ನವದೆಹಲಿ: ದೇಶದ ಕಂಡ ಅಪ್ರತಿಮ ರಾಜಕಾರಣಿ, ಸಜ್ಜನ ವ್ಯಕ್ತಿತ್ವದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಕಳೆದುಕೊಂಡು ದೇಶ ಅವರಿಗಾಗಿ ಕಣ್ಣೀರಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲೆ ಅವರದ್ದೊಂದು ಫೋಟೋ ಬಹಳಷ್ಟು ವೈರಲ್ ಆಗಿದೆ.
ವಾಸ್ತವವಾಗಿ ಫರ್ನಾಂಡಿಸ್ ಓರ್ವ ಪುಸ್ತಕ ಪ್ರೇಮಿ ಮಾತ್ರವಲ್ಲ ಒಬ್ಬ ಮಾತುಗಾರ, ಕೃತಿಗೆ ಬದ್ಧವಾದ ಜೀವನ, ಜನಸ್ನೇಹಿ ಮನೋಧರ್ಮದ ವ್ಯಕ್ತಿಯಾಗಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತೆಯೇ ಇವರೂ ಸಹ ನಿರಂತರವಾಗಿ ಓದುವ ಹವ್ಯಾಸ ರೂಢಿಸಿಕೊಂಡವರು.
ಅವರು ತಮ್ಮ ಕೊಠಡಿಯ ತುಂಬೆಲ್ಲಾ ಪುಸ್ತಕಗಳನ್ನು ತುಂಬಿಕೊಂಡು, ಬಿಡುವಿದ್ದಾಗಲೆಲ್ಲಾ ಓದುತ್ತಿದ್ದವರು. ಈ ರೀತಿ ಒಮ್ಮೆ ಪುಸ್ತಕಗಳ ನಡುವೆಯೇ ಮುಗ್ದವಾಗಿ ಅವರು ಮಲಗಿರುವ ಫೋಟೋವೊಂದು ಈಗ ವೈರಲ್ ಆಗಿದೆ.
ಜಾರ್ಜ್ ಅವರಿಗೆ ಅನಾರೋಗ್ಯ ಕಾಡಿದಾಗ ತಮ್ಮಲ್ಲಿ ಸುಮಾರು ಮೂರುವರೆ ಸಾವಿರ ಪುಸ್ತಕಗಳನ್ನು ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿಗೆ ದಾನ ಮಾಡಿದ್ದಾರೆ.
Discussion about this post