ಚನ್ನಗಿರಿ: ಇತ್ತೀಚಿನ ವರ್ಷಗಳಲ್ಲಿ ವಿಪ್ರ ಸಮುದಾಯದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳಿಗೆ ಬೇರೆಯವರಿಂದ ಪರಿಹಾರ ಹುಡುಕಿಸುವುಕ್ಕಿಂತಲೂ, ನಾವು ನಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿ ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ದೇಶದಲ್ಲಿನ ವಿಪ್ರ ಸಮುದಾಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಶೋಚನೀಯವಾಗಿರುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಸುಲಭ ಶೌಚಾಲಯವನ್ನು ನಿರ್ವಹಿಸುವಲ್ಲಿ ಬ್ರಾಹ್ಮಣರು ಮುಂದಾಗಿದ್ದಾರೆ. ಕಾಶ್ಮೀರದಲ್ಲಿ ಪಂಡಿತರಾಗಿದ್ದ ವಿಪ್ರ ಸಮುದಾಯ ಈಗ ಭಿಕ್ಷೆಬೇಡುವ ದಯನೀಯ ಸ್ಥಿತಿಗೆ ಬಂದಿದೆ. ನಮ್ಮ ಸಮಸ್ಯೆಗಳಿಗೆ ನಾವು ಬೇರೆಯವರಿಂದ ಪರಿಹಾರ ಹುಡುಕಿಸುವುದಕ್ಕಿಂತ ನಾವೇ ನಮ್ಮಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ವೈವಾಹಿಕ ಸಂಬಂಧಗಳಿಗೆ ಕೃಷಿ ಮತ್ತು ಪುರೋಹಿತ ವೃತ್ತಿ ಅವಲಂಭಿತ ಯುವಕರನ್ನು ವಿವಾಹವಾಗಲು ಯುವತಿಯರೇ ಮುಂದೆ ಬರುತ್ತಿಲ್ಲ. ಇದಕ್ಕಾಗಿ ನಮ್ಮ ವಿಪ್ರ ಸಮುದಾಯದ ತಾಯಂದಿರೇ ಬದಲಾವಣೆಯ ವಾತಾವರಣ ಸೃಷ್ಟಿಸಬೇಕಿದೆ. ಮುಂದೆಯಾದರೂ ಈ ಸಮಸ್ಯೆ ಗಂಭೀರವಾಗದಂತೆ ಮಾಡಲು ಕುಟುಂಬಗಳಲ್ಲಿ ತಾಯಿ ತಂದೆಯರು ತಮ್ಮ ಮನೋಭಾವನೆಯನ್ನು ಸೂಕ್ತ ಬದಲಿಸಿಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
(ವರದಿ: ಡಾ.ಸುಧೀಂದ್ರ)
Discussion about this post