No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Thursday, October 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಗರ್ಭ ನಿರೋಧಕ ಮಾತ್ರೆ ಸುರಕ್ಷಿತವೇ? ಗರ್ಭಿಣಿಯರು ಪಾಲಿಸಬೇಕಾದ ಎಚ್ಚರಿಕೆಗಳೇನು?

ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ.ಅಶ್ವಿನಿ ಪೈ ಸಂದರ್ಶನ

kalpa News by kalpa News
May 2, 2019
in Army
0
ಗರ್ಭ ನಿರೋಧಕ ಮಾತ್ರೆ ಸುರಕ್ಷಿತವೇ? ಗರ್ಭಿಣಿಯರು ಪಾಲಿಸಬೇಕಾದ ಎಚ್ಚರಿಕೆಗಳೇನು?
Share on FacebookShare on TwitterShare on WhatsApp

ದಿನ ತುಂಬುವ ಸಮಯ ಹತ್ತಿರವಾದಂತೆ ಗರ್ಭಿಣಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರಬಹುದು. ಆದರೆ ಭಯ ಪಡುವ ಅವಶ್ಯಕತೆ ಇಲ್ಲ. 37 ವಾರಗಳ ನಂತರ ಹೆರಿಗೆಯಾದರೆ ಅದೊಂದು ಆರೋಗ್ಯಕರ ಹೆರಿಗೆಯಾಗುತ್ತದೆ. ಮಗು ಸಹ ಆರೋಗ್ಯಪೂರ್ಣವಾಗಿರುತ್ತದೆ ಎಂಬ ನಂಬಿಕೆ ಇದೆ.

ಒಬ್ಬ ಮಹಿಳೆಯ ಜೀವನದಲ್ಲಿ ಗರ್ಭಾವಸ್ಥೆ ಹಾಗೂ ತಾಯಿಯಾಗುವುದು ಎಂಬುದು ಅತ್ಯಂತ ಮಹತ್ವವಾದ ಘಟ್ಟವಾಗಿದ್ದು, ಇದು ಪ್ರಕೃತಿ ಹೆಣ್ಣಿಗೆ ಮಾತ್ರ ನೀಡಿರುವ ವಿಶೇಷ ವರ. ವರ್ಷಗಳಿಂದ ಆಕೆ ಕಂಡಿರುವ ಕನಸು ನನಸಾಗುವ ಸಮಯವದು. ಈ ಹಂತದಲ್ಲಿ ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುರುವುದು ಸಹಜ. ಸಮಸ್ಯೆಯನ್ನು ತಜ್ಞವೈದ್ಯರ ಬಳಿ ಹೇಳಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿರುತ್ತದೆ.
ಈ ನಿಟ್ಟಿನಲ್ಲಿ ಸುಬ್ಬಯ್ಯವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಅಶ್ವಿನಿ ಹರೀಷ್ ಪೈ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಡೆಸಿದ ಒಂದು ಕಿರು ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಡಾ.ಅಶ್ವಿನಿ ಪೈ ಕುರಿತು:
ಡಾ. ಅಶ್ವಿನಿ ಪೈ ಅವರು ಕಳೆದ 7 ವರ್ಷಗಳಿಂದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನಾ ಅವರು ಕೆಎಂಸಿ ಮಣಿಪಾಲದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಗರ್ಭಿಣಿಯಾಗಿರುವುದು ತಿಳಿಯುವುದು ಹೇಗೆ?
ಮಹಿಳೆಯರಿಗೆ ಮುಟ್ಟು ನಿಲ್ಲುವಿಕೆ ಗರ್ಭಾವಸ್ಥೆಯ ಸೂಚಕ. ಮುಟ್ಟು ನಿಲ್ಲುತ್ತಿದ್ದಂತೆಯೆ ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಬೇಕು. ಗರ್ಭಧಾರಣೆ ಪತ್ತೆಗೆ ಮೂತ್ರ ಪರೀಕ್ಷೆ, ರಕ್ತಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸಬೇಕು. ಪ್ರತಿ ತಿಂಗಳಿಗೆ ಒಮ್ಮೆ ಪರೀಕ್ಷೆ ಇರುತ್ತದೆ. ನಂತರ 2 ವಾರಕ್ಕೊಮ್ಮೆ ಹಾಗೂ ದಿನಗಳು ಹತ್ತಿರ ಬರುತ್ತಿದ್ದಂತೆ ಪ್ರತಿ ವಾರಕ್ಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.

ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಪರೀಕ್ಷೆಗಳು ಅಗತ್ಯ?
ಒಂದು ಹೆಣ್ಣು ಗರ್ಭಾವಸ್ಥೆಗೆ ತಲುಪುತ್ತಿದ್ದಾರೆ ಎಂದರೆ ಆಕೆಯ ದೇಹದ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಬದಲಾವಣೆ ಆಗುತ್ತದೆ.ಆಕೆಯ ಸಂಪೂರ್ಣ ದೇಹ ಪರೀಕ್ಷೆ, ರಕ್ತಪರೀಕ್ಷೆ, ಹೆಚ್‌ಐವಿ ಪರೀಕ್ಷೆ, ರಕ್ತದೊತ್ತಡ, ರಕ್ತ ಗುಂಪು ತಪಾಸಣೆ ನಡೆಸಲಾಗುತ್ತದೆ.

ಗರ್ಭದಾರಣೆ ಪತ್ತೆ ಹಚ್ಚುವ ವೈದ್ಯಕೀಯ ವಿಧಾನ ಹೇಗೆ?
ಗರ್ಭಧಾರಣೆಯನ್ನು 5ನೆಯ ವಾರದಲ್ಲಿ ಮೂತ್ರ ಹಾಗೂ ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು ಹಾಗೂ 6ನೆಯ ವಾರದಲ್ಲಿ ಸ್ಕ್ಯಾನಿಂಗ್ ಮಾಡಿಸುವ ಮೂಲಕ ಮಗುವಿನ ಆಕಾರ, ಹೃದಯ ಬಡಿತವನ್ನು ತಿಳಿಯಬಹುದು. ಕೆಲವರು 4ನೆಯ ವಾರದಲ್ಲಿ ಗರ್ಭ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಬರುತ್ತಾರೆ. ಆದರೆ ಇದರಿಂದ ಗರ್ಭಧಾರಣೆಯ ಬಗ್ಗೆ ಯಾವ ವಿಚಾರವೂ ತಿಳಿಯುವುದಿಲ್ಲ.

ಗರ್ಭ ನಿರೋಧಕ ಮಾತ್ರೆಗಳು ಸುರಕ್ಷಿತವೇ?
ಗರ್ಭ ನಿರೋಧಕ ಮಾತ್ರೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಕಾಪರ್ ಟಿ ಎಂಬ ಸಾಧನವನ್ನು ಮಹಿಳೆಯರಿಗೆ ಬೇಡದ ಗರ್ಭಧಾರಣೆಯನ್ನು ತಡೆಯಲು ಗರ್ಭಕೋಶದಲ್ಲಿ ಅಳವಡಿಸಲಾಗುತ್ತದೆ. ಕಾಪರ್ ಟಿ ಧರಿಸಿದ್ದರೂ ಸಹ ಗರ್ಭಧಾರಣೆ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಬೇಡದ ಗರ್ಭಧಾರಣೆಯನ್ನು ತಡೆಯಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳಿತು.

ಗರ್ಭಿಣಿಯರ ಆಹಾರ ಪದ್ದತಿ ಹೇಗಿರಬೇಕು?
ಒಬ್ಬ ಮಹಿಳೆಗೆ ತಾನು ಗರ್ಭವತಿ ಆಗುತ್ತಿರುವ ವಿಷಯ ತಿಳಿದೊಡನೆ ಆಕೆಗೆ ಹಿರಿಯರು ಅವರದ್ದೇ ಆದ ಸಲಹೆಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಗರ್ಭಿಣಿಯರು ಕೆಲವೊಂದು ಆಹಾರವನ್ನು ತಿನ್ನಬೇಕು, ಕೆಲವೊಂದು ಆಹಾರಗಳನ್ನು ತಿನ್ನಲೇ ಬಾರದು ಎಂದು ಕಟ್ಟುನಿಟ್ಟಾಗಿ ಹೇಳುವುದು ನಮ್ಮಲ್ಲಿ ನಡೆದುಬಂದ ಪದ್ದತಿ. ಗರ್ಭಾವಸ್ಥೆಯಲ್ಲಿ ಸಮತೋಲನ ಆಹಾರ ಸೇವಿಸಬೇಕು. ಹೈಪ್ರೋಟಿನ್ ಮತ್ತು ಫೈಬರ್ ಉಳ್ಳ ಮೊಳಕೆ ಕಾಳು, ಸೊಪ್ಪು, ಹಾಲು, ಮೊಸರು, ಹಣ್ಣು-ತರಕಾರಿ ಇತ್ಯಾದಿಗಳನ್ನು ಸೇವಿಸಬೇಕು. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು.

