ನವದೆಹಲಿ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ವಿಧಿ 370 ರದ್ದು ವಿಚಾರದಲ್ಲಿ ‘ಕೈ’ ದೇಶಪ್ರೇಮದ ಮುಖವಾಡ ಕಳಚಿದೆ.
ಈ ವಿಚಾರ ಕುರಿತಂತೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಮಾತನಾಡಿದ್ದು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ವಿಧಿ 370 ರದ್ದುಗೊಂಡರೆ ಭಾರತ-ಕಾಶ್ಮೀರ ಸಂಬಂಧವೂ ಸಹ ಕೊನೆಗೊಳ್ಳಲಿದೆ ಎಚ್ಚರಿಸಿದ್ದಾರೆ.
ಯಾವುದೇ ಕಾರಣದಿಂದ ಕೇಂದ್ರ ಸರ್ಕಾರ ಆರ್ಟಿಕಲ್ 370 ಹಾಗೂ 350 ನ್ನು ರದ್ದುಗೊಳಿಸಿದ್ದೇ ಆದಲ್ಲಿ ನಾನು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರು, ಮಾಜಿ ಮುಖ್ಯಮಂತ್ರಿ ಮೆಹೆಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಓಮರ್ ಅಬ್ದುಲ್ಲಾ ಅವರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದಾರೆ.
ಯಾವ ಕಾರಣಕ್ಕಾಗಿ ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿರುವುದರಿಂದ ಸ್ಥಳೀಯರು ಭಯಗೊಂಡಿದ್ದಾರೆ. ಆರ್’ಎಸ್’ಎಸ್’ನವರು ಈಗಾಗಲೇ ದೇಶಕ್ಕೆ ಸಾಕಷ್ಟು ಹಾನಿ ಮಾಡಿದ್ದಾರೆ. ಈಗಲೂ ಆರ್ಟಿಕಲ್ 370 ರ ಕುರಿತು ಆರ್’ಎಸ್’ಎಸ್’ನವರೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಆರ್ಟಿಕಲ್ 350 ರದ್ದುಗೊಂಡರೆ ಭಾರತ-ಕಾಶ್ಮೀರ ಸಂಬಂಧ ಮುಗಿದಂತೆಯೇ ಎಂದಿದ್ದಾರೆ.
Discussion about this post