ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ನಿನ್ನೆ ಪಾಕ್ ಉಗ್ರರು ನಡೆಸಿದ ಭೀರಕ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ 42 ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ದಾಳಿಗೆ ಸರಿಯಾದ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಸಿಆರ್’ಪಿಎಫ್ ಅಧಿಕೃತವಾಗಿ ಪ್ರಕಟಿಸಿದೆ.
ಈ ಕುರಿತಂತೆ ಸಿಆರ್’ಪಿಎಫ್’ನ ಅಧಿಕೃತ ಟ್ವಿಟರ್’ನಲ್ಲಿ ಟ್ವೀಟ್ ಮಾಡಲಾಗಿದ್ದು, ಈ ಘಟನೆಯನ್ನು ನಾವು ಎಂದೂ ಮರೆಯುವುದಿಲ್ಲ. ಅಲ್ಲದೇ ಈ ದಾಳಿ ನಡೆಸಿದವರನ್ನು ಬಿಡುವುದೂ ಇಲ್ಲ. ಹುತಾತ್ಮರಾದ ಎಲ್ಲ ಯೋಧರಿಗೆ ನಮ್ಮ ನಮನಗಳು. ಯೋಧರ ಕುಟುಂಬದೊಂದಿಗೆ ನಾವು ಎಂದಿಗೂ ಇದ್ದೇವೆ ಎಂದು ಹೇಳಿದೆ.
WE WILL NOT FORGET, WE WILL NOT FORGIVE:We salute our martyrs of Pulwama attack and stand with the families of our martyr brothers. This heinous attack will be avenged. pic.twitter.com/jRqKCcW7u8
— 🇮🇳CRPF🇮🇳 (@crpfindia) February 15, 2019

