ಕೆಲಸಕ್ಕೆ ಹೋಗುವ ಗರ್ಭಿಣಿಯರು ವಹಿಸಬೇಕಾದ್ದ ಮುಂಜಾಗ್ರತೆ?
ಇಂದಿನ ಆಧುನಿಕ ಯುಗದ ಮಹಿಳೆಯರು ಪುರುಷರನ್ನು ಮೀರಿಸುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ. ಗರ್ಭಿಣಿಯರು ಆರೋಗ್ಯ ಪೂರ್ಣವಾಗಿದ್ದರೆ 9 ತಿಂಗಳೂ ಸಹಾ ಕೆಲಸಕ್ಕೆ ಹೋಗಬಹುದು. ಕೆಲವರು ವೈದ್ಯರ ಸಲಹೆಯನ್ನು ಪಡೆದು 5ನೆಯ ತಿಂಗಳಿನಿಂದ ವಿಶ್ರಾಂತಿಯನ್ನು ಪಡೆದರೆ ಸೂಕ್ತ. ವೈದ್ಯರೂ ಸಹ ಕೆಲಸಕ್ಕೆ ಹೋಗುವ ಗರ್ಭಿಣಿಯರಿಗೆ ಹೆಚ್ಚು ವಿಶ್ರಾಂತಿಯನ್ನು ಪಡೆಯಲು ಸಲಹೆಯನ್ನು ನೀಡುತ್ತಾರೆ. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ದಿನಗಳನ್ನು ಸಂತೋಷದಿಂದ ಅನುಭವಿಸಬೇಕು. ಈ ಸಮಯದಲ್ಲಿ ಯಾವುದೇ ಮಾನಸಿಕ ಒತ್ತಡ, ಚಿಂತೆ, ನೋವು ಅನಭಿವಿಸಬಾರದು. ಗರ್ಭಿಣಿಯ ಪತಿ ಹಾಗೂ ಆಕೆಯ ಮನೆಯವರು ಪ್ರೀತಿಯಿಂದ ಆರೈಕೆ ಮಾಡಬೇಕು. ಪೌಷ್ಠಿಕ ಆಹಾರ, ಹಾಲು, ಮೊಸರು, ಪಾನಕ, ಮಜ್ಜಿಗೆ ಸೇವಿಸಬೇಕು, ಸದಾ ತೆಳುವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು ಹೀಗೆ ಹತ್ತು ಹಲವಾರು ಮುಂಜಾಗೃತಾ ಕ್ರಮಗಳನ್ನು ಗರ್ಭಿಣಿಯರು ವಹಿಸಬೇಕು. ಆಗ ಅವರ ಆರೋಗ್ಯ ಉತ್ತಮವಾಗಿರಲು ಸಹಕಾರಿಯಾಗುತ್ತದೆ.

