ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟನ್ನು ಇಂದು ಮಂಡಿಸಲಾಗಿದ್ದು, ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ನಿಗದಿಗೊಳಿಸುವ ಮೂಲಕ ಸುಮಾರು 3 ಕೋಟಿ ಜನರು ಆದಾಯ ತೆರಿಗೆಯಿಂದ ರಿಲೀಫ್ ಪಡೆಯಲಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಂಗಾಮಿ ವಿತ್ತ ಸಚಿವರ ಪೀಯೂಷ್ ಗೋಯಲ್ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದರು.
ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ ೫ ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿದೆ. ಅಷ್ಟೇ ಅಲ್ಲ ಉಳಿತಾಯ ಯೋಜನೆಗಳ ಮೂಲಕ 1.5 ಲಕ್ಷದವರೆಗೆ ಹೂಡಿಕೆಗೆ ಅವಕಾಶ ಇದೆ. ಇದರಿಂದಾಗಿ ಒಟ್ಟು 6.5 ಲಕ್ಷದವರೆಗೆ ತೆರಿಗೆ ಪಾವತಿಸಬೇಕಾಗಿಲ್ಲ.
ಈ ಹಿಂದಿನ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ವೈಯಕ್ತಿಕ ಆದಾರ ತೆರಿಗೆ ಮಿತಿಯನ್ನು ಹೆಚ್ಳ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿಯೂ ಕೂಡಾ ವೈಯಕ್ತಿಕ ಆದಾಯ ತೆರಿಗೆ ಮಿತಿ 5 ಲಕ್ಷಕ್ಕೆ ಏರಿಕೆ ಮಾಡುತ್ತಾರೆಂಬ ನಿರೀಕ್ಷೆ ಈ ಬಾರಿ ಈಡೇರಿದೆ.
ತೆರಿಗೆ ಮಿತಿಯನ್ನು 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 2.4 ಲಕ್ಷ ರೂ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ. ಸ್ಟಾಂಡರ್ಡ್ ಡಿಡಕ್ಷನ್ ರೂ. 40 ಸಾವಿರದಿಂದ ರೂ.50 ಸಾವಿರಕ್ಕೆ ಹೆಚ್ಚಳ. ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ರೂ. 6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ. , ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.
Discussion about this post