ಕೊಲಂಬೋ: ಇಲ್ಲಿನ ಚರ್ಚ್‌ನಲ್ಲಿ ಉಗ್ರರ ದಾಳಿ ನಡೆದು ನೂರಾರು ಮಂದಿ ಬಲಿಯಾದ ಬೆನ್ನಲ್ಲೇ ಈಗ ಬೌದ್ಧ ಮಂದಿರಗಳಿಗೆ ಭಯೋತ್ಪಾದಕರ ದಾಳಿ ಭೀತಿ ಎದುರಾಗಿದೆ.
ಈ ಕುರಿತಂತೆ ಶ್ರೀಲಂಕಾದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಬೌದ್ಧ ದೇಗುಲಗಳ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಸಂಚು ರೂಪಿಸಿದ್ದು, ತತಕ್ಷಣವೇ ಎಚ್ಚೆತ್ತು, ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಈಸ್ಟರ್ ಸ್ಫೋಟ ನಡೆಸಿರುವ ನ್ಯಾಷನಲ್ ತೌಹೀದ್ ಜಮಾತ್‌ನ ಉಗ್ರರೇ ಈ ಸ್ಫೋಟಗಳನ್ನೂ ನಡೆಸುವ ಸಂಚು ರೂಪಿಸಿದೆ ಎಂದು ವರದಿಯಾಗಿದೆ.
ಸೈಂತಮುರುತು ಪ್ರದೇಶದಲ್ಲಿ ಶ್ರೀಲಂಕಾ ಪೊಲೀಸರು ದಾಳಿ ನಡೆಸಿದಾಗ ಬೌದ್ಧರ ಉಡುಪುಗಳು ಪತ್ತೆಯಾಗಿದ್ದು, ಇದು ತನಿಖಾ ಸಂಸ್ಥೆಗಳಿಗೆ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಗಿರಿಯುಲಾ ಎಂಬ ಪ್ರದೇಶದಲ್ಲಿರುವ ಜವುಳಿ ಅಂಗಡಿಯೊಂದರಿಂದ ಮಾರ್ಚ್ 29ರಂದು 9 ಜೊತೆ ಬೌದ್ಧರ ಉಡುಪುಗಳನ್ನು ಖರೀದಿಸಿದ್ದು ತಿಳಿದುಬಂದಿದೆ. ಈ ಉಡುಪುಗಳನ್ನು ಧರಿಸಿಕೊಂಡ ಮಹಿಳೆಯರು ಬೌದ್ಧ ಮಂದಿರಗಳನ್ನು ಪ್ರವೇಶಿಸುವಂತೆ ಮಾಡಿ, ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
Discussion about this post