ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡಿಗರ ಬಹುದಿನಗಳ ಕನಸು ಈಗ ನನಸಾಗುತ್ತಿದ್ದು, ಫೆ.೩ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ.
ಫೆ.3 ರಂದು ಸಂಜೆ ಜನಶತಾಬ್ದಿ ರೈಲು ಬಿಡುಗಡೆ ಸಮಾರಂಭ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ.
ಸಂಚಾರ ಎಲ್ಲಿಂದ ಎಲ್ಲಿಯವರೆಗೆ?
ಶಿವಮೊಗ್ಗದಿಂದ ಹೊರಡುವ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸುತ್ತದೆ.
ವಾರದಲ್ಲಿ ಎಷ್ಟು ದಿನ ಸಂಚಾರ:
ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.
ಎಷ್ಟು ಕೋಚ್‌ಗಳು?
ಈ ರೈಲಿನಲ್ಲಿ ಒಟ್ಟು 14 ಕೋಚ್’ಗಳು ಇರಲಿದ್ದು, ಇದರಲ್ಲಿ 7 ಎಸಿ ಕೋಚ್’ಗಳು ಇರಲಿವೆ.
ಸಂಚಾರ ಸಮಯ ಹೀಗಿದೆ:
ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು 10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 10 ಗಂಟೆಗೆ ಶಿವಮೊಗ್ಗಕ್ಕೆ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ:
ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನ ಶತಾಬ್ದಿ ರೈಲು ಭದ್ರಾವತಿ, ತರೀಕೆರೆ, ಕಡೂರು, ಬೀರೂರು, ಅರಸೀಕೆರೆ, ತುಮಕೂರು ನಿಲ್ದಾಣಗಳು.
















