ಕಲಬುರ್ಗಿ: ಲೋಕಸಭೆಗೆ ನಿನ್ನೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಿಯಮ ಉಲ್ಲಂಘಿಸಿದ್ದು, ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮಲ್ಲಿಕಾರ್ಜುನ ಖರ್ಗೆ ದಂಪತಿ ಸಮೇತವಾಗಿ ಬೂತ್ ನಂಬರ್ 119ನಲ್ಲಿ ಮತದಾನ ಮಾಡುವ ವೇಳೆ ಪತ್ನಿಯೊಡನೇ ತೆರಳಿದ್ದಾರೆ. ಮತಯಂತ್ರದಲ್ಲಿ ಗುಂಡಿಯೊತ್ತುವ ವೇಳೆ ಸಹ ಪತ್ನಿ ಅವರ ಜತೆಗೆ ಇದ್ದರು. ಇದು ಸ್ಪಷ್ಟವಾಗಿ ಮತದಾನ ನಿಯಮ ಉಲ್ಲಂಘನೆಯಾಗಿದೆ. ಖರ್ಗೆ ಮತದಾನ ನಿಯಮ ಉಲ್ಲಂಘನೆ ಮಾಡಿರುವ ಕುರಿತಂತೆ ಚುನಾವಣಾ ಆಯುಕ್ತರು ಸ್ವತಃ ಹೇಳಿಕೆ ನೀಡಿದ್ದಾರೆ.
ಹಿರಿಯ ಸಂಸದೀಯ ಅನುಭವಸ್ಥರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ರೀತಿ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Discussion about this post