ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶದ ಹೆಜ್ಜೆ ಭಾರೀ ಸದ್ದು ಮಾಡಿದೆ. ಇದರ ನಡುವೆಯೇ ಸುಮಲತಾ ಅವರು ಬಿಜೆಪಿ ಸೇರಬೇಕು ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದರೂ, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದೂ ಸಹ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈವರೆಗೂ ಮಂಡ್ಯದಲ್ಲಿ ಬಿಜೆಪಿ ಯಾಕೆ ಗೆಲ್ಲುತ್ತಿಲ್ಲ ಎಂಬ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ಮಂಡ್ಯ ಬಿಜೆಪಿಯ ಕಾರ್ಯಕರ್ತರೊಬ್ಬರು ಬರೆದಿದ್ದಾರೆ. ಓದಿ:
ಅದಕ್ಕೆ ಕಾರಣ ಮಂಡ್ಯದ ಜನ ದೇಶಭಕ್ತರಲ್ಲ ಅಂತಲ್ಲ, ಬಿಜೆಪಿ ನಾಯಕರಿಗೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲೋದು ಬೇಕಿಲ್ಲ ಅಂತ. ಇಷ್ಟು ವರ್ಷ ಬಿಜೆಪಿ ವರಿಷ್ಠ ನಾಯಕರ “ತೆವಲಿಗೆ” ಮಂಡ್ಯ ಬಲಿಯಾಗಿದೆ. ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಗಾಗಿ ಮಂಡ್ಯದಲ್ಲಿ ಪಕ್ಷವನ್ನು ತಲೆ ಹಿಡಿಯಲಾಗಿದೆ ಅನ್ನುವ ಕಟುಸತ್ಯ ಎಷ್ಟು ಜನರಿಗೆ ತಿಳಿದಿದೆ? ದಯವಿಟ್ಟು ಮಂಡ್ಯದ ಜನರನ್ನು ಬಯ್ಯಬೇಡಿ. ನಾವು ದೇಶಭಕ್ತರು. ಪುಲ್ವಾಮ ದಾಳಿಯಲ್ಲಿ ಪ್ರಾಣ ಕೊಟ್ಟ ವೀರ ಯೋಧ ಮಂಡ್ಯದವನೆಂದು ಮರೆಯಬೇಡಿ.
ದೇಶವನ್ನು ಪ್ರೀತಿಸುವ ಪಕ್ಷವನ್ನು ಬಿಟ್ಟು ಮಮತಾ ಬ್ಯಾನರ್ಜಿಯಂಥಾ ದೇಶದ್ರೋಹಿಗಳನ್ನು ಬೆಂಬಲಿಸುವ ಜೆಡಿಎಸ್ ಗೆ ನಾವ್ಯಾಕೆ ವೋಟು ಹಾಕ್ತಿದೀವಿ ಗೊತ್ತಾ? ಮಂಡ್ಯದಲ್ಲಿ ಬೇಕಂತಲೇ ನಮ್ಮ ವೋಟು ಪಡೆಯಬಲ್ಲಂಥಾ ಸಮರ್ಥನನ್ನು ಬೆಳೆಸಲೇ ಇಲ್ಲ. ಎಲ್ಲ ಇದ್ದರೂ ಮಂಡ್ಯವನ್ನು ಬಿಜೆಪಿಯ ಪಾಲಿಗೆ ಬಂಜರು ಮಾಡಲಾಯಿತು. ಬಹುಶಃ ಇಲ್ಲಿರುವ ಮೋದಿ ಅಭಿಮಾನಿಗಳ ಸಂಖ್ಯೆಯನ್ನು ನೋಡಿದರೆ ನೀವು ಆಶ್ಚರ್ಯಪಡುತ್ತೀರಿ. ಆದರೇನು ಮಾಡೋದು?
ಬಿಜೆಪಿಯಲ್ಲೇ ಇರುವ ಹಿತಶತ್ರುಗಳ ಷಢ್ಯಂತ್ರದಿಂದ ಅದನ್ನು ಚುನಾವಣೆಯಲ್ಲಿ ತೋರಿಸಲು ನಮಗೆ ಅವಕಾಶವಿಲ್ಲದಂತಾಗಿದೆ. ನಮ್ಮ ಮೇಲೆ ಗೂಬೆ ಕೂರಿಸಿ ತಾವು ಮಾತ್ರ ಮಹಾ ಸಂಭಾವಿತರಂತೆ, ದೇಶಭಕ್ತರಂತೆ ಕೇಸರಿ ಶಾಲು ಹಾಕಿಕೊಂಡು ಪೋಸುಕೊಡುತ್ತಿದ್ದಾರೆ. ಸುಮಲತಾ ಬಿಜೆಪಿ ಗೆ ಬಂದರೆ ದೇವೇಗೌಡರ ಮಗ ಸೋಲುತ್ತಾನೆ ಎಂಬ ಒಂದೇ ಒಂದು ಕಾರಣಕ್ಕೆ ಬಿಜೆಪಿಯಲ್ಲಿರೋ ದೇವೇಗೌಡರ ಗುಲಾಮರು ಸುಮಲತಾ ಬಿಜೆಪಿಗೆ ಬರಲು ಸಹಕರಿಸುತ್ತಿಲ್ಲ. ಹೀಗಾಗಿ ದಯಮಾಡಿ ಪ್ರತಿ ಸಲ ಮಾಡುವಂತೆ ಇಂಥಾ ಪಕ್ಷವಿರೋಧಿ ಕೆಲಸಗಳನ್ನು ಈ ಸಲವಾದರೂ ಮಾಡದೇ ಡಮ್ಮಿ ಅಭ್ಯರ್ಥಿಯನ್ನು ಹಾಕದೇ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ. ಮಂಡ್ಯದಲ್ಲೂ ಕಮಲ ಅರಳಿಸೋಣ. ಮೋದಿ ಗೆಲ್ಲಿಸಿ ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡೋಣ. ಈ ನಿಟ್ಟಿನಲ್ಲಿ ಬಯಸದೇ ಬಂದ ಭಾಗ್ಯದಂತೆ ಬಿಜೆಪಿಯ ಹೊಸಿಲಿನಲ್ಲಿ ನಿಂತಿರುವ ಸುಮಲತಾ ಅಂಬರೀಶ್ ರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಿ.
#SumalathaForBJP
#WakeUpKarnatakaBJP
Discussion about this post