ಭರಮಸಾಗರ: ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ವಾಲ್ಮೀಕಿ ಧ್ವನಿ ಪತ್ರಿಕೆ, ಗ್ರಾಮಾಡಳಿತ, ಹಾಗೂ ವಾಲ್ಮೀಕಿ ಸಮಾಜದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳನೇ ವರ್ಷದ 77 ಪಾಳೇಗಾರರ ನೆನಪಿನೋತ್ಸವ ಕಾರ್ಯಕ್ರಮವನ್ನು ಶಾಸಕ ಶ್ರೀ ರಾಮುಲು ಉದ್ಘಾಟಿಸಿದರು ರಾಜನಹಳ್ಳಿ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ರಾಜನಹಳ್ಳಿ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮಿಗಳು ಹಾಗೂ ಶಾಸಕ ಶ್ರೀರಾಮುಲು ಅವರು ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆ ಮತ್ತು ಚಿಕ್ಕಕೆರೆ ಪಲಕಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಪಾಳೇಗಾರರ ವೇಷಭೂಷಣ ತೊಟ್ಟ ಕಲಾವಿಧರು ಮೆರವಣಿಗೆಯಲ್ಲಿ ಸಾಗಿದರು.

(ಮಾಹಿತಿ: ಮುರಳೀಧರ್ ನಾಡಿಗೇರ್)










Discussion about this post