ಶಿಕಾರಿಪುರ: ತಾಲೂಕು ಸೇರಿದಂತೆ ಶಿವಮೊಗ್ಗ ಜಿಲ್ಲೆ ಅನೇಕ ಸಂಸ್ಕೃತಿ, ಕಲೆಯ ತವರು. ಇಲ್ಲಿನ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಸುದ್ದಿಯನ್ನು ನೀವು ಓದಿರುತ್ತಿರಾ ಕೇಳಿರುತ್ತೀರ. ಈಗ ಇದೇ ಮಲೆನಾಡಿನ ಪ್ರತಿಭೆಯೊಬ್ಬರು ಕಿರುತೆರೆಯ ವೇದಿಕೆಯಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲು ಅಣಿಯಾಗುತ್ತಿದ್ದಾರೆ.
ಪಟ್ಟಣದ ಭವಾನಿರಾವ್ ಕೇರಿಯ ಉಮೇಶ್ ಗೌಡ ಹಾಗೂ ರತ್ನ ಅವರ ದಂಪತಿ ಪುತ್ರಿ ಹರ್ಷಿತಾ ಕಲರ್ಸ್ ಕನ್ನಡದ ಖ್ಯಾತಿಯ ಕನ್ನಡದ ಕೋಗಿಲೆಗೆ ಆಯ್ಕೆಯಾಗಿದ್ದು ತಾಲೂಕಿನಲ್ಲಿ ಮನೆ ಮಾತಾಗಿದ್ದಾರೆ.

ಪ್ರಸ್ತುತ ಹರ್ಷಿತ ಅವರು ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ತೃತೀಯ ಬಿಇ ವ್ಯಾಸಂಗ ಮಾಡುತ್ತಿದ್ದು, ಚಿಕ್ಕ ವಯಸ್ಸಿನಿಂದಲೇ ಶಾಸ್ತ್ರೀಯ ಸಂಗೀತ, ಭರತನಾಣ್ಯ, ಮುಂತಾದ ಕಲೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಕಲೆಯಲ್ಲಿ ಎಷ್ಟು ಆಸಕ್ತಿಯಿದೆಯೋ ಈಕೆ ಓದಿನಲ್ಲೂ ಅಷ್ಟೇ ಸದಾ ಮುಂದು.

ಒಟ್ಟಿನಲ್ಲಿ ನಮ್ಮ ತಾಲೂಕಿನ ಪ್ರತಿಭೆಯೊಂದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಗೆದ್ದು ಬರಲಿ ಎಂದು ತಾಲೂಕಿನ ಜನತೆಯ ಪರವಾಗಿ ಕಲ್ಪ ನ್ಯೂಸ್ ತಂಡ ಶುಭ ಹಾರೈಸುತ್ತದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
















