ನವದೆಹಲಿ: ಸಿಆರ್’ಪಿಎಫ್ ಕಾನ್ವೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದು ಸಾಧನೆ ಮಾಡಿದ್ದೆÃವೆ ಎಂದು ಬೀಗಿದ್ದ ನಪುಂಸಕ ಜೈಷ್ ಉಗ್ರರು, ಈಗ ಭಾರತದ ಪ್ರತೀಕಾರಕ್ಕೆ ಹೆದರಿ ಅಜ್ಞಾತ ಸ್ಥಳಕ್ಕೆ ಗುಳೆ ಹೊರಟ ಕುರಿತಾಗಿ ವರದಿಯಾಗಿದೆ.
ಪುಲ್ವಾಮಾ ದಾಳಿಯಲ್ಲಿ ಗುರುವಾರ 42 ಯೋಧರನ್ನು ಬಲಿ ಪಡೆದ ಹಿನ್ನೆಲೆಯಲ್ಲೇ ಇಂದು ಅಲ್ಲಿಂದ 15 ಕಿಮೀ ದೂರದಲ್ಲಿ ಓರ್ವ ಮೇಜರ್ ಸೇರಿ ನಾಲ್ವರು ಯೋಧರನ್ನು ಪಾಕ್ ಪ್ರೇರಿತ ಜೈಷ್ ಎ ಮೊಹಮದ್ ಉಗ್ರರು ಬಲಿ ಪಡೆದ ನಂತರ ಪಾಕ್ ಸೇರಿದಂತೆ ಉಗ್ರರ ವಿರುದ್ಧ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುವ ಪೂರ್ವ ತಯಾರಿಯಲ್ಲಿದ್ದು, ಇಲ್ಲಿದ್ದರೆ ಭಾರತ ಬಿಡುವುದಿಲ್ಲ ಎಂಬ ಭಯದಿಂದ ಗುಳೆ ಹೊರಟಿದ್ದಾರೆ ಶಂಡ ಉಗ್ರರು.
ದಾಳಿ ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರನ್ನು ಒತ್ತೆಯಾಳಾಗಿ ಅಥವಾ ಗುರಾಣಿಯನ್ನಾಗಿಸಿ ಉಗ್ರರು ನೆಲೆಸುವುದು ಮಾತ್ರವಲ್ಲ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ನಾಗರಿಕರನ್ನು ಬಳಸಿಕೊಳ್ಳುತ್ತಾರೆ.
ಗುರುವಾರ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಇದೇ ಪ್ರದೇಶಗಳಲ್ಲಿ ಉಗ್ರರು ನೆಲೆಸಿದ್ದರು ಎಂದು ವರದಿಯಾಗಿದೆ.
ಇನ್ನು, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜೈಷ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಜಿ ಅಲಿಯಾಸ್ ಕರ್ಮನ್ ಸೇರಿದಂತೆ ಇಬ್ಬರನ್ನು ಭದ್ರತಾ ಪಡೆಗಳೂ ಇಂದು ಮುಂಜಾನೆ ಬೇಟೆಯಾಡಿ ಹೊಸಕಿ ಹಾಕಿವೆ. ಈ ಕಾರ್ಯಾಚರಣೆಗೆ ವೇಳೆ ಉಗ್ರರು ಅಡಗಿದ್ದ ಮನೆಯನ್ನೇ ಭದ್ರತಾ ಪಡೆಗಳು ಸ್ಫೋಟಿಸಿದ್ದರು.
ಇನ್ನೊಂದೆಡೆ ಪಾಕ್ ವಿರುದ್ಧ ಕೇಂದ್ರ ಸರ್ಕಾರ ಸೇರಿದಂತೆ ಭಾರತದಾದ್ಯಂತ ಕಿಚ್ಚು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಎಲ್’ಒಸಿಯಲ್ಲಿ ಪಾಕ್ ತನ್ನ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ.
ಇನ್ನು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖರು ಭಾರತೀಯ ಸೇನೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಶ್ಮೀರದ ಬೆಳವಣಿಗೆಗಳ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ.
Discussion about this post