ನವದೆಹಲಿ: ಒಂದೆಡೆ ಲೋಕಸಭಾ ಚುನಾವಣೆಯ ಐದನೆಯ ಹಂತದ ಮತದಾನದಲ್ಲಿ ದೇಶವಿದ್ದರೆ, ಇನ್ನೊಂದೆಡೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾಜಿ ಯೋಧನೊಬ್ಬನು 50 ಕೋಟಿ ರೂ. ಸುಪಾರಿ ಕೇಳಿದ್ದಾರೆ ಎಂಬ ವಿಚಾರ ಈಗ ಭಾರೀ ಆತಂಕ ಸೃಷ್ಠಿಸಿದೆ.
ಸೇನೆಯಲ್ಲಿ ಯೋಧರಿಗೆ ಊಟ ಸರಿಯಾಗಿಲ್ಲ ಎಂಬ ವೀಡಿಯೋ ಮಾಡಿ ವೈರಲ್ ಮಾಡಿದ್ದ ಹಾಗೂ ಪ್ರಸ್ತುತ ವಾರಣಾಸಿಯಿಂದ ಎಸ್’ಪಿ ಅಭ್ಯರ್ಥಿಯಾಗಿ ಮೋದಿ ವಿರುದ್ಧ ಕಣಕ್ಕಿಳಿದಿರುವ ಮಾಜಿ ಯೋಧ ತೇಜ್ ಬಹದ್ದೂರ್ ಇಂತಹ ಸುಪಾರಿ ಕೇಳಿರುವ ವ್ಯಕ್ತಿ ಎಂದು ಹೇಳಲಾಗಿದೆ.
ಈ ಕುರಿತಂತೆ ವೀಡಿಯೋವೊಂದು ವೈರಲ್ ಆಗಿದ್ದು, ನನಗೆ 50 ಕೋಟಿ ರೂ. ಕೊಟ್ಟರೆ ಮೋದಿಯನ್ನು ಹತ್ಯೆ ಮಾಡುತ್ತೇನೆ ಎಂದು ವೀಡಿಯೋದಲ್ಲಿರುವ ವ್ಯಕ್ತಿ ಮಾತನಾಡಿರುವುದು ಸ್ಪಷ್ಟವಾಗಿದೆ.
This is the man MahaGathBandhan pit against @narendramodi – He allegedly wants to have Modi killed! Recently PM alluded to this! If this is true, I'm shocked at the lack of outrage & media attention! Should there not be a probe into the veracity if video & conspiracy if any pic.twitter.com/1Coiz46TzX
— Shehzad Jai Hind (@Shehzad_Ind) May 6, 2019
ಆದರೆ, ಈ ವೀಡಿಯೋ ಸಂಪೂರ್ಣ ಸ್ಪಷ್ಟವಾಗಿಲ್ಲದ ಕಾರಣ, ಇದರಲ್ಲಿ ಮಾತನಾಡಿರುವುದು ತೇಜ್ ಬಹದ್ದೂರ್ ಹೌದೋ, ಅಲ್ಲವೋ ಎಂಬ ಗೊಂದಲಗಳಿವೆ.
ಆದರೆ, ದೇಶದ ಪ್ರಜೆಯೊಬ್ಬನು ಪ್ರಧಾನಿಯವರನ್ನೇ ಕೊಲ್ಲಲು ಸುಪಾರಿ ಕೇಳುವ ಮಟ್ಟಕ್ಕೆ ಮಾತನಾಡುತ್ತಾರೆ ಎಂದರೆ, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಇನ್ನು, ಈ ವೀಡಿಯೋ ಕುರಿತಾಗಿ ತೇಜ್ ಬಹದ್ದೂರ್ ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈ ವಿಡಿಯೋವನ್ನು ತಿರುಚಲಾಗಿದ್ದು, ಇದನ್ನು ಎಡಿಟ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವುದು ತಾನೇ. ಈ ವಿಡಿಯೋವನ್ನು ನನಗೇ ಗೊತ್ತಿಲ್ಲದೆ 2017ರಲ್ಲಿ ಮಾಡಲಾಗಿತ್ತು. ನಾನು ಸೈನಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿದ್ದೆ. ಆದರೆ ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಹತ್ಯೆಯ ಬಗ್ಗೆ ಮಾತನಾಡಿರಲಿಲ್ಲ. ಇದು ವಾಸ್ತವಕ್ಕೆ ದೂರವಾದುದು ಎಂದಿದ್ದಾರೆ.
Discussion about this post