ಬೆಂಗಳೂರು: ಶನಿವಾರ ನಿಧನರಾದ ರಾಜಕಾರಣಿ, ಹಿರಿಯ ನಟ ಅಂಬರೀಶ್ ಅವರ ಹಾಲು ತುಪ್ಪ ಕಾರ್ಯ ನಾಳೆ ನಡೆಯಲಿದ್ದು, ನಾಳೆಯೇ ಅವರ ಚಿತಾಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇಂದು ಮಂಗಳವಾರವಾದ ಹಿನ್ನೆಲೆಯಲ್ಲಿ ನಾಳೆ ಹಾಲುತುಪ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಮಧ್ಯಾಹ್ನದ ನಂತರ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಕಾವೇರಿಯ ಮಡಿಲಿನಲ್ಲಿ ಮಂಡ್ಯದ ಗಂಡಿನ ಚಿತಾಭಸ್ಮ ವಿಲೀನಗೊಳ್ಳಲಿದೆ.
ಇನ್ನು, ಕಂಠೀರವ ಸ್ಟುಡಿಯೋದಲ್ಲಿ ನಿನ್ನೆ ಅಂಬಿ ಸಂಸ್ಕಾರ ನಡೆಸಿದ ಸ್ಥಳದಲ್ಲೇ ಸ್ಮಾರಕ ನಿರ್ಮಾಣವಾಗಲಿದ್ದು, ಇಲ್ಲಿಗೆ ನಿನ್ನೆಯಿಂದ ನಿರಂತರವಾಗಿ ಅಭಿಮಾನಿಗಳ ದಂಡ ಹರಿದುಬರುತ್ತಲೇ ಇದೆ. ಭದ್ರತೆ ದೃಷ್ಠಿಯಿಂದ ಯಾರನ್ನೂ ಸಮಾಧಿ ಸ್ಥಳಕ್ಕೆ ಬಿಡುತ್ತಿಲ್ಲ. ಇಡಿಯ ಪ್ರದೇಶದಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
Remembering Freedom Fighters Is the Duty of Every Indian: MP B.Y. Raghavendra
Kalpa Media House | SHIKARIPURA | Remembering the freedom fighters who fought against British rule, made immense sacrifices and secured...
Read moreDetails






