ನವದೆಹಲಿ: ಉರಿ ಸೆಕ್ಟರ್ ಮೇಲಿನ ದಾಳಿಗೆ ಪ್ರತೀಕಾರವಾಗಿ 2016ರಲ್ಲಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಯಶಸ್ವಿಯಾಗಿದ್ದ ಕೇಂದ್ರ ಸರ್ಕಾರ, ಈಗ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಮತ್ತೊಂದು ಸರ್ಜಿಕಲ್ ನಡೆಸಿದ್ದು, ಸುಮಾರು 300ಕ್ಕೂ ಅಧಿಕ ಉಗ್ರರನ್ನು ಬೇಟೆಯಾಡಿದೆ.
ಫೆ.14ರಂದು ಜಮ್ಮುವಿನ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರ ನಡೆಸಿದ ಆತ್ಮಹತ್ಯಾ ದಾಳಿಗೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದರು. ಅಂದಿನಿಂದಲೇ ಇಡಿಯ ದೇಶ ಪ್ರತೀಕಾರಕ್ಕಾಗಿ ಹಾತೊರೆಯುತ್ತಾ, ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿತ್ತು. ಆದರೆ, ಅತ್ಯಂತ ಚಾಣಕ್ಷ ರಾಜತಾಂತ್ರಿಕ ನಡೆಯನ್ನಿಟ್ಟಿದ್ದ ಮೋದಿ ಸರ್ಕಾರ ಸದ್ದಿಲ್ಲದೇ ದಾಳಿಗೆ ಸಿದ್ದವಾಗುತ್ತಿತ್ತು.
ವಾಸ್ತವವಾಗಿ, ದಾಳಿ ನಡೆದ ಮರುದಿನವೇ ಅಂದರೆ ಫೆ.15ರಂದೇ ಪ್ರತೀಕಾರದ ದಾಳಿ ನಡೆಸಿ, ಜೈಷ್ ಉಗ್ರ ಸಂಘಟನೆಯ ಅಡಗತಾಣಗಳನ್ನು ನಾಶ ಮಾಡಬೇಕು ಎಂಬ ಪ್ರಸ್ತಾವನೆ ನಮ್ಮ ಹೆಮ್ಮೆಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಂಡನೆಯಾಗಿತ್ತು.
ಈ ವಿಚಾರ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾಗಿ ಅಜಿತ್ ಧೋವಲ್, ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಮಹತ್ವದ ಸಭೆ ನಡೆಯಿತು.
ಯಾವ ರೀತಿ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ನಾಶ ಮಾಡಬೇಕು ಎಂಬ ಕಲ್ಪನೆಯನ್ನು ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದರು. ಈ ಬಾರಿ ಇಡಿಯ ಕಾರ್ಯಾಚರಣೆ ರೂಪುರೇಷೆ ಸಿದ್ದಪಡಿಸಲು ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರಿಗೆ ಜವಾಬ್ದಾರಿ ವಹಿಸಿ, ವಾಯುಸೇನಾ ದಾಳಿಯೇ ನಡೆಯಲಿ ಎಂಬ ತೀರ್ಮಾನಕ್ಕೆ ಬರಲಾಯಿತು.
ಇಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿರುವುದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್. 2016ರ ಸರ್ಜಿಕಲ್ ಸ್ಟ್ರೈಕ್’ನ ಮೂಲ ರೂಪುರೇಷೆಗಳನ್ನು ಸಿದ್ದಪಡಿಸಿ, ಕಾರ್ಯಾಚರಣೆಯ ಯಶಸ್ವಿಗೆ ಕಾರಣವಾಗಿದ್ದ ಧೋವಲ್ ಅವರೇ ಇಲ್ಲೂ ಸಹ ತಮ್ಮ ಮಾಸ್ಟರ್’ಮೈಂಡನ್ನು ಉಪಯೋಗಿಸಿದ್ದು.
ಪ್ರಸ್ತಾವನೆ ಮಂಡನೆಯಾದಾಗಿನಿಂದಲೂ ಕಾರ್ಯಗತವಾಗುವವರೆಗೂ ಸಂಪೂರ್ಣ ಮಾರ್ಗದರ್ಶನ ನಿರ್ವಹಣೆ ಮಾಡಿದ್ದು ಮಾತ್ರ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ. ಸ್ವತಃ ಮುತುವರ್ಜಿ ವಹಿಸಿದ ಮೋದಿ, ಪ್ರತಿ ಹಂತದ ಸಿದ್ದತೆ ಹಾಗೂ ಕಾರ್ಯಾಚರಣೆ ಹೇಗಿರಬೇಕು ಎಂಬುದನ್ನು ಸೂಚಿಸುತ್ತಾ ಬಂದರು.
