ಭದ್ರಾವತಿ: ತಾಲೂಕಿನ ಬಾರಂದೂರು ಸಮೀಪದ ಕಾಳಿಂಗನಹಳ್ಳಿ ಗ್ರಾಮದಲ್ಲಿ ಶ್ರೀ ಕರುಮಾರಿಯಮ್ಮ ಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳಿಂದ ಅದ್ದೂರಿಯಾಗಿ ನೆರವೇರಿತು.
ದೇವಾಲಯದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಕಲಾ ತತ್ವ ಹೋಮ, ಕಲಶಾಭಿಷೇಕ, ತೀರ್ಥಪ್ರಸಾದ ವಿನಿಯೋಗ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಸಮಾಜ ಸೇವಕ ಹಾಗೂ ಸ್ನೇಹ ಜೀವಿ ಸಂಘದ ಉಮೇಶ್(ಪೊಲೀಸ್) ವಿಗ್ರಹ ದಾನ ಮಾಡಿದ್ದನ್ನು ಸ್ಮರಿಸಿ ದೇವಾಲಯದ ಸೇವಾ ಟ್ರಸ್ಟ್ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು.
ಟ್ರಸ್ಟ್ ಅಧ್ಯಕ್ಷ ಬೋರಲಿಂಗೇಗೌಡ, ಪದಾಧಿಕಾರಿಗಳಾದ ಬಿ. ವಿಶ್ವನಾಥ್, ಜೆ. ವರದರಾಜು, ಕೆ. ಶ್ರೀನಿವಾಸ್, ಎಚ್. ಗಿರೀಶ್, ಬಿ. ನಿಂಗಯ್ಯ, ನಿಂಗಪ್ಪ, ಸುರೇಶ್, ಸಿ. ನರೇಂದ್ರ, ಅರಸು, ಮೋಹನ್‍ಕುಮಾರ್, ಸೈಯದ್ ಆಲಿ, ಸ್ನೇಹ ಜೀವಿ ಬಳಗದ ಸತೀಶ್ ಸೇರಿದಂತೆ ಕಾಳಿಂಗನಹಳ್ಳಿ, ಬಾರಂದೂರು, ಕಾರೇಹಳ್ಳಿ, ಕೆಂಚೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)















