ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ದ ಆರೋಪ ಮಾಡಿರುವ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಹೇಳಿಕೆಗಳು ಸಣ್ಣತನದಿಂದ ಕೂಡಿವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಉಪಮೇಯರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಮಾಜಿ ಶಾಸಕರ ಮಾಹಿತಿ ಕೊರತೆಯಿಂದ ಅಂತಹ ಹೇಳಿಕೆಯನ್ನು ನೀಡುತ್ತಿದ್ದು ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ಸಿನಲ್ಲಿ ನಾನೊಬ್ಬನಿದ್ದೇನೆ ಎಂದು ಈ ಗುರುತಿಸಿಕೊಳ್ಳಲು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈಶ್ವರಪ್ಪನವರ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು ಉತ್ಸಾಹ ರಾಜಕಾರಣಿ ಅಭಿವೃದ್ಧಿಯ ಪರ ಇರುವ ಶಾಸಕರ ಮೇಲೆ ಇಂತಹ ಹೇಳಿಕೆ ಸಲ್ಲ. ಈಶ್ವರಪ್ಪನವರು ಶಿವಮೊಗ್ಗದ ನಗರದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಅವರ ಪ್ರಾಮಾಣಿಕ ಪ್ರಯತ್ನದಿಂದ ವಿಶೇಷ ಪ್ರಯತ್ನದಿಂದ ನಗರಕ್ಕೆ 31 ಕೋಟಿಗೂ ಅಧಿಕ ಹೆಚ್ಚಿನ ಅನುದಾನವನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವೆಲ್ಲ ಹತ್ತು ತಿಂಗಳ ಅಧಿಕಾರದಲ್ಲಿ ನಡೆದಿದ್ದು ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕಂಡಿವೆ. ಕುಡಿಯುವ ನೀರಿನ ಬಗ್ಗೆ ಮತ್ತು ಯುಜಿಡಿ ಕಾಮಗಾರಿ ಆಶ್ರಯ ಮನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಈಶ್ವರಪ್ಪನವರ ಆಡಳಿತದಲ್ಲಿ ಕಂಡಿವೆ ಎಂದರು.
Discussion about this post