ಗರ್ಭಿಣಿಯರು ಕೈಗೊಳ್ಳಬೇಕಾದ್ದ ಮುಂಜಾಗ್ರತೆಗಳಿವು:
ಗರ್ಭಾವಸ್ಥೆ ಎಂದರೆ ಮಹಿಳೆಯರ ಪಾಲಿಗೆ ಅದೊಂದು ಮಹತ್ವವಾದ ಕಾಲ. ಗರ್ಭಧಾರಣೆ ಅಥವಾ ಹೆರಿಗೆ ಎಂದರೆ ಸಾಮಾನ್ಯವಾದ ವಿಷಯವಲ್ಲ. ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯರು ಸರಿಯಾದ ಮುತುವರ್ಜಿ ವಹಿಸಿಕೊಳ್ಳಲಿಲ್ಲವಾದರೆ ತಾಯಿ-ಮತ್ತು ಮಗು ಇಬ್ಬರಿಗೂ ಅಪಾಯವಿರುತ್ತದೆ.
ಮಗು ಗರ್ಭದಲ್ಲಿ ಯಾವ ರೀತಿ ಒತ್ತಡಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ನಮಗೆ ಹೇಳಲು ಅಸಾಧ್ಯ. ಎಲ್ಲಾ ಸರಿಯಾಗಿದ್ದರೂ ಕೆಲವೊಮ್ಮೆ ತೊಂದರೆ ಉಂಟಾಗಬಹುದು. ಸ್ಕ್ಯಾನಿಂಗ್ ಮಾಡಿದರೂ ಕೆಲವೊಮ್ಮೆ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಗರ್ಭಿಣಿಯರಿಗೆ ಪದೇ-ಪದೇ ಸ್ಕ್ಯಾನಿಂಗ್ ಅಪಾಯ ತರುತ್ತದೆಯೇ?
ಸಾಮಾನ್ಯವಾಗಿ ಗರ್ಭಿಣಿಯರಿಗೆ ಪ್ರಾರಂಭದಲ್ಲಿ ಒಂದೂವರೆ ತಿಂಗಳಿಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ. ನಂತರ ಕ್ರಮವಾಗಿ 3 ಹಾಗೂ 5 ನೆಯ ತಿಂಗಳಿಗೆ ಮಾಡಬೇಕಾಗಿರುತ್ತದೆ. 5 ನೆಯ ತಿಂಗಳಿನಲ್ಲಿ ಮಾಡುವ ಸ್ಕ್ಯಾನಿಂಗ್ ಅತ್ಯಂತ ಮಹತ್ವದ್ದಾಗಿದ್ದು, ಈ ಪರೀಕ್ಷೆಯಲ್ಲಿ ಮಗುವಿನ ದೇಹದಲ್ಲಿ ಏನಾದರು ಊನಗಳು ಇವೆಯೇ ಎಂದು ಕಂಡುಹಿಡಿಯಲಾಗುತ್ತದೆ. ನಂತರ 7, 8 ಹಾಗೂ 9ನೆಯ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳು ಸುರಕ್ಷಿತವಾಗಿರುತ್ತದೆ. ಸ್ಕ್ಯಾನಿಂಗ್ ಮಾಡುವುದರಿಂದ ತಾಯಿ ಅಥವಾ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಗರ್ಭಿಣಿಯರು ಯಾವೆಲ್ಲಾ ಮಾತ್ರೆಗಳನ್ನು ತೆಗೆದುಕೊಳ್ಳಬಹುದು?
ಗರ್ಭಿಣಿಯರು ಯಾವೆಲ್ಲ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲಗಳಿರುವುದು ಸಾಮಾನ್ಯ. ಗರ್ಭಿಣಿಯರಲ್ಲಿ ಕೆಲವರಿಗೆ ರಕ್ತಹೀನತೆ ಬಹಳಷ್ಠಿರುತ್ತದೆ. ಅವರಿಗೆ ಕ್ಯಾಲ್ಶಿಯಂ, ಐರನ್ ಮಾತ್ರೆಗಳನ್ನು ನೀಡಲಾಗುತ್ತದೆ. ಪ್ರಾರಂಭದ 3 ತಿಂಗಳು ವಾಂತಿ, ರುಚಿಯಲ್ಲಿ ಬದಲಾವಣೆಯಾಗುವಂತಹ ಲಕ್ಷಣಗಳು ಕಂಡು ಬರುತ್ತದೆ. ಗರ್ಭಿಣಿಯರಿಗೆ ಹೆಚ್ಚಾಗಿ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡುತ್ತೇವೆ.
ಪ್ರೋಟೀನ್ ಪೌಡರ್ ಹೆಚ್ಚಾಗಿ ನೀಡಲಾಗುತ್ತದೆ. ಒಂದು ವೇಳೆ ಜ್ವರ ಬಂದಲ್ಲಿ ವೈದ್ಯರ ಬಳಿ ತೆರಳಿ ಸಲಹೆಯನ್ನು ಪಡೆಯಬೇಕೇ ವಿನಾ ನಾವೇ ವೈದ್ಯರಾಗಲು ಪ್ರಯತ್ನಿಸಬಾರದು.

Tags: abortion-pillsDr Ashwini PaiHealthHealth TipsKannada NewsPregnantpregnant womanSubbaiah Medical College Shivamoggaಆರೋಗ್ಯಗರ್ಭ ನಿರೋಧಕ ಮಾತ್ರೆಗರ್ಭದಾರಣೆಗರ್ಭಿಣಿಡಾ.ಅಶ್ವಿನಿ ಪೈಮಾತ್ರೆ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಅನ್ಯಾಯದ ವಿರುದ್ಧ ಮಾತಿನ ಚಾಟಿ ಬೀಸಿದ್ದ ಹಿರಣ್ಣಯ್ಯ

Next Post

ನಮ್ಮ ಅವಧಿಯಲ್ಲೂ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು: ಕಾಂಗ್ರೆಸ್ ಮಾಹಿತಿ ಬಿಡುಗಡೆ

kalpa News

kalpa News

Next Post
ನಮ್ಮ ಅವಧಿಯಲ್ಲೂ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು: ಕಾಂಗ್ರೆಸ್ ಮಾಹಿತಿ ಬಿಡುಗಡೆ

ನಮ್ಮ ಅವಧಿಯಲ್ಲೂ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು: ಕಾಂಗ್ರೆಸ್ ಮಾಹಿತಿ ಬಿಡುಗಡೆ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL