ನವದೆಹಲಿ: ನಿನ್ನೆ ಪುಲ್ವಾಮಾದಲ್ಲಿ ನಡೆದ ಕ್ರೂರ ಉಗ್ರರ ದಾಳಿಯಲ್ಲಿ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿರುವ ಘಟನೆಯ ಹಿಂದೆ ಪಾಕಿಸ್ಥಾನ ಹಾಗೂ ಅಲ್ಲಿನ ಐಎಸ್’ಐ ಕೈವಾಡ ಇರುವ ಶಂಕೆ ಹಿನ್ನೆಲೆಯಲ್ಲಿ ಪಾಕಿಸ್ಥಾನಕ್ಕೆ ನೀಡಿದ್ದ ವಿಶೇಷ ಒಲುಮೆ ರಾಷ್ಟ್ರ ಸ್ಥಾನಮಾನವನ್ನು ಭಾರತ ಇಂದು ಹಿಂದಕ್ಕೆ ಪಡೆದಿದೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು, ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿರುವ ಈ ಅತ್ಯಂತ ಘೋರ ಹಾಗೂ ವಿನಾಶಕಾರಿ ದಾಳಿಗಾಗಿ ಪಾಕಿಸ್ಥಾನಕ್ಕೆ ಸರಿಯಾದ ಪಾಠವನ್ನು ಕಲಿಸಲು ಭಾರತ ನಿರ್ಧರಿಸಿದೆ.
ಘಟನೆ ಕುರಿತಂತೆ ಅಮೆರಿಕಾ ಗುಪ್ತಚರ ಇಲಾಖೆಯೂ ಸಹ ಪಾಕ್ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದೆ
ಇನ್ನು, ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ಭಾರತದ ರಣತಂತ್ರ ಹೇಗಿರಬೇಕು ಎಂಬುದನ್ನು ಚರ್ಚಿಸಲಾಗಿದೆ.
ಸಭೆಯಲ್ಲಿ ರಕ್ಷಣಾ ಸಚಿವರು, ಗೃಹ ವ್ಯವಹಾರಗಳ ಸಚಿವರು, ವಿದೇಶ ವ್ಯವಹಾರ ಸಚಿವರು, ಹಣ ಕಾಸು ಸಚಿವರು ಮತ್ತು ಸದಸ್ಯರು ಪಾಲ್ಗೊಂಡಿದ್ದಾರೆ.
Discussion about this post