ಭದ್ರಾವತಿ: ನೆನೆಗುದಿಗೆ ಬಿದ್ದಿರುವ ಬಡವರಿಗೆ ಮಹತ್ತರ ಯೋಜನೆಯಾಗಿರುವ ರಾಜ್ಯ ಸರಕಾರದ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭಿಸಲು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಮುಖಂಡರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಹಳೇನಗರದ ಸಂತೆ ಮೈದಾನ ಹಾಗೂ ಬಿಎಚ್ ರಸ್ತೆಯ ಖಾಸಗೀ ಬಸ್ ನಿಲ್ದಾಣಗಳಲ್ಲಿ ಜಾಗ ನಿಗದಿಪಡಿಸಿ ಯೋಜನೆಯ ಕಾಮಗಾರಿಗೆ ಹಣ ಮಂಜೂರು ಮಾಡಿದ್ದರು ಇನ್ನು ಆರಂಭಿಸದಿರುವುದು ಸಂಘಟನೆಯು ಖಂಡಿಸುತ್ತದೆ. ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಲ್ಲಿ ಬಡ ರ್ಕಾುಕರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಲೆ ಕ್ಯಾಂಟೀನ್ ಆರಂಭಿಸಿ ಅನುಕೂಲ ಕಲ್ಪಿಸಿಕೊಡಬೇಕೆಂದು ಪೌರಾಯುಕ್ತರಿಗೆ ಸಲ್ಲಿಸಿದ ಮನೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನಯ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ರಘೀರ್ ಸಿಂಗ್, ತಾಲೂಕು ಅಧ್ಯಕ್ಷ ಕೆ. ಸುದೀಪ್ ಕುಮಾರ್, ಶಿಕಾರಿಪುರ ಅಧ್ಯಕ್ಷ ಹುಲಗಿ ಕೃಷ್ಣ, ನಗರಸಭಾ ಸದಸ್ಯರಾದ ಫ್ರಾನ್ಸಿಸ್, ಚನ್ನಪ್ಪ ಮುಖಂಡರಾದ ಜಯಗಾಂಧಿ, ಬಾಬು, ಗೋವಿಂದ, ಅಶೋಕ್ ಸೇರಿದಂತೆ ಅನೇಕರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post