ಶಿವಮೊಗ್ಗ: 10 ವರ್ಷಗಳ ನಂತರ ಆಯೋಜನೆಗೊಂಡಿರುವ ಸಹ್ಯಾದ್ರಿ ಉತ್ಸವದ ಸಂಭ್ರಮದಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆ ಮುಂದೇಳುತ್ತಿದೆ. ಈ ಸಂಭ್ರಮಕ್ಕೆ ಮೊದಲ ದಿನವೇ ಮೆರುಗು ನೀಡಿದ್ದು ಕೆಸರುಗದ್ದೆ ಓಟ ಸ್ಪರ್ಧೆ.
ಗೋಂಧಿ ಚಟ್ನಹಳ್ಳಿಯಲ್ಲಿ ನಡೆದ ಸಹ್ಯಾದ್ರಿ ಉತ್ಸವದ ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಸ್ಪರ್ಧಿಸಿದ ಯುವಕ ಯುವತಿಯರಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಯಾನಂದ್ ಹಾಗೂ ಯುವಜನ ಸಬಲಿಕರಣ ಮತ್ತು ಖನಿಜಾ ಇಲಾಖೆಯ ಹಾಗೂ ಜಿಲ್ಲೆಯ ಹಲವು ಇಲಾಖೆಯ ಅಧಿಕಾರಿಗಳ ಉಪಸ್ಥಿತರಿದ್ದರು.
ಸ್ಫರ್ಧಿಗಳು ಕೆಸರುಗದ್ದೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
(ವರದಿ: ಡಾ.ಸುಧೀಂದ್ರ)
















