ಸಿಯಾಲ್’ಕೋರ್ಟ್: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇದಕ್ಕೆ ಸಹಕಾರ ನೀಡಿರುವ ಪಾಕಿಸ್ಥಾನದ ವಿರುದ್ಧ ಭಾರತ ಯಾವುದೇ ಕ್ಷಣದಲ್ಲಿ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಯೋಚನೆಯಲ್ಲಿಯೇ ಪಾಕಿಸ್ಥಾನ ಅಕ್ಷರಶಃ ನಡುಗಿ ಹೋಗಿದೆ.
ಈ ವಿಚಾರದಲ್ಲಿ ಮಾತನಾಡಿರುವ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಭಾರತ ಯುದ್ಧ ಸಾರಬಹುದು. ಹೀಗಾಗಿ, ಯಾವುದೇ ಕಾರಣಕ್ಕೂ ದೇಶದ ಗಡಿ ರಕ್ಷಣೆಗಾಗಿ ಪ್ರಾಣಾರ್ಪಣೆಯೇ ಪರಮೋಚ್ಚ ತ್ಯಾಗ ಎಂಬ ಬೋಧನೆಯನ್ನು ತಮ್ಮ ಸೈನಿಕರಿಗೆ ಮಾಡಿದ್ದಾರೆ. ಆ ಮೂಲಕ ತಮ್ಮ ಭಯವನ್ನು ಹೊರಹಾಕಿದ್ದಾರೆ.
ದೇಶದ ಗಡಿ ರಕ್ಷಣೆಯೇ ಪರಮೋಚ್ಛ ಕರ್ತವ್ಯವಾಗಿದ್ದು ಅದಕ್ಕಾಗಿ ಮಾಡುವ ಪ್ರಾಣ ತ್ಯಾಗವು ಪರಮೋಚ್ಚ ತ್ಯಾಗ ಎನಿಸಲಿದೆ. ಪಾಕ್ ಸೇನೆ ತನ್ನ ದೇಶದ ಗಡಿ ರಕ್ಷಣೆಗೆ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದಿರುವ ಬಾಜ್ವಾ, ತಮ್ಮ ದೇಶದ ಯೋಧರಲ್ಲಿರುವ ಕರ್ತವ್ಯಪರತೆಯನ್ನು ಪ್ರಶಂಸಿಸಿದ್ದಾರೆ.
Discussion about this post