ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ಅವರ ಪಿಆರ್’ಕೆ ಪ್ರೊಡಕ್ಷನ್ಸ್’ನ ಅಡಿಯಲ್ಲಿ ಮೊದಲ ಕಾಣಿಕೆಯಾಗಿ ತೆರೆಗೆ ಬರಲು ಸಿದ್ದವಾಗಿರುವ ಕವಲುದಾರಿ ಚಿತ್ರದ ಟ್ರೇಲರ್ ಬಿಡುಗಡೆಗೆಯಾಗಿದ್ದು, ಚಿತ್ರದ ಬಗೆಗಿನ ಕುತೂಹಲ ಸೃಷ್ಠಿಯಾಗಿದೆ.
ಟ್ರೇಲರ್ ನೋಡಿ:
ಕವಲುದಾರಿ ಸಸ್ಪೆನ್ಸ್ ಥ್ರಿಲ್ಲರ್(ಪತ್ತೆದಾರಿ) ಚಿತ್ರವಾಗಿದ್ದು, ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಖ್ಯಾತಿ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಆಪರೇಶನ್ ಅಲಮೇಲಮ್ಮ ಚಿತ್ರ ಖ್ಯಾತಿಯ ರಿಷಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಹಿರಿಯ ನಟ ಅನಂತನಾಗ್, ಅಚ್ಯುತ ಕುಮಾರ್, ಸುಮನ್ ರಂಗನಾಥ್ ಹಾಗೂ ರೋಶ್ನಿ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.
ಚಿತ್ರ ಎಪ್ರಿಲ್ 12ರಂದು ತೆರೆ ಕಾಣಲಿದೆ.
Discussion about this post