ದಾಳಿ ಮಾಡುವುದು ಖಚಿತ ಎಂದು ನಿರ್ಧಾರ ಕೈಗೊಂಡಾಕ್ಷಣ ಆರಂಭವಾಗಿದ್ದು, ಸಿದ್ದತೆ. ಇದಕ್ಕಾಗಿ ಫೆ.15ರಂದೇ ನೀಲಿನಕ್ಷೆಯನ್ನು ಸಿದ್ದಪಡಿಸಿ, ಫೆ.16ರಿಂದಲೇ ಮಾಹಿತಿ ಸಂಗ್ರಹ ಆರಂಭವಾಯಿತು. ಒಂಡೆದೆ ಡ್ರೋನ್ ಹಾಗೂ ಸ್ಯಾಟಲೈಟ್ ಸಹಾಯದಿಂದ ಉಗ್ರರ ಅಡಗುತಾಣಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡುತ್ತಲೇ, ಭಾರತೀಯ ಗುಪ್ತಚರ ಇಲಾಖೆ ಹಾಗೂ ಸೇನಾ ಗುಪ್ತಚರ ಇಲಾಖೆಗಳ ಮೂಲಕ ಮಾಹಿತಿ ಸಂಗ್ರಹಿಸಿ ರೂಪುರೇಷೆ ಸಿದ್ದಪಡಿಸಲಾಯಿತು.
ಪ್ರಮುಖವಾಗಿ ಫೆ.21ರಂದು ಟಾರ್ಗೆಟ್ ನಿಗದಿಪಡಿಸಲಾಯಿತು. ಎಲ್’ಒಸಿ ದಾಟಿ, ಬಾಲಾಕೋಟ್ ಪ್ರದೇಶದಲ್ಲಿರುವ ಜೈಷ್ ಉಗ್ರರ ಸುಮಾರು ಆರು ಕ್ಯಾಂಪ್’ಗಳ ಮೇಲೆ ಒಮ್ಮೆಲೆ ವಾಯುಸೇನೆ ದಾಳಿ ನಡೆಸಲು ತೀರ್ಮಾನಿಸಲಾಯಿತು.
ಇದಕ್ಕಾಗಿ ಕೇವಲ ನಿಮಿಷ ಲೆಕ್ಕದಲ್ಲಿ ಕಾರ್ಯಾಚರಣೆಯ ಯೋಜನೆ ಸಿದ್ದಪಡಿಸಿ, 2 ಮಿರಾಜ್ ಹಾಗೂ 12 ವಿವಿಧ ಯುದ್ಧ ವಿಮಾನಗಳನ್ನು ಹಾಗೂ ಯೋಧರನ್ನು ಸಿದ್ದಪಡಿಸಲಾಯಿತು.
ಪುಲ್ವಾಮಾ ದಾಳಿ ನಡೆದು ಸರಿಯಾಗಿ 11 ದಿನಕ್ಕೆ ಅಂದರೆ ಇಂದು ನಸುಕಿನ 3.48ಕ್ಕೆ ಸನ್ನದ್ದವಾಗಿದ್ದ ಮಿರಾಜ್ ಸೇರಿದಂತೆ ಎಲ್ಲ ಯುದ್ದ ವಿಮಾನಗಳು ಆಗ್ರಾ ವಾಯುನೆಲೆಯಿಂದ ಒಂದೇ ಸಮಯಕ್ಕೆ ಗಗನಕ್ಕೆ ಹಾರಿ, ನಿಗದಿತ ಸ್ಥಳಗಳ ಮೇಲೆ ದಾಳಿ ನಡೆಸಿ, ಬರೋಬ್ಬರಿ 1000 ಕೆಜಿ ಬಾಂಬ್ ಹಾಕಿ, ಕೇವಲ 21 ನಿಮಿಷದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿ, ಹಿಂತಿರುಗುವಲ್ಲಿ ಯಶಸ್ವಿಯಾಗಿವೆ.
ಇಂತಹ ಬೃಹತ್ ಕಾರ್ಯಾಚರಣೆಯನ್ನು ಕೇವಲ 21 ನಿಮಿಷಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಭಾರತೀಯ ವಾಯುಸೇನೆ ಹಾಗೂ ಇದಕ್ಕೆ ಯೋಜನೆ ರೂಪಿಸಿದ ಕೇಂದ್ರ ಸರ್ಕಾರದ ಸಾಧನೆಗೆ ಈಗ ಇಡಿಯ ವಿಶ್ವವೇ ಬೆರೆಗುಗಣ್ಣಿನಿಂದ ನೋಡುತ್ತಿದೆ.
ಅಂತಿಮವಾಗಿ ಸರ್ಜಿಕಲ್ ಸ್ಟ್ರೈಕ್ ಭಾಗ ಎರಡಕ್ಕೆ ಕಥೆ ನಿರ್ಮಲಾ, ಚಿತ್ರಕಥೆ ಧೋವಲ್, ನಿರ್ದೇಶನ ಮೋದಿ ಹಾಗೂ ಆಕ್ಷನ್ ದಿ ಆರ್ಮಿ…
Discussion about this post