ತೀರ್ಥಹಳ್ಳಿ: ಮಲೆನಾಡಿನ ಮಡಿಲಲ್ಲಿ ಏರ್ಪಡಿಸಲಾಗಿದ್ದ ಮಲೆನಾಡು ಮ್ಯಾಜಿಕ್ ಸರ್ಕಲ್ ಹಾಗೂ ಇಂದ್ರಜಾಲಿಗರ ಸಮ್ಮೇಳನವನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಚಾಲನೆ ನೀಡಿದರು.
ಖ್ಯಾತ ಕಲಾವಿದ ಶಿವಾಜಿ ಜಾದೂಗಾರ್ ಸೇರಿದಂತೆ ಇತರ ಕಲಾವಿದರಿಂದ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಜೆಸಿಬಿ ಯಂತ್ರ, ಬೈಕ್ ಹಾಗೂ ಕಾರನ್ನು ಚಲಾಯಿಸುವ ಜಾಥಾಗೆ ಶಾಮಣ್ಣ ಚಾಲನೆ ನೀಡಿದರು.
ಜಾದೂಗಾರ ಸಮಾಜಕ್ಕೆ ಆದರ್ಶ ಮತ್ತು ಆಕರ್ಷಣೆಯ ಕೇಂದ್ರ ಬಿಂದುವಾಗುವ ಕ್ರಮ ಎಂಬ ವಿಚಾರದ ಕುರಿತಾಗಿ ಓಂ ಗಣೇಶ್ ಕಾಮತ್ ನಡೆಸಿಕೊಟ್ಟರೆ, ದೊಡ್ಡ ಮ್ಯಾಜಿಕ್ ಪರಿಕರಗಳ ತಯಾರಿಕೆ ಮಾತನಾಡುವ ಗೊಂಬೆ ತಯಾರಿಕೆ ಎಂಬ ವಿಚಾರದಲ್ಲಿ ಸತೀಶ್ ಹೆಮ್ಮಾಡಿ ಮತ್ತು ಸೂರ್ಯ ಜಾದೂಗಾರ್, ಸುಮಾ ರಾಜಕುಮಾರ್, ಪ್ರಹ್ಲಾದ್ ಆಚಾರ್ಯ ಮಾತನಾಡಿದರು.
ಮ್ಯಾಜಿಕ್ ಮೂಲಕ ಹಣಗಳಿಸುವುದು ಹೇಗೆ ಎಂಬ ವಿಚಾರದಲ್ಲಿ ಉದಯ್ ಜಾದೂಗಾರ್ ಮಾತನಾಡಿದರು. ಉದಯ್ ಮ್ಯಾಜಿಕ್ ವರ್ಲ್ಡ್ ವತಿಯಿಂದ ಮ್ಯಾಜಿಕ್ ಪರಿಕರ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿತ್ತು.
ಹೊಸ ಜಾದೂ ಚಮತ್ಕಾರಗಳ ಪರಸ್ಪರ ವಿನಿಮಯ ಎಂಬ ವಿಚಾರದ ಕುರಿತಾಗಿ ಪ್ರಶಾಂತ್ ಹೆಗಡೆ ಜಾದೂಗಾರತ್ ಮಾತನಾಡಿದರು.
ಇದೇ ವೇಳೆ ಹಿರಿಯ ಜಾದೂ ಕಲಾವಿದರನ್ನು ಸನ್ಮಾನಿಸಲಾಯಿತು. ಜಾದೂ ವಿನ ತಂತ್ರಗಳ ವಿಚಾರ ವಿನಿಮಯ ನಡೆಯಿತು ಸಂಜೆ ಎಲ್ಲಾ ಜಾದೂಗಾರರಿಂದ ಅದ್ದೂರಿ ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಉದಯ್ ಜಾದೂಗಾರ್, ಹಿರಿಯ ಜಾದೂಗಾರ್ ನಿಂಬಾಳ್ಕರ್ ಇದ್ದರು.
ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ, ಎನ್’ಎಸ್’ಎಸ್ ವಿದ್ಯಾರ್ಥಿಗಳು ಹಾಗೂ ತುಂಗಾ ಮಹಾ ವಿದ್ಯಾಲಯದ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
(ವರದಿ: ಡಾ.ಸುಧೀಂದ್ರ)
Discussion about this post