆಗಳತ್ತ ಪ್ರಯಾಣ ಬೆಳೆಸಿದವು.
ಈ ಕುರಿತಂತೆ ಕಲ್ಪ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ತಹಸೀಲ್ದಾರ್ ಎಂ.ಆರ್. ನಾಗರಾಜ್, ಲೋಕಸಭೆ ಉಪ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ದತೆ ನಡೆಸಿದ್ದು ಶಾಂತಿಯುತ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕ್ಷೇತ್ರದಲ್ಲಿ 1,01,191 ಪುರುಷ ಮತದಾರರು, 1,05,350 ಮಹಿಳಾ ಮತದಾರರು ಹಾಗೂ 1314 ದಿವ್ಯಾಂಗ ಮತದಾರರಿದ್ದು ಒಟ್ಟು 206541 ಮತದಾರರು ಮತ ಚಲಾಯಿಸಲಿದ್ದಾರೆ. 252 ಮತಗಟ್ಟೆಗಳನ್ನು ಹೊಂದಿದ್ದು, 62 ಅತಿ ಸೂಕ್ಷ್ಮ, 69 ಸೂಕ್ಷ್ಮ ಹಾಗೂ 117 ಸಾಮಾನ್ಯ ಮತಗಟ್ಟೆಗಳಲ್ಲಿ 24 ಸೆಕ್ಟರ್ ಅಧಿಕಾರಿಗಳು, 3 ಫ್ಲೆಯಿಂಗ್ ಸ್ಕಾಡ್, 3 ವಿಎಸ್‌ಟಿ ಟೀಮ್ ಹಾಗೂ 2 ಅಕೌಟಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಮತ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ಸಕಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಕಲ ಚೇತನರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post