ವಾಷಿಂಗ್ಟನ್: ಐಎಂಎಫ್(ಇಂಟರ್’ನ್ಯಾಶನಲ್ ಮಾನಿಟರಿ ಫಂಡ್) ಆರ್ಥಿಕ ವಿಭಾಗದ ಮುಖ್ಯಸ್ಥೆಯಾಗಿ ಭಾರತ ಮೂಲದ ಗೀತಾ ಗೋಪಿನಾಥ್ ಅವರು ಆಯ್ಕೆಯಾಗಿದ್ದು, ಕಳೆದ ವಾರವೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಕುರಿತಂತೆ ಅಮೆರಿಕಾದ ಮಾಧ್ಯಮವೊಂದು ವಿಶೇಷ ವರದಿ ಪ್ರಕಟಿಸಿದ್ದು, ಐಎಂಎಫ್’ನ ಈ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೂ ಈಕೆ ಪಾತ್ರವಾಗಿದ್ದಾರೆ ಎಂದಿದೆ.
ಪ್ರಸ್ತುತ ಪ್ರಪಂಚ ವಿವಿಧ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಿಜಕ್ಕೂ ಈಗಿನ ಪರಿಸ್ಥಿತಿ ಒಂದು ಸವಾಲೇ ಸರಿ. ಇಂತಹ ಸಂದರ್ಭದಲ್ಲಿ ಪ್ರಮುಖ ಹುದ್ದೆಯನ್ನು ವಹಿಸಿಕೊಂಡಿರುವ ಗೀತಾ ಗೋಪಿನಾಥ್ ಅವರ ಮೇಲೆ ಅತ್ಯಂತ ಗುರುತರವಾದ ಜವಾಬ್ದಾರಿಯಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಆರ್ಥಿಕ ಹಾಗೂ ಜಾಗತಿಕ ವಿಚಾರಗಳ ತಜ್ಞೆಯಾಗಿದ್ದ 47 ವರ್ಷದ ಗೀತಾ, ಐಎಂಎಫ್’ನಲ್ಲಿ ವಿವಿಧ ಪ್ರಮುಖ ಹುದ್ದೆ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
Discussion about this post