ನವದೆಹಲಿ: ಭಾರೀ ಕುತೂಲಹಕ್ಕೆ ಕಾರಣವಾಗಿರುವ ಅಯೋಧ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಈ ಕುರಿತಂತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದ್ದು, ಜನವರಿಯಿಂದ ಆರಂಭಿಸುವುದಾಗಿ ತಿಳಿಸಿದೆ.
ಜನವರಿಯಿಂದ ವಿಚಾರಣೆಯನ್ನು ನಡೆಸುವುದಾಗಿ ಹೇಳಿರುವ ನ್ಯಾಯಾಲಯ ಸದ್ಯ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ.
ಪ್ರಕರಣ ಕುರಿತಂತೆ ದೀಪಾವಳಿ ನಂತರ ದಿನಾಂಕವನ್ನು ನಿಗದಿ ಮಾಡಿ ಕೇಂದ್ರ ಸರ್ಕಾರದ ಸಾಲಿಟರಿ ಜನರಲ್ ನ್ಯಾಯಾಲಯದಲ್ಲಿ ಕೋರಿದ್ದರು.
Discussion about this post