ಹುಲಿಕಲ್: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಹಲವೆಡೆ ತಪಾಸಣೆಯ ಬಿಸಿ ತಟ್ಟಿತು.
ಇಂದು ಬೆಳಗ್ಗೆ ಭದ್ರಾವತಿ ಬಳಿಯಲ್ಲಿ ತಪಾಸಣೆಗೆ ಒಳಪಟ್ಟಿದ್ದ ಸಿಎಂ ಕಾರನ್ನು, ಸಂಜೆ 6 ಗಂಟೆ ವೇಳೆಗೆ ಹುಲಿಕಲ್ ಬಳಿಯ ಚೆಕ್’ಪೋಸ್ಟ್’ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ಶಿವಮೊಗ್ಗದಿಂದ ದಕ್ಷಿಣ ಕನ್ನಡಕ್ಕೆ ಹೊರಟಿದ್ದ ಕುಮಾರಸ್ವಾಮಿ ಅವರನ್ನು ಹುಲಿಕಲ್ ಚುನಾವಣಾ ಚೆಕ್’ಪೋಸ್ಟ್’ನಲ್ಲಿ ಎಸ್’ಎಸ್’ಟಿ ಅಧಿಕಾರಿಗಳ ತಂಡ ತಡೆದು, ವಾಹನವನ್ನು ತಪಾಸಣೆ ನಡೆಸಿತು. ಮಾತ್ರವಲ್ಲ ಅವರ ಬೆಂಗಾವಲು ಪಡೆಯ ವಾಹನಗಳನ್ನೂ ಸಹ ಅಧಿಕಾರಿಗಳು ತಪಾಸಣೆ ನಡೆಸಿದರು.
ಈ ವೇಳೆ ಎಸ್’ಎಸ್’ಟಿ ತಂಡದ ಅಧಿಕಾರಿಗಳಾದ ಸಿ. ರತ್ನಾಕರ್, ದುರ್ಗಾ ಪು.ಕೆ., ಪೊಲೀಸ್ ಸಿಬ್ಬಂದಿಗಳಾದ ಶ್ರೀಧರ ಮಂಟೂರ್, ಕಿರಣ್, ವಿನೋದ್ ಕುಮಾರ್ ಸೇರಿದಂತೆ ಅಬಕಾರಿ ಅಧಿಕಾರಿಗಳೂ ಸಹ ಹಾಜರಿದ್ದರು.
(ವರದಿ: ಶ್ರೀಕಂಠ, ಹೊಸನಗರ)









Discussion about this post